ಲಿಬಿಯಾದಲ್ಲಿ ಸೋಂಕಿತರ 800 ಕ್ಕೆ ಏರಿಕೆ

ಟ್ರಿಪೋಲಿ, ಜೂನ್ 30:  ಲಿಬಿಯಾದಲ್ಲಿ  ಮಂಗಳವಾರ 40 ಹೊಸದಾಗಿ ಕರೋನ ಸೋಂಕು ಪ್ರಕರಣ ವರದಿಯಾಗಿದ್ದು,  ಈ ವರೆಗೆ ಸೋಂಕಿತರ  ಸಂಖ್ಯೆ  802 ಕ್ಕೆ ಏರಿಕೆಯಾಗಿದೆ  ಎಂದುರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹೇಳಿದೆ. ಇದರ ಜೊತೆಗೆ , 206 ಜನರು ಚೇತರಿಸಿಕೊಂಡಿದ್ದು,  23 ಜನರು ಮೃತಪಟ್ಟಿದ್ದಾರೆ. ಸ್ವೀಕರಿಸಿದ 704 ಮಾದರಿಗಳಲ್ಲಿ 664  ಪ್ರಕಣರಗಳು ನೆಗೆಟಿವ್ ಆಗಿದ್ದರೆ  40 ಪ್ರಕರಣಗಳಲ್ಲಿ  ಸೋಂಕು  ಇರುವುದು  ಖಚಿತವಾಗಿದೆ ಎಂದು  ಕೇಂದ್ರವು ಮಂಗಳವಾರ ಮುಂಚಿನ ಹೇಳಿಕೆಯಲ್ಲಿ ತಿಳಿಸಿದೆ.ದೇಶದಲ್ಲಿ ಕೋವಿಡ್  -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ಲಿಬಿಯಾದ ಅಧಿಕಾರಿಗಳು ದೇಶದ ಗಡಿ, ಶಾಲೆಗಳು ಮತ್ತು ಮಸೀದಿಗಳನ್ನು ಮುಚ್ಚಿದ್ದಾರೆ, ಸಾರ್ವಜನಿಕ ಕೂಟಗಳನ್ನು ನಿಷೇಧಿಸಿ,  ಮತ್ತು ಕರ್ಫ್ಯೂ ಜಾರಿ ಮಾಡಿದ್ದಾರೆ. ಲಿಬಿಯಾದಲ್ಲಿ ಮೊದಲ ಕರೋನ ಸೋಂಕಿನ ಪ್ರಕರಣ  ಮಾರ್ಚ್ನಲ್ಲಿ , ನಂತರ ಮತ್ತು ಮೊದಲ ಸಾವಿನ ಪ್ರಕರಣ  ಏಪ್ರಿಲ್ ನಲ್ಲಿ  ಸಂಭವಿಸಿತ್ತು.