ಯಶಸ್ಸು ಎನ್ನುವದು ಯಾರ ಸ್ವತ್ತು ಅಲ್ಲ. ಆ ಯಶಸ್ಸಿನ ಹಿಂದೆ ಬಿದ್ದವನಿಗೆ ತಾನು ಯಾವ ದಾರಿಯಲ್ಲಿ ನಡೆಯಬೇಕು, ನಡೆವ ಹಾದಿಯಲ್ಲಿ ಬರುವ ಅಡೆತಡೆಗಳೇನು ಎನ್ನುವ ಬೃಹತ್ ಕಲ್ಪನೆ ಇಲ್ಲದೇ ಹೋದರೂ ಒಂದಷ್ಟು ಕಷ್ಟಗಳು ಎದುರಾಗುತ್ತದೆ ಎನ್ನುವದು ತಿಳಿದೇ ಇರುತ್ತದೆ. ತಾನು ನಡೆದ ಈ ದಾರಿ ಹೂವಿನ ಹಾಸು ಹಾಸಿರುವುದಿಲ್ಲ ಎನ್ನುವು ತಿಳಿದಮೇಲೆ ಅವನಲ್ಲಿ ಒಂದಷ್ಟು ದೃಢತೆ ಬೆಳೆಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆ ಗಟ್ಟಿತನವನ್ನು ಆತ ಬೆಳೆಸಿಕೊಳ್ಳದಿದ್ದರೆ ಸೋಲನ್ನು ಒಪ್ಪಿಕೊಳ್ಳುತ್ತ ಎಡವುತ್ತ ಇರಬೇಕಾಗುತ್ತದೆ. ಹಾಗಾಗಿ ತಾನು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಬೇಕು ಎಂದಿದ್ದರೆ ಏನೇ ಬಂದರೂ ತಾನು ಇದನ್ನು ಮಾಡಿಯೇ ತೀರುತ್ತೇನೆ ಎನ್ನುವ ಗಟ್ಟಿಯಾದ ನಿಧರ್ಾರ ಬೇಕೇಬೇಕು.
ಒಮ್ಮೆ ಒಬ್ಬ ಬಡವ ತನ್ನ ಯಜಮಾನನ ಮನೆಗೆ ಕೆಲಸಕ್ಕೆ ಹೋದ. ಆ ಯಜಮಾನ ತನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ ಇರುವ ಸಣ್ಣ ದೊಂದು ಜಮೀನಿಗೆ ಕಳುಹಿಸಿದ. ಆ ಬಡವ ಆ ಜಮೀನಿಗೆ ಹೋಗಿ ಎತ್ತಿನ ಗಳಿಯಾವನ್ನು ಕಟ್ಟಿ ಹೂಡತೊಡಗಿದ. ಸುಮಾರು ಹೊತ್ತು ಹೂಡುತ್ತಲೇ ಉಳಿದ. ಬಿಸಿಲು ನೆತ್ತಿಗೇರಿತು. ತಾನು ಎಷ್ಟು ಹೂಡಿದೆ ಎಂದು ತಿರುಗಿ ನೋಡಿದಾಗ ಹೂಡಿದ ಮಣ್ಣಲ್ಲಿ ಏನೋ ಹೊಳೆದಂತೆ ಕಾಣಿಸಿತು. ಆ ಮಣ್ಣಿನ ಕಣಗಳು ಅವನಿಗೆ ಹೊಳೆವ ಬಂಗಾರದಂತೆ ಕಾಣಿಸಿತು. ಇಂಥ ಹೊಲವನ್ನು ತಾನು ಪಡೆಯಬೇಕು ಎನ್ನುವ ಗಟ್ಟಿ ನಿಧರ್ಾರ ಮಾಡಿದ. ಯಜಮಾನ ಈ ಜಮೀನು ಕೊಡಲು ಒಪ್ಪದಿದ್ದರೆ ಎನ್ನುವ ಸಂಶಯ ಮೂಡಿತು. ಆದರೆ ಶತಾಯಗತಯ ಪಡೆದೇ ತೀರಬೇಕು ಎಂದು ನಿರ್ಧರಿಸಿಬಿಟ್ಟ.
ಆಕ್ಷಣದಲ್ಲಿ ಅವನಿಗೆ ಒಂದು ಯೋಚನೆ ಬಂದುಬಿಟ್ಟಿತು. ಈ ಜಮೀನನ್ನು ತಾನು ತೆಗೆದುಕೊಳ್ಳಬೇಕು. ಆಗ ನಾನು ಈ ಬಂಗಾರದಂತ ಜಮೀನಿನ ಯಜಮಾನ ಆಗುತ್ತೇನೆ. ಈ ಜಮೀನಿಗೆ ಅದೆಷ್ಟೆ ಬೆಲೆಯಾದರೂ ಕೊಟ್ಟು ತೆಗೆದುಕೊಳ್ಳಲೇ ಬೇಕು. ಅದರತ್ತಲೇ ಗಮನಹರಿಸಬೇಕು ಎಂದುಕೊಂಡು ಮನೆಗೆ ಬಂದ. ಹಾಗೆ ಕೈಕಾಲು ತೊಳೆದುಕೊಂಡು ತನ್ನ ಬ್ಯಾಂಕಿನ ಪಾಸ್ಬುಕ್ ನೋಡಿದ. ಈ ಮನೆಯನ್ನು ಮಾರಿದರೆ ಎಷ್ಟು ಹಣ ಬರಬಹುದು ಎಂದು ಲೆಕ್ಕ ಹಾಕಿದ. ಹೆಂಡತಿಗೆ ವಿಷಯ ತಿಳಿಸಿದ. ಆಕೆಗೆ ಗಂಡ ಇದ್ದಿದ್ದನ್ನು ಕಳೆದುಕೊಂಡು ಜಮೀನನ್ನು ಕೊಳ್ಳುವುದು ಇಷ್ಟವಿರಲಿಲ್ಲ. ಆದರೂ ಗಂಡನ ಮಾತು ತೆಗೆದು ಹಾಕದೆ ಒಪ್ಪಿದಳು. ಆಗ ಹೆಂಡತಿಯ ಒಡವೆಯನ್ನು ಮಾರಿದರೆ ಸಿಗಬಹುದಾದ ಹಣವನ್ನು ಲೆಕ್ಕ ತೆಗೆದ. ಮನೆಯನ್ನು ಅಡವಿಡಲು ನಿರ್ಧರಿಸಿದ. ಎಲ್ಲವೂ ಸೇರಿದರೆ ಆ ಜಮೀನು ತೆಗೆದುಕೊಳ್ಳಲು ದುಡ್ಡು ಸಾಲುವುದಿಲ್ಲ ಎನ್ನಿಸಿತು. ಅದಕ್ಕೆ ಬ್ಯಾಂಕಿನಲ್ಲಿ ಸಾಲ ಸಿಗುತ್ತದೆಯೇ ಎಂದು ವಿಚಾರಿಸಿಯೂ ಬಿಟ್ಟ. ಇಷ್ಟೆಲ್ಲ ಆದ ಮೇಲೆ ಯಜಮಾನನಿಗೆ ತನಗೆ ಆ ಜಮೀನು ಬೇಕು ಎಂದು ಹೇಳಿದ. ಆದರೆ ