ಯರಗಟ್ಟಿಗೆ ಮುಖ್ಯ ರಸ್ತೆ ಮರೀಚಿಕೆ

ಲೋಕದರ್ಶನ ವರದಿ

ಸವದತ್ತಿ 11: ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಮ್ ಗ್ರಾಮದಿಂದ ಯರಗಟ್ಟಿಗೆ ಹೋಗುವ ಮುಖ್ಯ ರಸ್ತೆ ರೈನಾಪೂರ ಕ್ರಾಸದವರಗೆ ಆಮೇಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರು ಹಿಡಿಶ್ಯಾಪ ಹಾಕುತ್ತಿದ್ದಾರೆ.

ವಾಹನ ಸವಾರರು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದು ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದರಿಂದ ಬಸ್ ಸಂಚಾರ ಸ್ಥಳಿಗತಗೊಂಡಿದ್ದು ಪ್ರಯಾಣಿಕರಿಗೆ ಶಾಲಾ ವಿದ್ಯಾಥರ್ಿಗಳಿಗೆ ವ್ಯಾಪಾರ ಉದ್ಯೋಗಸ್ಥರಿಗೆ ತೀವೃ ಅಡಚನೆ ಉಂಟಾಗಿದ್ದು ಅಧಿಕಾರಿಗಳ ಹಾಗೂ ಗುತ್ತಿಗೆ ದಾರನ ನಿರ್ಲಕ್ಷವೂ ತಿಳಿಯದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆದಷ್ಟು ಬೇಗನೆ ರಸ್ತೆ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ, ವಿದ್ಯಾಥರ್ಿಗಳಿಗೆ ಅನೂಕೂಲ ಮಾಡಿಕೊಡಬೇಕೆಂದು ತಲ್ಲೂರ ಆಲದಕಟ್ಟಿ ಕೆ.ಎಮ್ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪ್ರವೀಣ ಚವಡಪ್ಪನವರ, ಫಕ್ಕೀರಪ್ಪ ಸಣ್ಣಗೌಡರ, ಉಮೇಶ ಹಳೆಮನಿ, ಸಿದ್ರಾಮ ಪವಾಡೆಪ್ಪನವರ, ಅಜೀಜ್ ನಧಾಪ್, ಯಲ್ಲಪ್ಪ ಹಲಗಲಿ, ಮಹೇಶ ಚವಡಪ್ಪನವರ, ಬಸವರಾಜ ಯರಗಟ್ಟಿ, ಸಂಜಯ್ಯ ಶಿವಪೂಜಿ, ನವಿನ ಹೂಸಮಠ, ಬಸವರಾಜ ನಾಗನೂರ, ಸಂತೋಷ ಶಿವಪೂಜಿ ಮುಂತಾದವರು.