ಪೆರುವಿನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆ

ಲಿಮಾ, ಮಾರ್ಚ್ 26, ಪೆರುವಿನಲ್ಲಿ ಗುರುವಾರದಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾದ್ದು ಒಟ್ಟು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಈವರೆಗೆ ಪೆರುವಿನಲ್ಲಿ 480 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಗುರುವಾರ ಕೊವಿಡ್ 19 ಸೋಂಕಿಗೆ ಬಲಿಯಾಗಿದ್ದು 76 ವರ್ಷದ ಮೆಕ್ಸಿಕನ್ ವ್ಯಕ್ತಿ. ಆ ವ್ಯಕ್ತಿಗೆ ಸಕ್ಕರೆ ಕಾಯಿಲೆ ಸೇರಿದಂತೆ ಇತರ ಅನಾರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಮತ್ತೊಬ್ಬ ವ್ಯಕ್ತಿ 94 ವರ್ಷದ ಪೆರುವಿನ ನಾಗರಿಕರಾಗಿದ್ದು ಅವರೂ ಕೂಡ ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಸೋಂಕು ನಿಗ್ರಹ ಸಂಬಂಧ ಪೆರುವಿನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಮಾರ್ಚ್ 30 ರವರೆಗೆ ರಾತ್ರಿ 8 ರಿಂದ ಬೆಳಗ್ಗೆ 5 ವರೆಗೆ ಸರ್ಕಾರ ಕರ್ಫ್ಯೂ ವಿಧಿಸಿದೆ.ಅಲ್ಲದೇ ಕೆಲವು ಪ್ರಯಾಣ ನಿರ್ಬಂಧ ಮತ್ತು ಜನರ ಪರಸ್ಪರ ಸಂಪರ್ಕಗಳ ಮೇಲೆ ನಿರ್ಬಂಧ ಹೇರಿದೆ.