ಮಕ್ಕಳ ವ್ಯಕ್ತಿತ್ವ ನಿಮರ್ಾಣಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ: ಸೀಮಿಕೇರಿ

ಲೋಕದರ್ಶನವರದಿ

ರಾಣೇಬೆನ್ನೂರ 26: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಅವರಲ್ಲಿ ಅಡಗಿರುವ ಆಂತರಿಕ ಪ್ರತಿಭೆ ಅಭಿವ್ಯಕ್ತತೆಗೆ ಬಿಡುವುದಿನ ಅವಧಿಯಲ್ಲಿ ಕ್ರೀಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಇಂತಹ ಬೇಸಿಗೆ ಸಂಭ್ರಮ ಶಿಬಿರಗಳ ಅವಶ್ಯಕತೆ ಇದೆ ಎಂದು ತಾಲೂಕಿನ ಚಿಕ್ಕಅರಳಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ  ಮಕ್ಕಳ ಬೇಸಿಗೆ ಶಿಬಿರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ  ಕ್ಷೇತ್ರ ಸಮನ್ವಯಾಧಿಕಾರಿ ಎಸ್.ವಿ.ಸೀಮಿಕೇರಿ ಹೇಳಿದರು. 

  ಶೈಕ್ಷಣಿಕ ವಿಷಯದಲ್ಲಿ ತಮ್ಮ ಪ್ರಗತಿಯ ಅಂಕಗಳು ಗಳಿಸಿದ ಮಾತ್ರಕ್ಕೆ ಸಮಗ್ರ ವ್ಯಕ್ತಿತ್ವ ವಿಕಾಸತೆ ಸಾಧ್ಯವಾಗಲಾರದು. ಅವರಲ್ಲಿ ಇರುವ ಸಾಂಸ್ಕೃತಿಕ ಪ್ರತಿಭೆಯನ್ನು ಹೊರಸೂಸಲು ಶಿಬಿರಗಳಿಂದ ಮಾತ್ರ ಸಾಧ್ಯವಿದೆ ಎಂದರು. 

ಸಕರ್ಾರ ಮತ್ತು ಶಿಕ್ಷಣ ಇಲಾಖೆ ಮಕ್ಕಳ ಮನೋವಿಕಾಸತೆಗೆ ಶಿಬಿರಗಳ ಅವಶ್ಯಕತೆ ಇರುವುದನ್ನು ಮನಗಂಡು ರಾಜ್ಯದ ಎಲ್ಲಾ ಕಡೆಯೂ ರಜಾ ಅವಧಿ ಈ ಸಂದರ್ಭದಲ್ಲಿ ಅವರ ವಿಕಾಸತೆಗಾಗಿ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಬಾಲ್ಯದಲ್ಲಿಯೇ ಅವರ ಪರಿಪೂರ್ಣತೆಗೆ ಸಹಕರಿಸುತ್ತಲಿದೆ ಎಂದರು.   

  ಪ್ರಾಸ್ತಾವಿಕವಾಗಿ ಮಾತನಾಡಿದ ಗುಡಿಹೊನ್ನತ್ತಿ ಸಿಆರ್ಪಿ ಲಕ್ಷ್ಮಣ ತೋಟದ ಅವರು ಶಿಬಿರವು ಸಕರ್ಾರದ ಮತ್ತು ಶಿಕ್ಷಣ ಇಲಾಖೆಯ ಮಹತ್ವದ ಯೋಜನೆ ಇದಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಫಾಲ್ಗೊಳ್ಳಬಹುದಾದ 6 ಮತ್ತು 7ನೇ ತರಗತಿಯ ವಿದ್ಯಾಥರ್ಿಗಳಿಗಾಗಿ ನಡೆಯಲಿದೆ. ಇದರಿಂದ ಶಾಲೆಯಲ್ಲಿ ಸಾಂಸ್ಕೃತಿಕ ವಾತಾವರಣದ ಮೂಲಕ ಭವಿಷ್ಯದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಲಿದೆ ಎಂದರು. 

ಸಮಾರಂಭದಲ್ಲಿ ಪ್ರಧಾನಗುರು ಎ.ಇ.ಬಾಗಲವರ, ಸಹಶಿಕ್ಷಕರಾದ ಅಣ್ಣಪ್ಪ ಎಸ್.ಜಿ, ಪಿ.ಎನ್.ಬೆಳವಗಿ, ಎಸ್ಡಿಎಂಸಿ ಅಧ್ಯಕ್ಷ ಸುರೇಶ ಬೂದಗಟ್ಟಿ, ಉಪಾಧ್ಯಕ್ಷ ಹನುಮಂತಪ್ಪ ಲಮಾಣಿ, ಸೋಮಣ್ಣ ಚಂದಾಪುರ, ರಾಮಣ್ಣ ರಡ್ಡೇರ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಅನೇಕ ಮುಖಂಡರು, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಕಳೆದ 24 ರಿಂದ ಆರಂಭಗೊಂಡಿರುವ ಬೇಸಿಗೆ ಶಿಬಿರ ಸಂಭ್ರಮವು ಬರುವ ಮೇ 29ರ ವರೆಗೆ ನಡೆಯಲಿದೆ.