ಅಂಕಾರಾ, ಜೂನ್ 13, ಟರ್ಕಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1,1959 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು , ಪರಿಣಾಮ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 175,218 ಕ್ಕೆ ಏರಿಕೆಯಾಗಿದೆ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಹೇಳಿದ್ದಾರೆ.ಇಂದು, 1,195 ಹೊಸ ಕರೋನ ಪ್ರಕರಣಗಳು ಪತ್ತೆಯಾಗಿದೆ. 24 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಸಹ 4,778 ಏರಿಕೆಯಾಗಿದೆ ಎಂದು ಸಚಿವರು ತಮ್ಮ ಟ್ವಿಟರ್ ಪುಟದಲ್ಲಿ ತಡವಾಗಿ ಬರೆದಿದ್ದಾರೆ.ಇದೇ ಅವಧಿಯಲ್ಲಿ ಚೇತರಿಕೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ 1,242 ರಿಂದ 149,102 ಕ್ಕೆ ಏರಿಕೆಯಾಗಿದೆ. ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಏಕಾಏಕಿ ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಇಲ್ಲಿಯವರೆಗೆ, ವಿಶ್ವಾದ್ಯಂತ ಸುಮಾರು 7.6 ದಶಲಕ್ಷ ಜನರು ಕರೋನ ಸೋಂಕಿಗೆ ಒಳಗಾಗಿದ್ದಾರೆ, 4 ಲಕ್ಷ 23,000 ಕ್ಕೂ ಹೆಚ್ಚು ಸಾವು-ನೋವುಗಳು ವರದಿಯಾಗಿದೆಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.