ಲೋಕದರ್ಶನ ವರದಿ
ಗದಗ: ಗಾಂಧೀಜಿಯವರು ಸತ್ಯ, ಅಹಿಂಸೆ, ಶಾಂತಿ, ನಿಷ್ಠೆ, ತ್ಯಾಗ ಮತ್ತು ಪ್ರಾಮಾಣಿಕತೆಯನ್ನು ಕೇವಲ ಹೇಳದೆ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದು ಅವರ ಜೀವನವೇ ಒಂದು ಸಂದೇಶವಾಗಿದೆ. ಎಂದು ನಗರ ಸಭೆಯ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಾರದ ಜಯಶ್ರೀ ಅಂಗಡಿ ಹೇಳಿದರು.
ಅವರು ಗದಗ ನಗರದ ಶಹಪೂರಪೇಟೆಯಲ್ಲಿರುವ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಿದ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಜೀವನ ಮತ್ತು ಸಂದೇಶ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತ ಅಹಿಂಸೆ ಹಾಗೂ ಸತ್ಯದ ಆಚರಣೆಯಲ್ಲಿ ಗಾಂಧೀಜಿಯವರ ಪ್ರಯತ್ನ ಪ್ರಾಮಾಣಿಕವಾದದ್ದು. ಗಾಂಧೀಜಿಯವರು ಸತ್ಯದ ಆವರ್ಣನೀಯ ಮಹತ್ ಪ್ರಭೆಯಾಗಿದ್ದರು, ಸತ್ಯದ ಪರಿಪೂರ್ಣ ದರ್ಶನವನ್ನು ಪಡೆಯಲು ಅಹಿಂಸೆಯ ಪರಿಪೂರ್ಣ ಆಚರಣೆಯೊಂದೇ ಸಾಧನ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶರಣು ಗೋಗೇರಿ ಅವರು ಮಾತನಾಡಿ, ಜಗತ್ತಿನಲ್ಲಿ ಸ್ಥಾಪಿಸಿದ ಗಾಂಧೀಜಿಯವರ ಪ್ರತಿಮೆಗಳು ಹಾಗೂ ಪ್ರಮುಖ ಮಾರ್ಗಗಳಿಗೆ ಇಟ್ಟ ಹೆಸರು ಬೇರೆ ಯಾವುದೇ ವ್ಯಕ್ತಿಗೆ ಇಟ್ಟಿಲ್ಲ ಅಂತಹ ಮಾಹಾನ್ ವ್ಯಕ್ತಿ ಗಾಂಧೀಜಿಯವರಾಗಿದ್ದರು ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿದ್ದರು ದೇಶದ ಬಡತನ ನಿವಾರಣೆಗಾಗಿ ಅರೆಫಕೀರನಾಗಿ ದೇಶಕ್ಕಾಗಿ ಸೇವೆ ಸಲ್ಲಿಸಿದರು. ಸತ್ಯ, ಅಹಿಂಸೆ, ಶಾಂತಿಗಾಗಿ ತಮ್ಮ ಜೀವನವನ್ನೆ ಮುಡಿಪಾಗಿ ಇಟ್ಟರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹುಲಕೋಟಿಯ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ಹಾಗೂ ಕವಿಗಳಾದ ಎ.ವ್ಹಿ.ಪ್ರಭು ಅವರ ಕವನ ವಾಚಿಸಿದರು. ವೇದಿಕೆಯ ಮೇಲೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದಶರ್ಿಗಳಾದ ಪ್ರಕಾಶ ಮಂಗಳೂರ, ಅಶೋಕ ಹಾದಿ, ಉಪಸ್ಥಿತರಿದ್ದರು. ಅಶೋಕ ವಿ ಪ್ರಭುರವರು ಗಾಂಧೀಜಿಯವರ ಕುರಿತು ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಐ ಕೆ ಕಮ್ಮಾರ, ರತ್ನಕ್ಕಾ ಪಾಟೀಲ, ಸಿ ಕೆ ಕೇಶರಿ, ಜೆ ಎ ಪಾಟೀಲ, ಜೆ ಬಿ ಅಂಗಡಿ, ಆರ್ ಡಿ ಕಪ್ಪಲಿ, ಎಸ್ ಎಫ್ ಭಜಂತ್ರಿ, ಬಸವರಾಜ ವಾರಿ, ಬಿ ಎ ಕರಮುಡಿ, ಈರಣ್ಣ ಸ್ಯಾಲಿ, ಪ್ರ ತೋ ನಾರಾಯಣಪೂರ, ಮೋಹನ ಮುಧೋಳ, ಬಸವರಾಜ ಬಬಲಿ, ಬಿ ಎಫ್ ಪೂಜಾರ, ಧಮರ್ೆಂದ್ರ ಇಟಗಿ, ಐ ಎಸ್ ಮಾದರ, ಮಂಜುಳಾ ವೆಂಕಟೇಶಯ್ಯ, ಮಂಗಳಗೌರಿ ಹಿರೇಮಠ, ಜ್ಯೋತಿ ಹೇರಲಗಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಯಲ್ಲಪ್ಪ ಹಳ್ಳಿಕೇರಿ ಪ್ರಾಥರ್ಿಸಿದರು. ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಮಂಗಳೂರು ಸ್ವಾಗತಿಸಿದರು. ಗೌರವ ಕಾರ್ಯದಶರ್ಿಗಳಾದ ಅಶೋಕ ಹಾದಿ ನಿರೂಪಿಸಿದರು. ಪ್ರೊ. ಹೇಮಂತ ದಳವಾಯಿ ವಂದಿಸಿದರು.