ಲೋಕದರ್ಶನ
ವರದಿ
ಕುಮಟಾ 20 : ದೀನ ದಲಿತರ ಬಡ
ಬಗ್ಗರನ್ನು ಗುರುತಿಸಿ ಸಹಾಯ ಸಲ್ಲಿಸುವುದು ಸಮಾಜಕ್ಕೆ
ಅವಶ್ಯವಿರುವ ಅಗತ್ಯತೆಯನ್ನು ಪೂರೈಸುವಲ್ಲಿ ಸಹಾಯ ಸಲ್ಲಿಸುವುದು ಲಾಯನ್ಸ್
ಕ್ಲಬ್ನ ಮುಖ್ಯ ಉದ್ದೇಶವಾಗಿದ್ದು,ಲಾಯನ್ಸ್ ಧೈಯೋಧ್ಧೇಶಗಳನ್ನು ಚಾಚೂ ತಪ್ಪದೇ ಪಾಲಿಸಿ
ಜನಸೇವೆಗೆ ಜೀವವನ್ನೇ ಮುಡುಪಾಗಿಟ್ಟವರೇ ಸ್ಥಾಪಕ ಸದಸ್ಯರಾದ ಜೀವೋತ್ತಮ ನಾಯಕ ಹಾಗೂ ವಸಂತ
ಪ್ರಭುರವರಾಗಿದ್ದಾರೆ.
1976ರಲ್ಲಿ ಹೊನ್ನಾವರದಲ್ಲಿ ಲಾಯನ್ಸ್ ಕ್ಲಬ್ ಸ್ಥಾಪನೆಯಾಗಿ ಇಂದಿಗೆ 42 ವರ್ಷ ಸಂದಿದೆ. ಸಿರಸಿಯ
ಲಾಯನ್ಸ್ ಕ್ಲಬ್ನ ಪ್ರಾಯೋಜಕತ್ವದಲ್ಲಿ ಈ ಕ್ಲಬ್ ಸ್ಥಾಪನೆಯಾಗಿದೆ
ಲಾಯನ್ಸ್ ಕ್ಲಬ್ ಹೊನ್ನಾವರದಲ್ಲಿ ಸ್ಥಾಪಿಸುವಲ್ಲಿ ಅವಿರತ ಪ್ರಯತ್ನ ಪಟ್ಟವರೇ ಜಿವೋತ್ತಮ ನಾಯಕ ಹಾಗೂ ವಸಂತ
ಪ್ರಭುರವರಾಗಿದ್ದಾರೆ. ಅಂದಿನಿಂದ ಇಂದಿನವರೆಗೆ ಸುದೀರ್ಘ ಸೇವೆ ಸಲ್ಲಿಸಿರುವ ಇವರಿಬ್ಬರೂ
ಸ್ಥಾಪಕ ಸದಸ್ಯತ್ವ ಪಡೆದು ಅನೇಕ ಜನೋಪಯೋಗಿ ಕೆಲಸಗಳಲ್ಲಿ
ತೊಡಗಿಸಿಕೊಂಡಿದ್ದಾರೆ. ಅಂದು ಇವರಿರ್ವರು ಮಾಡಿದ
ಜನೋಪಯೋಗಿ ಕೆಲಸಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.
ಅಂದು ಸರಕಾರಿ ಆಸ್ಪತ್ರೆಯೆಂದರೆ
ಕಡು ಬಡವರ ಆಸ್ಪತ್ರೆಯೆಂದು ಪ್ರಚಲಿತವಾಗಿತ್ತು
ಯಾಕೆಂದರೆ ಆಗ ಸರಕಾರಿ ಆಸ್ಪತ್ರೆಯಲ್ಲಿ
ಅನೇಕ ಸಲಕರಣೆಗಳ ಕೊರತೆ ಎದುರಾಗಿತ್ತು. ಅಂತಹ ಸಂಧರ್ಬದಲ್ಲಿ ಸರಕಾರಿ
ಆಸ್ಪತ್ರೆಯ ಬಾಳಂತಿಯರ ವಿಭಾಗವನ್ನು ಮೇಲ್ದಜರ್ೆಗೆ ಏರಿಸುವುದು ಆಪರೇಷನ್ ಕೋಣೆಗೆ ಬೇಕಾದ ಸಲಕರಣೆ ಒದಗಿಸುವುದು ಮುಂತಾದ ಮಹೊನ್ನತ ಕಾರ್ಯ ಈ ಕ್ಲಬ್ನಿಂದಾಗಿದೆ.
