ಹುಕ್ಕೇರಿ 27: ಸರಕಾರದ ನಿರ್ದೇಶನದಂತೆ ಪಟ್ಟಣದಲ್ಲಿನ ಅನಧಿಕೃತ ಕಟ್ಟಡ, ನಿವೇಶನ ಅಧಿಕೃತಗೊಳಿಸಿಕೊಳ್ಳಲು ಇಲ್ಲಿನ ಪುರಸಭೆ ಇ ಖಾತಾ ದಾಖಲೆ ವಿತರಣೆಗೆ ಸೋಮವಾರ ಚಾಲನೆ ನೀಡಿದ್ದಾರೆ.
ಆದರೆ ಪುರಸಭೆ ಕಟ್ಟಡವೇ ಅನಧಿಕೃತವಾಗಿರುವ ಬಗ್ಗೆ ಜನ ಪ್ರಶ್ನಿಸುತ್ತಿರುವುದು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮುಜುಗರ ತರಿಸಿದೆ. 2013ರಲ್ಲಿ ಖಾಸಗಿ ಜಾಗ ವೊಂದರಲ್ಲಿ ಪುರಸಭೆ ಕಟ್ಟಡ ತಲೆ ಎತ್ತಿತ್ತು. ಆದರೆ, ಈ ಬಗ್ಗೆ ಪುರಸಭೆಯ ರಿಜಿಸ್ಟರ್‌ನಲ್ಲೇ ದಾಖಲಾಗಿಲ್ಲ. ಸಾರ್ವಜನಿಕರ ನೀರಿನ ಕರ, ಖಾಲಿ ನಿವೇಶನ, ಮನೆ ಕರ ಸೇರಿದಂತೆ ವಿವಿಧ ಕಟ್ಟಡಗಳ ನೋಂದಣಿಗೆ ಒತ್ತಡ ಹಾಕುತ್ತಾ, ಕೆಲವೊಮ್ಮೆ ದಂಡದ ಆಸೆ ಕೂಡ ಬಳಸುವ ಪುರಸಭೆ ಅಧಿಕಾರಿಗಳು, ಕನಿಷ್ಠಪಕ್ಷ ತಮ್ಮ ಕಟ್ಟಡವನ್ನೇ ನೋಂದಣಿ ಮಾಡಿಕೊಳ್ಳದಿರುವುದು ನಾಗರಿಕ ವಲಯದಲ್ಲಿ ತಮಾಷೆ ಎನಿಸಿದೆ.
ಎಸ್‌ಎಫ್‌ಸಿ, 13ನೇ ಹಣಕಾಸು ಯೋಜನೆ, ಶಾಸಕರು, ಸಂಸದರ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಂದ ಹಣ ಸೇರಿಸಿ ಕೋಟಿ ರೂ. ವೆಚ್ಚದಲ್ಲಿ 2012-13 ರಲ್ಲಿ ಪುರಸಭೆ ಕಟ್ಟಡ ಖಾಸಗಿ ಜಾಗದಲ್ಲಿದೆ. ನಿರ್ಮಿಸಲಾಗಿತ್ತು. ಆದರಿದು ಅಕ್ರಮವಾಗಿದ್ದು, ಈಗಾಗಲೇ 12 ವರ್ಷಗಳು ಕಳೆದಿದ್ದರೂ ಕಟ್ಟಡ ದಾಖಲಾಗಿಲ್ಲ, ಮೂಲ ಆಸ್ತಿ ಮಾಲೀಕರು ಒಂದು ವೇಳೆ ನ್ಯಾಯಾಲಯದ ಮೊರೆ ಹೋದಲ್ಲಿ ಕಟ್ಟಡವನ್ನು ಬಿಟ್ಟು ಕೊಡುವ ಪ್ರಸಂಗವೂ ಬರಬಹುದಾದ ಸಾಧ್ಯತೆಗಳ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
ಬಹಿರಂಗ ಕುಟುಕಿದ ಜನ ಸೋಮವಾರ ನಡೆದ ಇ- ಖಾತಾ ವಿತರಕ ಸಮಾರಂಭದಲ್ಲಿ ಹಲವರು ಪುರಸಭೆ ಕಟ್ಟಡದ ಪ್ರಸ್ತಾಪವೆತ್ತಿದ್ದರು. ’ನಮ್ಮ ಸಮಸ್ಯೆ ಬದಿಗಿರಲಿ, ಕನಿಷ್ಠ ಪಕ್ಷ ನಿಮ್ಮ ಕಟ್ಟಡವನ್ನಾದರೂ ನೋಂದಾಯಿಸಿಕೊಳ್ಳಿ’ ಎಂದು ಕೆಲವರು ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕುಟುಕಿದರು. ಇದು ಸ್ಥಳದಲ್ಲಿದ್ದ ಶಾಸಕರ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮುಜುಗರ ತರಿಸಿತು.
ಹುಕ್ಕೇರಿ ಪುರಸಭೆ ಕಟ್ಟಡ. ಖಾಸಗಿ ಜಮೀನಿನಲ್ಲಿ ಪುರಸಭೆ ನೂತನ ಕಟ್ಟಡ ಕಟ್ಟಿರುವ ವಿಷಯ ಗಮನಕ್ಕೆ ಬಂದಿಲ್ಲ. ಸರಕಾರದ ನಿಯಮನುಸಾರ ನೋಂದಾಯಿಸಲುಮುಖ್ಯಾಧಿಕಾರಿಗೆ ಸೂಚಿಸಲಾಗಿದೆ.- ನಿಖಿಲ್ ಕತ್ತಿ ಽ ಶಾಸಕ.ಪುರಸಭೆ ಕಟ್ಟಡ ನೋಂದಣಿ ಆಗದಿರುವುದನ್ನು ನಾನು ಗಮನಿಸಿಲ್ಲ, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕ್ಕೆಸೂಚಿಸಲಾಗುವುದು.
ಈಶ್ವರ ಸಿದ್ದಾಳ
ಽಪುರಸಭೆ ಮುಖ್ಯಾಧಿಕಾರಿ, ಹುಕ್ಕೇರಿ.
ಅಕ್ರಮವಾಗಿ ಖಾಸಗಿ ಅವರ ಜಾಗದಲ್ಲಿ ನಿರ್ಮಿಸಿದ ಪುರಸಭೆ ರಾಜ್ಯ ಸರಕಾರ ಬಿ ಖಾತಾ ಉತ್ತಾರದಲ್ಲಿ ನೊಂದಾಯಿಸಿಕೊಳ್ಳಬೇಕಾದರೆ ಸಪ್ಟಂಬರ 24 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು, ದಾನ ಪತ್ರ, ವಿಭಾಗ ಪತ್ರ, ಹಕ್ಕು ಖುಲಾಸೆ ಪತ್ರಗಳು ಪ್ರಸ್ತಕ ಸಾಲಿನಲ್ಲಿ ರುಣಭಾರ ಪತ್ರ ಇರಬೇಕು ಆದರೆ ಇದು ಯಾವುದೇ ನಿಯಮದಲ್ಲಿ ಬರದೇ ಇರುವುದರಿಂದ ಪುರಸಭೆ ಬಿ,ಇ, ಯಾವ ಖಾತಾದಲ್ಲಿ ದಾಖಲಾಗುತ್ತದೆ ?
ಬಸವರಾಜ ಕುರುಂದವಾಡೆ
ಸಮಾಜಿಕ ಕಾರ್ಯಕರ್ತ ಹುಕ್ಕೇರಿ