ರಾಯ್‌ಪುರ,
ಮಾರ್ಚ್ 31 , ಚತ್ತಿಸ್ ಗಡದಲ್ಲಿ 70 ಗಂಟೆಗಳ ನಂತರ ಒಂದು ಕೊರೊನಾ ಸೋಂಕು
ಪ್ರಕರಣ ದಾಖಲಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಸೋಂಕಿನ ಸಂಖ್ಯೆ 8 ಏರಿಕೆಯಾಗಿದೆ .8 ಕೊರೊನಾವೈರಸ್ ಸೋಂಕಿತ ರೋಗಿಗಳಲ್ಲಿ ನಾಲ್ವರು ಲಂಡನ್ ನಿಂದ ಬಂದವರಾಗಿದ್ದಾರೆ.
ರಾಜ್ಯ ಆರೋಗ್ಯ ಕಾರ್ಯದರ್ಶಿ ನಿಹರಿಕಾ ಬಾರಿಕ್ ಸಿಂಗ್ ಮಾತಾನಡಿ, ಬ್ರಿಟನ್ ಸೇರಿದಂತೆ
ವಿದೇಶದಿಂದ ಹಿಂದಿರುಗಿದ ಎಲ್ಲರನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ಸಂಪರ್ಕ ತಡೆಗೆ
ಒಳಪಡಿಸಬೇಕೆಂದು ತಿಳಿಸಿದ್ದಾರೆ. ಈ ನಡುವೆ ಕೊರೊನಾ ಸೋಂಕಿತರನ್ನು ಪತ್ತೆ ಪರೀಕ್ಷೆಯ
ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ
ಪ್ರಾರಂಭಿಸಿದೆ. ಇಲ್ಲಿಯವರೆಗೆ 580 ಶಂಕಿತ ಕೊರೊನಾವೈರಸ್ ಸೋಂಕಿತ ವ್ಯಕ್ತಿಗಳ
ಮಾದರಿಗಳನ್ನು ರಾಯ್‌ಪುರ ಮತ್ತು ಜಗದಾಲ್‌ಪುರ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದ್ದು
ಅವುಗಳ ಪೈಕಿ 573 ಪರೀಕ್ಷೆ ಪೂರ್ಣಗೊಂಡಿದೆ.ಕೊರೊನಾವೈರಸ್ ಸೋಂಕಿನ ಹರಡುವಿಕೆಯನ್ನು
ತಡೆಯಲು ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವ ವ್ಯಕ್ತಿಗಳನ್ನು ವಿಶೇಷವಾಗಿ ಅಮೆರಿಕ
ದಿಂದ ಬರುವ ಜನರನ್ನು ಕಡ್ಡಾಯ ಸ್ಕ್ರೀನಿಂಗ್ ವ್ಯಾಪ್ತಿಗೆ ತರಲಾಗಿದೆ