ಬೆಂಗಳೂರು, ಏ 6, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದೊಂದು ದಿನದಲ್ಲಿ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೇರಿಕೆಯಾಗಿದೆ. ಬೆಂಗಳೂರಿನ 32 ವರ್ಷದ ಯುವಕ, ಕೇರಳದ 62 ವರ್ಷದ ಮಹಿಳೆ, ಮೈಸೂರಿನ 7 ಮಂದಿಯಲ್ಲಿ ಮತ್ತು ಬಾಗಲಕೋಟೆಯಲ್ಲಿ ಇಬ್ಬರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಸರ್ಕಾರ ಹಾಸನದ ವೈದ್ಯಕೀಯ ಸಂಸ್ಥೆ, ಮೈಸೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ ಕಮಾಂಡ್ ಆಸ್ಪತ್ರೆ, ವೈದ್ಯಕೀಯ ವಿಜ್ಞಾನಮತ್ತು ಸಂಶೋಧನಾ ಸಂಸ್ಥೆ, ರಾಷ್ಟ್ರೀಯ ಸೂಕ್ಷ್ಮಾಣು ರೋಗ ಸಂಸ್ಥೆ, ಕಲಬುರಗಿ, ಬಳ್ಳಾರಿ, ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳಲ್ಲಿ 10 ಪ್ರಯೋಗಾಲಯಗಳನ್ನು ಕೋವಿಡ್-19 ಪರೀಕ್ಷೆಗಾಗಿ ಗುರುತಿಸಲಾಗಿದೆ.