ವಾಶಿಂಗ್ಟನ್, ಜೂನ್ 22, ವಿಶ್ವದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪೀಡಿತರ ಸಂಖ್ಯೆ 90 ಲಕ್ಷದ ಸನಿಹ ತಲುಪಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ವಿಶ್ವದಲ್ಲಿ ಒಟ್ಟು 8,927,125 ಸೋಂಕಿತರಿದ್ದು, ಒಟ್ಟು 4,67,636 ಸಾವು ಸಂಭವಿಸಿವೆ.ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತರು ಹಾಗೂ ಸಾವು ಸಂಭವಿಸಿದ ರಾಷ್ಟ್ರದಲ್ಲಿ ಅಮೆರಿಕಗೆ ಅಗ್ರ ಸ್ಥಾನ. ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಸೋಂಕಿತರ ಲೆಕ್ಕಾಚಾರದಲ್ಲಿ ರಷ್ಯಾ ಮೂರನೇ ಸ್ಥಾನದಲ್ಲಿದೆ (5,83,879). ಮತ್ತು ಭಾರತ (4,10,461), ಇಂಗ್ಲೆಂಡ್ (305,803), ಪೆರು (2,51,338), ಸ್ಪೇನ್ (2,46,272), ಚಿಲಿ (2,42,355), ಇಟಲಿ (2,38,499), ಇರಾನ್ (2,04,952) ), ಫ್ರಾನ್ಸ್ (1,97,008), ಜರ್ಮನಿ (1,91,272), ಟರ್ಕಿ (1,87,685), ಮೆಕ್ಸಿಕೊ (1,80,545), ಪಾಕಿಸ್ತಾನ (1,76,617), ಸೌದಿ ಅರೇಬಿಯಾ (1,57,612), ಬಾಂಗ್ಲಾದೇಶ (1,12,306) ಮತ್ತು ಕೆನಡಾ (1,03,078) ನಂತರದ ಸ್ಥಾನದಲ್ಲಿದೆ.