ದೇಶದಲ್ಲಿಯೇ ನಂಬರ 1 ಭ್ರಷ್ಟಾಚಾರ ಗೋಕಾಕದಲ್ಲಿ ನಡೆದಿದೆ

ಲೋಕದರ್ಶನ ವರದಿ

ಘಟಪ್ರಭಾ 24: ದೇಶದಲ್ಲಿಯೇ ನಂಬರ ಒನ್ ಭೃಷ್ಠಾಚಾರ ಗೋಕಾಕದಲ್ಲಿ ನಡೆದಿದೆ. ನಗರ ಸಭೆ ಮತ್ತು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಭೃಷ್ಠಾಚಾರ ನಡೆದ ಬಗ್ಗೆ ದಾಖಲೆಗಳ ಸಹಿತ ಶೀಘ್ರ ಬಹಿರಂಗ ಪಡಿಸುವುದಾಗಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. 

ಅವರು ಗುರುವಾರ ಸ್ಥಳೀಯ ಮಲ್ಲಾಪೂರ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಭೇಟ್ಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪರೀಶಿಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. 

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮಲ್ಲಾಪೂರ ಪ.ಪಂ ವ್ಯಾಪ್ತಿಯ ಕೆಲವೊಂದು ಕಾಮಗಾರಿಗಳಲ್ಲಿ ಭೃಷ್ಠಾಚಾರ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು ಅವುಗಳನ್ನು ಪರಿಶೀಲಿಸಲು ಬಂದಿದ್ದೇನೆ. ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಬೇಟ್ಟಿ ನೀಡಿ ಇಲ್ಲಿ ನಡೆದಿರುವ ಭೃಷ್ಠಾಚಾರವನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದರು. 

ತಾವು ಯಮಕನಮರಡಿ ಕ್ಷೇತ್ರದ ಶಾಸಕರಾಗಿ ಗೋಕಾಕ ಕ್ಷೇತ್ರದಲ್ಲಿನ ಪಂಚಾಯತಿಗಳಿಗೆ ಬೇಟ್ಟಿ ನೀಡಿ ದಾಖಲೆಗಳನ್ನು ಪರಿಶೀಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕನರ್ಾಟಕ ವಿಧಾನ ಸಭೆ ಸದಸ್ಯನಾಗಿದ್ದು, ರಾಜ್ಯದಲ್ಲಿ ಯಾವುದೆ ಭಾಗದಲ್ಲಿ ನಡೆಯುವ ಭೃಷ್ಠಾಚಾರದ ಬಗ್ಗೆ ಪ್ರಶ್ನಿಸುವ ಹಕ್ಕು ನನಗಿದೆ ಎಂದರು. 

ತಾವು ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಭೃಷ್ಠಾಚಾರ ನಡೆದಿರುವ ಬಗ್ಗೆ ಕೆಲವು ಆರೋಪಗಳು ಕೇಳಿಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅಲ್ಲಿ ನಡೆಯಲಾಗಿದೆ ಎನ್ನಲಾದ ಭೃಷ್ಠಾಚಾರದಲ್ಲಿ ಪಂಚಾಯತಿ ಸದಸ್ಯರ ಮೇಲೆ ಆರೋಪವಿದೆ ಶಾಸಕರ ಮೇಲೆ ಇಲ್ಲ. ಆದರೆ ಗೋಕಾಕ ಕ್ಷೇತ್ರದಲ್ಲಿ ನಡೆಯುತ್ತಿರುವ ಭೃಷ್ಠಾಚಾರದಲ್ಲಿ ನೇರವಾಗಿ ಶಾಸಕರು ಭಾಗಿಯಾಗಿದ್ದಾರೆ. ದೇಶದಲ್ಲಿ ನಂಬರ ಒನ್ ಭೃಷ್ಠಾಚಾರ ಗೋಕಾಕ ಕ್ಷೇತ್ರದಲ್ಲಿ ನಡೆದಿದೆ ಎಂದು ಆರೋಪಿಸಿದರು. 

ಅರಭಾಂವಿ ಕ್ಷೇತ್ರದಲ್ಲಿಯೂ ಬೃಷ್ಠಾಚಾರದ ದೂರುಗಳು ಬಂದರೆ ಅಲ್ಲಯೂ ಕೂಡಾ ಬೃಷ್ಠಾಚಾರದ ವಿರುದ್ಧ ಹೋರಾಟ ಮಾಡುತ್ತೇನೆ. ನೀತಿ ಸಂಹಿತೆ ಜಾರಿಯಾಗುವದರ ಒಳಗೆ ಗೋಕಾಕದಲ್ಲಿ ಒಂದು ಬೃಹತ್ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶವನ್ನು ಮಾಡಲಾಗುವುದು ಎಂದು ಹೇಳಿದರು.  

ಮಧ್ಯಾಹ್ಮ 3 ಗಂಟೆ ಸುಮಾರಿಗೆ ಪ.ಪಂ ಕಾರ್ಯಾಲಯಕ್ಕೆ ಆಗಮಿಸಿದ ಅವರು ಸುಮಾರು ಒಂದೂವರೆ ಗಂಟೆಕಾಲ ವಿವಿಧ ಕಾಮಗಾರಿಗಳಿಗೆ ಸಂಬಂದಿಸಿದ ದಾಖಲಾತಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರು ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಕರ ಅಹವಾಲುಗಳನ್ನು ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಬದಲ್ಲಿ ಕಾಂಗ್ರೇಸ್ ಕಾರ್ಯಕರ್ತರಾದ ಕುಮಾರ ಹುಕ್ಕೇರಿ, ಪುಟ್ಟು ಖಾನಾಪೂರೆ, ಪ್ರಕಾಶ ಡಾಂಗೆ, ಪ್ರಕಾಶ ಭಾಗೇವಾಡಿ, ಭರಮು ಗಾಡಿವಡ್ಡರ, ಈರಣ್ಣಾ ಸಂಗಮನವರ, ಮಾರುತಿ ಶಿಂಗಾರಿ, ನವೀನ ಹೊಮನಿ, ಅಪ್ಪಾ ಮುಲ್ಲಾ,  ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ಅಭಿಯಂತರಾದ ಎಂ.ಎಸ್.ತೇಲಿ, ಹಾಗೂ ಪ.ಪಂ ಸಿಬ್ಬಂದಿವರ್ಗದವರು ಇದ್ದರು.