ಲಾಕ್ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಿ ಇಲ್ಲವೇ ಶಿಕ್ಷೆ ಎದುರಿಸಲು ಸಜ್ಜಾಗಿ

ಲೋಕದರ್ಶನವರದಿ

ಬ್ಯಾಡಗಿ೦೯:      ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ವಿಶ್ವದಲ್ಲೇ ಉತ್ತಮ ಹೆಸರನ್ನು ಪಡೆದಿದೆ, ಆದರೆ ಕೆಲ ವರ್ತಕರ ಸ್ವಯಂಕೃತ ಅಪರಾಧಕ್ಕೆ ಖ್ಯಾತಿಗೆ ಕಪ್ಪುಚುಕ್ಕೆ ತಗಲುವ ಸಾಧ್ಯತೆಗಳಿದ್ದು ಯಾವುದೇ ಕಾರಣಕ್ಕೂ ಅಂತಹುದಕ್ಕೆ ಅವಕಾಶ ನೀಡಲು ಸಾಧ್ಯ ವಿಲ್ಲ, ಲಾಕ್ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಿ ಇಲ್ಲವೇ ಶಿಕ್ಷೆ ಎದುರಿಸಲು ಸಜ್ಜಾಗಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ ವರ್ತಕರಿಗೆ ಖಡಕ್ ಎಚ್ಚರಿಕೆ ನೀಡಿದರು.

    ಲಾಕ್ಡೌನ್ ಹಿನ್ನೆಲೆಯಲ್ಲಿ ಸ್ಥಳೀಯ ಎಪಿಎಂಸಿ ಸೇರಿದಂತೆ ಪಟ್ಟಣದ ವರ್ತಕರಿಗೆ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ವ್ಯಾಪಾರಸ್ಥರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

   ಕೋಟ್ಯಾಂತರ ರೈತರ, ಕೂಲಿಕಾಮರ್ಿಕರ ಶ್ರಮ ಹಾಗೂ ವ್ಯಾಪಾರಸ್ಥರ ಹಣದಿಂದ ಸ್ಥಳೀಯ ಮೆಣಸಿನಕಾಯಿ ಮಾರುಕಟ್ಟೆ ವಿಶ್ವವ್ಯಾಪಿ ಹೆಸರು ಪಡೆದಿದೆ, ಮಾರುಕಟ್ಟೆಗೆ ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು, ಆದರೆ ಸ್ವಹಿತಕ್ಕಾಗಿ ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸುವ ವ್ಯಕ್ತಿಗಳನ್ನು ಕೂಡ್ರಿಸಿಕೊಂಡು ವ್ಯಾಪಾರ ವಹಿವಾಟು ಮಾಡುವುದು ಕೋರೋನಾ ದಂತಹ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದರು.

      ರೆಡ್ಜೋನ್ನಿಂದ ಪ್ರವೇಶ: ರೈತರು ವ್ಯಾಪಾರಸ್ಥರು ಅಥವಾ ಚಾಲಕರ ರೂಪದಲ್ಲಿ ರೆಡ್ಜೋನ್ಗಳಿಂದ ಪಟ್ಟಣಕ್ಕೆ ಆಗಮಿ ಸುತ್ತಿದ್ದು ಇವರಲ್ಲಿ ಬಹುತೇಕರು ಹೋಮ್ ಕ್ವಾರಂಟೈನ್ಗೆ ಸೂಚಿಸಿದವರಾಗಿದ್ದಾರೆ, ಶಂಕಿತರನ್ನು ಒಳಗೆ ಕರೆಸಿಕೊಳ್ಳುವುದು ಮಹಾ ಅಪರಾಧ, ಸಾಧ್ಯವಾದಷ್ಟು ಅಂತಹವರ ಸಹವಾಸದಿಂದ ದೂರವಿರುವುದು ಸೂಕ್ತ, ಇಲ್ಲದಿದ್ದರೇ ಮಹಾಮಾರಿ ಕೊರೋನಾಕ್ಕೆ ಸ್ವತಃ ಆಹ್ವಾನ ನೀಡಿದಂತಾಗಲಿದೆ ಎಂದು ಎಚ್ಚರಿಸಿದರು.

