ಮೆಕ್ಸಿಕೊ, ಮೇ 18,ಕಳೆದ 24 ಗಂಟೆಗಳಲ್ಲಿ ಮೆಕ್ಸಿಕೊದಲ್ಲಿ ಕೊರೊನಾ ವೈರಸ್ ಪ್ರಕರಣ ಸಂಖ್ಯೆ 2.075 ಆಗಿದ್ದು, ಒಟ್ಟು ಪೀಡಿತರ ಸಂಖ್ಯೆ 49,219ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಫೆಬ್ರವರಿ 28 ರಂದು ಮೊದಲ ಪ್ರಕರಣ ವರದಿಯಾಗಿತ್ತು. ಮೊದಲು ಸೋಂಕು ಕಾಣಿಸಿಕೊಂಡ ದಿನದಿಂದ ಮೆಕ್ಸಿಕೊದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ವಾಗುತ್ತಿದೆ. ಕಳೆದ ದಿನಗಳಲ್ಲಿ ಈ ವೈರಸ್ ನಿಂದ ಬಳಲಿದವರ ಸಂಖ್ಯೆ 11,105ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಹ್ಯೂಗೊ ಲೋಪೆಜ್ ಗಟೆಲ್ ಭಾನುವಾರ ತಿಳಿಸಿದ್ದಾರೆ. ಇನ್ನು ಮೆಕ್ಸಿಕೊದಲ್ಲಿ ಈ ಮಹಾಮಾರಿಯಿಂದ ಸತ್ತವರ ಸಂಖ್ಯೆ ಭಾನುವಾರ 132. ಒಟ್ಟು ದೇಶದಲ್ಲಿ ಕೊರೊನಾದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 5,177ಕ್ಕೆ ಏರಿದೆ. ಶುಕ್ರವಾರ ಮೆಕ್ಸಿಕೊದಲ್ಲಿ 2,437 ಕೊರೊನಾ ಪ್ರಕರಣ ದಾಖಲಾಗಿದ್ದವು. ಇದು ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಪ್ರಕರಣವಾಗಿತ್ತು. ಕೋವಿಡ್-19 ನಿಂದ ಪ್ರಭಾವಿತವಲ್ಲದ ಪ್ರದೇಶಗಳಲ್ಲಿ ಮತ್ತು ಮೇ 30 ರಿಂದ ದೇಶದ ಉಳಿದ ಭಾಗಗಳಲ್ಲಿ ಲಾಕ್ ಡೌನ್ ತೆಗೆದು ಹಾಕುವ ಬಗ್ಗೆ ಚಿಂತಿಸಲಾಗಿದೆ.