ಅಲ್ಲದೇ ಶರಾವತಿ ನದಿಯಿಂದ ದೋಣಿಯಲ್ಲಿ ಪ್ರಯಾಣಿಸಿ ಬರುವ ರೋಗಿಗಳು, ವೃದ್ದರು
ಆಸ್ಪತ್ರೆಗೆ ತಲುಪಲು ಎರಡು ಕಿ.ಮಿ.
ಸುತ್ತಾಡಿ ಪ್ರಯಾಸ ಪಡಬೇಕಾಗಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗುಡ್ಡವನ್ನು ಹತ್ತಿಳಿಯಲು ಮೆಟ್ಟಿಲುಗಳನ್ನು ನಿಮರ್ಿಸಿ ಸಲೀಸಾಗಿ ದಾರಿ ಮಾಡಿಕೊಟ್ಟದ್ದು ಜನ
ಇಂದಿಗೂ ನೆನೆಯುವಂತೆ ಮಾಡಿದೆ. ಇದರ ಜೊತೆಗೆ ಬಡಜನತೆಯಿರುವ
ಗ್ರಾಮೀಣ ಪ್ರದೇಶ ಗುರುತಿಸಿ ಅಲ್ಲಿ ಪ್ರತಿ ವರ್ಷ ಕಣ್ಣಿನ ಕ್ಯಾಂಪ್
ನಡೆಸಿ ಕಣ್ಣಿನ ಪೊರೆ ತೆಗೆದು ಆಯೋವೆಲ್
ಅಳವಡಿಸುವ ಶಸ್ತ್ರ ಚಿಕಿತ್ಸೆ ಉಚಿತವಾಗಿ ನಡೆಸಿಕೊಟ್ಟು, ಬ್ಲಡ್ ಬ್ಯಾಂಕ್, ರಕ್ತ ಸಂಗ್ರಹ ಶಿಬಿರ
ಡಯಾಬಿಟಿಸ್ ಜಾಗೃತ ಶಿಬಿರ ದಂತ ಚಿಕಿತ್ಸಾ ಶಿಬಿರಗಳನ್ನು
ನಡೆಸಿ ಬಡಜನರಿಗೆ ಉಚಿತ ವೈದ್ಯಕೀಯ ಸೇವೆ
ಸಲ್ಲಿಸಲಾಗುತ್ತಿದೆ.
