ಲೋಕದರ್ಶನ ವರದಿ
ಯಲ್ಲಾಪುರ : ಅಭಿವೃದ್ಧಿಯ ಜೊತೆಗೆ ಪರಿಸರದ ಸಂರಕ್ಷಣೆಯೂ ಸಮಾನವಾಗಿ ನಡೆಸಿಕೊಂಡು ಹೋಗಬೇಕು. ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ಜಿ.ಭಟ್ಟ ಹೇಳಿದರು.
ತಾಲ್ಲೂಕಿನ ಇಡಗುಂದಿಯ ಸ್ನೇಹ ಸಾಗರ ವಸತಿಯಲ್ಲಿ ವನಮಹೋತ್ಸವದಲ್ಲಿ ಅವರು ಮಾತನಾಡಿದರು. ಮಕ್ಕಳೆಲ್ಲರು ಸೇರಿ ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ದತ್ತು ಸ್ವಿಕಾರವನ್ನು ಮಾಡಿ ಗಿಡಗಳ ಆರೈಕೆಯನ್ನು ಮಾಡಿದಾಗ ನಮಗೂ ಮುಂದಿನ ತಲೆಮಾರಿಗೆ ಅದರ ಫಲಸಿಗುತ್ತದೆ ಎಂದ ಅವರು ಗಿಡಗಳನ್ನು ಚೆನ್ನಾಗಿ ಬೆಳೆಸಿದ ಮಕ್ಕಳ ಸಸಿಗೆ ಬಹುಮಾನದ ರೂಪದಲ್ಲಿ 5000 ರೂ ಗಳನ್ನು ಮುಂದಿನ ವರ್ಷದ ವಿಶ್ವ ಪರಿಸರ ದಿನಾಚರಣೆಯಂದು ವೈಯಕ್ತಿಕವಾಗಿ ನೀಡಲಾಗುವುದು ಎಂದರು.
ಶಾಲೆಯ ಸುತ್ತ-ಮುತ್ತಲು ಸುಮಾರು 500 ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.
ಇಡಗುಂದಿ ವಲಯ ಅರಣ್ಯ ರಕ್ಷಣಾಧಿಕಾರಿ ಪ್ರಸಾದ್ ಪಡ್ನೇಕರ್ ಹಾಗೂ ಇಡಗುಂದಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವಿ. ಎನ್. ಭಟ್, ಶಾಲಾ ಅಧ್ಯಕ್ಷ ಎಸ್. ಎಲ್ ಭಟ್, ಶಾಲಾ ಕಾರ್ಯಕಾರಿ ನಿದರ್ೇಶಕಿ ವೀಣಾ ಭಟ್, ಪ್ರಾಂಶುಪಾಲೆ ಸುಶೀಲಾ ಕೆ. ಆರ್. ಉಪಪ್ರಾಂಶುಪಾಲ ಮಂಜುನಾಥ ವಿ. ಜಿ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗುರುದತ್ತ ಎಮ್. ಎಸ್. ಇದ್ದರು.
ಮಂಜುನಾಥ ವಿ. ಜಿ. ಸ್ವಾಗತಿಸಿದರು. ಗುಣರಂಜನ್ ನಿರೂಪಿಸಿದರು. ಸ್ವಾತಿ ವಂದಿಸಿದರು.