ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮ

ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮ  Friendship gathering and Guru Vandana program

ಲೋಕದರ್ಶನ ವರದಿ, 

ಜಮಖಂಡಿ  07: ಭೌತಿಕ ಶಾರೀರಿಕವಾಗಿ ಬೆಳವಣಿಗೆಯಾದರೂ ಮಹಾವಿದ್ಯಾಲಯವನ್ನು ಪ್ರಾಧ್ಯಾಪಕರನ್ನು ಮರೆತಿಲ್ಲ ಸಂತೋಷದ ಸಂಗತಿ. ಬಿ.ಎಲ್‌.ಡಿ ಮಹಾವಿದ್ಯಾಲಯ 75 ವಸಂತಗಳನ್ನು ಪೂರೈಸುವುದರ ಜೊತೆಗೆ ವಜ್ರಮಹೋತ್ಸವನ್ನು ಆಚರಿಸಿಕೊಳ್ಳುತ್ತಿರುವದು ಹೆಮ್ಮೆಯ ಸಂಗತಿ ಎಂದು ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಸ್‌.ಎಚ್‌. ಲಗಳಿ ಹೇಳಿದರು.  ನಗರದ ವಾಣಿಜ್ಯ ಬಿ.ಎಚ್‌.ಎಸ್ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯ ಮತ್ತು ಸಂಶೋದನಾ ಕೇಂದ್ರದಲ್ಲಿ 2015-16 ನೇ ಸಾಲಿನಲ್ಲಿ ಬಿ.ಎಸ್‌.ಸಿ ವಿದ್ಯಾರ್ಜನೆ ಗೈದು ಆಯೋಜಿಸಿದ ಸ್ನೇಹ ಸಂಗಮ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರು ದಶಕಗಳಲ್ಲಿ ಮಹಾವಿದ್ಯಾಲಯದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇದರ ಅಭಿವೃದ್ದಿಯನ್ನು ಕಂಡು ಬಾಗಲಕೋಟ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ ನೀಡಿದೆ ಎಂದರು.  

ವಿಶ್ರಾಂತ ಪ್ರಾಚಾರ್ಯ ಡಾ.ಎಸ್‌.ಎಸ್ ಸುವರ್ಣಖಂಡಿ ಮಾತನಾಡಿ. ಶಾರೀರಿಕ, ಮಾನಸ್ಸಿಕ,  ದೈಹಿಕ, ಸಾಮಾಜಿಕವಾಗಿ ಸದೃಡವಾಗಿರಬೇಕು. ಆರೋಗ್ಯದ ನಿರ್ವಹಣೆಯಲ್ಲಿ ಗಮನಹರಿಸಬೇಕು. ಸೌದರ್ಯವರ್ಧಕವನ್ನು ಅತಿಯಾಗಿ ಬಳಕೆ  ಮಾಡಬಾರದು. 1951 ಸರ್ವೇ ಪ್ರಕಾರ ಇಂದು ಬಹಳಷ್ಟು ರೋಗಗಳು ಉತ್ಪತಿಯಾಗುತ್ತಿವೆ. ಆಹಾರದ ಬಳಕೆ ಸಾಮಾಜಿಕ ಸ್ವಾಸ್ಥ್ಯದಿಂದ ಭಯಾನಕ ರೋಗಗಳು ಮನುಷ್ಯನಿಗೆ ಮಾರಕವಾಗಿವೆ ಜಾಗೃತರಾಗಿಬೇಕು. ಅಸೂಹೆ ದ್ವೇಷ ಕಾಣಬಾರದು ಪ್ರೀತಿ ವಿಶ್ವಾಸದಿಂದ ಇರಬೇಕು. ಓದು ಬರಹದಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಎಂದರು.  

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೋ. ಎಮ್‌.ಸಿ ಕಾರಬಾರಿ ಮಾತನಾಡಿ. ಹಳೆಯ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ಆರೋಗ್ಯಕರ  ಬೆಳವಣಿಗೆಯಾಗಿದೆ ಎಂದರು.  ಪ್ರಾಚಾರ್ಯ ಡಾ. ಪಿ.ಡಿ ಪೋಳ ಮಾತನಾಡಿ. ಗುರು ಶಿಷ್ಯರ ಹಾಗೂ ಸ್ನೇಹ ಸಂಬಂಧವನ್ನು ವೃದ್ದಿಸುವ ಕಾರ್ಯಕ್ರಮ ಇದಾಗಿದೆ. ತಂದೆತಾಯಿಯನ್ನು ಗೌರವಿಸಬೇಕು. ಗುರುಗಳನ್ನು ಸದಾ ಸ್ಮರಿಸಬೇಕು ಎಂದರು.  ರಬಕವಿ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಶ್ರೀಗಳು ಮಾತನಾಡಿ. ಮಿತ್ರತ್ವನ್ನು ವೃದ್ದಿಸುವುದರ ಜೊತೆಗೆ ಗುರುಗಳನ್ನು ಗೌರವಿಸುವುದು ಒಳ್ಳೆಯ ಬೆಳವಣಿಗೆ ಗುರುವಂದನೆ ಕೇವಲ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಗುರುಗಳ  ಮಾರ್ಗದರ್ಶನ  ಅನುಭಾವ ಸಂಸ್ಕಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಮಾತ್ರ ಅವರಿಗೆ  ಸಲ್ಲಿಸಿದ ಗೌರವ  ಸಾರ್ಥಕವಾಗುವದು. ಜ್ಞಾನ ವಿಚಾರ ಮಾಹಿತಿ ಸಂಗ್ರಹವಾಗಿದೆ. ಅದು ಸಮಯೋಚಿತವಾಗಿ ಬಳಕೆಯಾಗಬೇಕು. ಹಣಕ್ಕಾಗಿ ಕೇವಲ ಉದ್ಯೋಗ ಮಾಡುವ ಇಂದಿನ ಯುಗದಲ್ಲಿ ಉತ್ತಮ ಶಿಕ್ಷಕರು ದೊರೆಯುವುದು ದುರ್ಬಲವಾಗಿದೆ ಎಂದರು.  

ಹಳೆ ವಿದ್ಯಾರ್ಥಿಗಳಾದ ರಾಮನಗೌಡ ಪಾಟೀಲ, ಮಹೇಶ ಗುರವ, ವೈಭವ ನಾಯಕ, ಲಕ್ಷ್ಮೀಕಾಂತ ಹಿಪ್ಪರಗಿ, ಮಲ್ಲು ನ್ಯಾಮಗೌಡ, ಇತರರು ಇದ್ದರು. ಹಳೆ ವಿದ್ಯಾರ್ಥಿಗಳಾದ ಭಾರತಿ ಚಿಪ್ಪಲಕಟ್ಟಿ, ಸೋಮಯ್ಯ ಮಠಪತಿ, ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಸುರೇಶ ಬಿರಾದಾರ ಪ್ರಾರ್ಥಿಸಿದರು. ದೀಪಿಕಾ ಸಿಂದಗಿ ಸ್ವಾಗತಿಸಿದರು. ಉಪನ್ಯಾಸಕ ಶ್ರೀನಿವಾಸ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಬ್ಯಾಳಿ ನಿರೂಪಿಸಿದರು.