ಆಗ ಶಿಕ್ಷಣ ಕಲಿಯುವುದೇ
ದುಸ್ತರ ವಾದ ಸಮಯ ಶಾಲೆಗೆ
ದ್ವಜ ಕಂಬ, ಮಕ್ಕಳಿಗೆ ಕುಳಿತುಕೊಳ್ಳಲು
ಆಸನದ ವ್ಯವಸ್ಥೆ ಕಲ್ಪಿಸಿದ್ದಾರೆ. ಬಡಮಕ್ಕಳಿಗೆ ಪಾದರಕ್ಷೆ ಛತ್ರಿ ನೀಡುವ ಮೂಲಕ ಶಿಕ್ಷಕರನ್ನು ಪ್ರೊತ್ಸಾಹಿಸಲು
ಶಿಕ್ಷಕರ ದಿನವನ್ನು ಅತ್ಯಂತ ಮಹತ್ವದ ದಿನವನ್ನಾಗಿ ಆಚರಿಸುವ ಮೂಲಕ ನಿವೃತ್ತ ಹಾಗೂ
ಉತ್ತಮ ಶಿಕ್ಪ್ಷಕರಿಗೆ ಗೌರವಿಸುವ ಸಂಪ್ರದಾಯ ಇಂದಿಗೂ ಮೆಚ್ಚುಗೆ ಪಡೆದುಕೊಂಡಿದೆ. ಈವರೆಗೆ 8 ಬಸ್ ಸೆಲ್ಟರ್, 1 ಕೋಟಿ
ರೂ. ಮೌಲ್ಯದ ಕಟ್ಟಡ ಸರಕಾರಿ ಜ್ಯೂನಿಯರ್ ಕಾಲೇಜು ಹಾಗೂ ಸಿನಿಯರ್ ಕಾಲೆಜಿಗೆ
ಉಚಿತವಾಗಿ ನೀಡಿದ್ದು ಗಮನಾರ್ಹವಾಗಿದೆ.
ರಾಷ್ಟ್ರಪ್ರಶಸ್ತಿ
ವಿಜೇತರಾದ ನಿವೃತ್ತ ಪ್ರಾಂಶುಪಾಲ ಲಾಯನ್ ಎಸ್ ಜೆ ಕೈರಾನ್
ಹಾಗೂ ಆರ್ ಡಿ ನಾಯ್ಕ
ಉತ್ತಮ ಸೇವೆ ಸಲ್ಲಿಸಿದವರಾಗಿದ್ದಾರೆ. ಆರ್ ಡಿ
ನಾಯ್ಕರ ಅಕಾಲಿಕ ನಿಧನದಿಂದಾಗಿ ಲಾಯನ್ ಬಳಗಕ್ಕೆ ತುಂಬಾ ಹಾನಿಯಾಗಿದೆ ಎಂದು ವಸಂತ ಪ್ರಭು,
ಜಿವೋತ್ತಮ ನಾಯಕ ಅವರ ಸೇವೆ
ಇಂದಿಗೂ ನೆನೆಯುತ್ತಾರೆ. ಈ ವರ್ಷದ ಲಾಯನ್
ಅಧ್ಯಕ್ಷರಾಗಿ ರಾಜೇಶ ಸಾಲೇ ಹಿತ್ತಲ್, ಲಾಯನ್
ಕಾರ್ಯಧಶರ್ಿಯಾಗಿ ಪ್ರೋ
ಎಸ್ ಸುರೇಶ ಹಾಗೂ ಖಜಾಂಚಿಯಾಗಿ ಯೋಗೆಶ
ರಾಯ್ಕರ್ ಉತ್ತಮ ಸೇವೆ ನೀಡುತ್ತಿದ್ದು, ಆಸ್ಪತ್ರೆಗೆ
ಡಯಾಲಿಸ್ ಯಂತ್ರ ಪುರಸಭೆ ಕಾಯರ್ಾಲಯಕ್ಕೆ ಸ್ವಚ್ಛತೆ ಕುರಿತಂತ ಸಾರಿಗೆ ವಾಹನ ನೀಡುವ ಧೈಯ
ಹೊಂದಿದ್ದಾರೆ. ಮಾಜಿ ಶಾಸಕರಾದ ಎಂ
ಪಿ ಕಕರ್ಿ, ಎಸ್ ವಿ ನಾಯ್ಕ,
ಮಾಚಿ ಸಚಿವ ಆರ್ ಎನ್
ನಾಯ್ಕ ಹಾಗೂ ಜನ ಪ್ರತಿನಿಧಿಗಳಾದ
ಡಾ ಭಾಸ್ಕರ, ಎಸ್ ಎಂ ಪೈ,