ಲಾಭ ಮಾಡುವ ಸಮಯವಲ್ಲ:ಡಿವೈಎಸ್ಪಿ ವಿಜಯಕುಮಾರ ಸಂತೋಷ ಮಾತನಾಡಿ, ವ್ಯಾಪಾರಸ್ಥರು ಪ್ರತಿ ಸಂದರ್ಭದಲ್ಲಿ ಲಾಭಕ್ಕಾಗಿ ಬಡಿದಾಡಬಾರದು, ಕೋವಿಡ್-19ದೇಶಕ್ಕೆ ವಕ್ಕರಿಸಿದ್ದು ಇಡೀ ವಿಶ್ವಕ್ಕೆ ತಲೆ ನೋವಾದ ಸಂದರ್ಭದಲ್ಲಿ ನಮ್ಮಗಳ ಜೀವ ಉಳಿಸಿಕೊಳ್ಳುವ ಕಡೆಗೆ ಚಿಂತಿಸೋಣ, ಪ್ರಧಾನಿ ನರೇಂದ್ರ ಮೋದಿಯವರ ಕರೆ ಕೊಟ್ಟ ಜನತಾ ಕಫ್ಯರ್ೂಗೆ ಕೈಜೋಡಿ ಸುವ ಮೂಲಕ ಅಭೂತ ಯಶಸ್ಸಿಗೆ ಕಾರಣವಾಗಿದ್ದ ಜನರು ಇಂದೇಕೆ ಹೀಗೆ ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ ಎಂದರು.

ಲಾಕ್ಡೌನ್ ಮುಗಿದಿಲ್ಲ:ಲಾಕ್ಡೌನ್ ಆದೇಶ ಸಕರ್ಾರ ಹಿಂಪಡೆದಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗದಿರಲಿ ಎಂದು ಕೆಲವೆಡೆ ಸಡಿಲಿಕೆ ಮಾಡಿದೆ, ಆದರೆ ಸೋಶಿಯಲ್ ಡಿಸ್ಟ್ನ್ಸ್, ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಇನ್ನಿತರ ನಿಯಮ ಮುಂದುವರೆದಿದ್ದು ವ್ಯಾಪಾರಸ್ಥರು ತಮ್ಮನ್ನು ತಾವು ನಿಯಮ ಪಾಲನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯ ಜೊತೆ ಕೈಜೋಡಿಸುವಂತೆ ಕರೆ ನೀಡಿದರು.

 ಈ ಸಂದರ್ಭದಲ್ಲಿ ಸಿಪಿಐ ಭಾಗ್ಯವತಿ ಬಂತ್ಲಿ, ಪಿಎಸ್ಐ ಮಹಾಂತೇಶ ವರ್ತಕರ ಮುಖಂಡರಾದ ಅಶೋಕ ಜೈನ್, ಸುರೇಶ ಮೇಲಗಿರಿ, ಚಿಕ್ಕಪ್ಪ ಹಾದಿಮನಿ, ಎಂ.ಟಿ.ಹಾವೇರಿ, ಗಜಾನನ ರಾಯ್ಕರ್, ಕೆ.ಸಿ.ಸೊಪ್ಪಿನಮಠ, ಶಿವಣ್ಣ ಬಂದಮ್ಮನರ, ಎಂ.ಎನ್.ಆಲದಗೇರಿ, ಮಾಲತೇಶ ಉಮಾಪತಿ, ಗಜಾನನ ರಾಯ್ಕರ್, ಕರಬಸಪ್ಪ ಹಾದರಗೇರಿ, ಅಂಬಾಲಾಲ್ ಟೇಕ ಚಂದ್ ಜೈನ್, ಜಗದೀಶ ರೋಣದ, ಆನಂದ್ ಜೈನ್, ನಾಗರಾಜ ಕುಳೇನೂರ ಇನ್ನಿತರರಿದ್ದರು.