ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ನಿಶ್ಚಿತ: ಶಾಸಕ ಕಾಗೆ

Contest for DCC Bank elections certain: MLA Kage

ಡಿಸಿಸಿ ಬ್ಯಾಂಕ್ ಚುನಾವಣೆಗೆ ಸ್ಪರ್ಧೆ ನಿಶ್ಚಿತ: ಶಾಸಕ ಕಾಗೆ 

ಅಥಣಿ 05: ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಗೆ ನಿಶ್ಚಿತವಾಗಿಯೂ ನಾನು ಸ್ಪರ್ಧಿಸುವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.  

ಅವರು ಜಂಬಗಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.        ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನಂತರ ನಮ್ಮ ಗುಂಪಿಗೆ ಬಹುಮತ ಸಿಕ್ಕರೆ ಬ್ಯಾಂಕಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಕೂಡ ಹೌದು ಎನ್ನುವ ಮೂಲಕ ಚುನಾವಣೆ ಪೂರ್ವದಲ್ಲಿಯೇ ಅಧ್ಯಕ್ಷ ಸ್ಥಾನದ ಮೇಲೆ ಟಾವೆಲ್ಲ ಹಾಕಿದ್ದಾರೆ.      ರಾಜಕೀಯದಲ್ಲಿ ಪರ ವಿರೋಧ ಇದ್ದೇ ಇರುತ್ತದೆ ಆದರೆ ವ್ಯಯಕ್ತಿಕ ಟೀಕೆಗಳು ನಮ್ಮ ಸಂಬಂಧಗಳು ಹಳಸುತ್ತವೆ ಎಂದು ಪರೋಕ್ಷವಾಗಿ ಶಾಸಕ  ಬಸನಗೌಡ ಪಾಟೀಲ ಮತ್ತು ಸಚಿವ ಶಿವಾನಂದ ಪಾಟೀಲರ ಮಧ್ಯೆ ನಡೆಯುತ್ತಿರುವ ಮಾತಿನ ವಾಗ್ದಾಳಿಗೆ ಉತ್ತರಿಸಿದರು. 

      ಜಿ.ಪಂ ಅಧಿಕಾರಿ ಸೇರಿದಂತೆ ಜಂಬಗಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.