ಪ್ರಿನ್ಸಿಪಾಲ್ ಎನ್ ಆರ್ ನಾಯ್ಕ,
ಪತ್ರಿಕಾ ಪ್ರತಿನಿಧಿ ಜಿ ವಿ ಭಟ್ಟ
ಮುಂತಾದವರು ಬಹಳಷ್ಟು ಕಾಲ ಕ್ಲಬ್ ನಲ್ಲಿ
ಸೇವೆ ಸಲ್ಲಿಸಿದ್ದವರಾಗಿದ್ದಾರೆ. ಅಲ್ಲದೇ ಸ್ವಚ್ಛತೆ ಹಾಗೂ ಪರಿಸರ ರಕ್ಷಣೆಗೆ
ಹೆಚ್ಚಿನ ಒತ್ತು ನೀಡಿದ ಇವರು ಹೊನ್ನಾವರದಲ್ಲಿ ಪ್ರತಿ
ವರ್ಷ ಬೀಚನಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರ ಕಸ ಕಡ್ಡಿಗಳನ್ನು
ತೆಗೆದು ಸ್ವಚ್ಛಗೊಳಿಸಿ ವಿವಿಧ ಸಂಘಟಣೆಯೊಂದಿಗೆ ಕೈಜೊಡಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಿದಲ್ಲದೇ ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತೂ ನೀಡಿ ಆಸ್ಪತ್ರೆ, ಶಾಲೆ,
ರೇಲ್ವೇ ಸ್ಟೇಶನ್ ಮುಂತಾದ ಕಡೆ ಗಿಡ ನೆಡುವುದರ
ಮೂಲಕ ಮಹತ್ವದ ಹೆಜ್ಜೆ ಜನ ಇಂದಿಗೂ ನೆನೆಯುವಂತೆ
ಮಾಡಿದೆ.
1982 ಹಾಗೂ
2007ನೇ ಸಾಲಿನಲ್ಲಿ ಶರಾವತಿ ನದಿಗೆ ನೆರೆ ಬಂದಾಗ ಮಕ್ಕಳಿಗೆ
ಹಾಗೂ ಪಾಲಕ್ಪರಿಗೆ ವಸ್ತ್ರ, 8 ದಿನಕ್ಕೆ ಬೇಕಾಗುವಷ್ಟು ದವಸ ದಾನ್ಯ ಅಡಿಗೆಗೆ
ಬೇಕಾಗುವ ಪರಿಕರ ನೀಡಿದಲ್ಲದೇ ನೆರೆ ಬಂದ ಸಮಯ
ಗೇರುಸೊಪ್ಪ, ಮಾವಿನಕೂರ್ವ ದಲ್ಲಿ ಇಬ್ಬರಿಗೆ ಮನೆ ನಿಮರ್ಿಸಿ ದೋಣಿ
ಇಲ್ಲದ ಕಡೆ ದೋಣಿಯನ್ನು ನೀಡಿ
ಮಹತ್ತರವಾದ ಕೆಲಸ ಮಾಡಿದ ಕೀತರ್ಿ
ಇವರಿರ್ವರಿಗೆ ಸಲ್ಲುತ್ತದೆ.
ಹೃದಯವಂತಿಕೆ,
ದೃಢವಾದ ಮನಸ್ಸಿದರೆ ಲಾಯನ್ಸ್ ಕ್ಲಬ್ನಲ್ಲೂ ಎಷ್ಟೆಲ್ಲಾ ಜನಸೇವೆ ಸಲ್ಲಿಸಬಹ್ಮದೆಂಬುದಕ್ಕೆ ಇವರೇ ಸ್ಪಷ್ಟ ನಿದರ್ಶನರಾಗಿದ್ದಾರೆ.
ಇವರ ಮಾರ್ಗದರ್ಶನದಲ್ಲಿ ಇನ್ನಷ್ಟು ಜನ ಹಿತ ಕಾರ್ಯ
ನಡೆಯಲಿ ಎಂಬುದೇ ಎಲ್ಲರ ಆಶಯ.