ಮೆಕ್ಸಿಕೊದಲ್ಲಿ 2 ಲಕ್ಷ ದಾಟಿದ ಸೋಂಕು ಪ್ರಕರಣಗಳ ಸಂಖ್ಯೆ

ಮೆಕ್ಸಿಕೊ ನಗರ, ಜೂನ್ 26, ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ 6,104 ಹೊಸ ಕರೋನ ಪ್ರಕರಣ ಖಚಿತವಾಗಿದೆ.  ಇದರಿಂದ ದೇಶದಲ್ಲಿ  ಈವರೆಗೆ ಒಟ್ಟು  ಸೋಂಕಿತ ಪ್ರಕರಣಗಳ ಸಂಖ್ಯೆ  2 ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಶುಕ್ರವಾರ ಹೇಳಿದ್ದಾರೆ.ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 736 ರಿಂದ 25,060 ಕ್ಕೆ ಏರಿದೆ ಎಂದು ಅವರು ಗುರುವಾರ  ಹೇಳಿದ್ದಾರೆ.ಈವರಗೆ  202,951 ಜನರಿಗೆ ಕರೋನ ಸೋಂಕುಪತ್ತೆ ಗೆ ಒಳಗಾಗಿದ್ದು ಅವರ ಪೈಕಿ  ದುರದೃಷ್ಟವಶಾತ್, 25,060 ಜನರು  ಸೋಂಕಿನಿಂದ ಸಾವನ್ನಪ್ಪಿದ್ದಾರೆ  ಎಂದು ಅಲೋಮಿಯಾ ದೂರದರ್ಶನದ ಭಾಷಣದಲ್ಲಿ ತಿಳಿಸಿದ್ದಾರೆ.