ಇಸ್ಲಾಮಾಬಾದ್, ಜೂನ್ 6,ಪಾಕಿಸ್ತಾನದಲ್ಲಿ ಕೊವಿಡ್ -19 ಸೋಂಕಿತರ ಸಾವಿನ ಸಂಖ್ಯೆ 1,935ಕ್ಕೆ ಮತ್ತು ದೃಢಪಟ್ಟ ಪ್ರಕರಣಗಳ ಸಂಖ್ಯೆ 93,983 ಕ್ಕೆ ಏರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಶನಿವಾರ ಬೆಳಿಗ್ಗೆ ನವೀಕರಿಸಿದ ಮಾಹಿತಿಯಲ್ಲಿ ತಿಳಿಸಲಾಗಿದೆ.ಕಳೆದ 24 ಗಂಟೆಗಳಲ್ಲಿ ಒಟ್ಟು 4,734 ಹೊಸ ಪ್ರಕರಣಗಳು ಮತ್ತು 97 ಸಾವುಗಳು ವರದಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.ಒಟ್ಟಾರೆ, 59,467 ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 32,581 ಜನರು ಚೇತರಿಸಿಕೊಂಡಿದ್ದಾರೆ.
ಇದು ಒಟ್ಟು ದೃಢಪಟ್ಟ ಪ್ರಕರಣಗಳಲ್ಲಿ ಶೇ 34.7ರಷ್ಟಾಗಿದೆ. ಪೂರ್ವ ಪಂಜಾಬ್ ಪ್ರಾಂತ್ಯವು 35,308 ಪ್ರಕರಣಗಳೊಂದಿಗೆ ಹೆಚ್ಚು ಪೀಡಿತ ಪ್ರದೇಶವಾಗಿದ್ದು, ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ 34,889 ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ.ವಾಯುವ್ಯ ಖೈಬರ್ ಫಖ್ತುಂಕ್ವಾ ಪ್ರಾಂತ್ಯದಲ್ಲಿ 12,459 ಪ್ರಕರಣಗಳು ಮತ್ತು 541 ಸಾವುಗಳು ವರದಿಯಾಗಿವೆ. ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕನಿಷ್ಠ 5,776 ಪ್ರಕರಣಗಳು ವರದಿಯಾಗಿದ್ದರೆ, ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 4,323 ಪ್ರಕರಣಗಳು ವರದಿಯಾಗಿವೆ.ಪಂಜಾಬ್ ಪ್ರಾಂತ್ಯದಲ್ಲಿ 659, ಸಿಂಧ್ 615 ಸಾವುಗಳು ವರದಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಪಾಕಿಸ್ತಾನ ಈವರೆಗೆ ಅಧಿಕೃತವಾಗಿ 6,60,508 ಪರೀಕ್ಷೆಗಳನ್ನು ನಡೆಸಿದೆ.ಪಾಕಿಸ್ತಾನ ಸರ್ಕಾರ ಕಾರ್ಮಿಕ ವರ್ಗ ಮತ್ತು ದೇಶದ ಬಡವರ ತೊಂದರೆಗಳನ್ನು ತಗ್ಗಿಸುವ ಉದ್ದೇಶದಿಂದ ಮೇ 9 ರಿಂದ ಲಾಕ್‌ಡೌನ್ ಅನ್ನು ಹಂತ-ಹಂತವಾಗಿ ಸಡಿಲಗೊಳಿಸಲು ಆರಂಭಿಸಿದೆ.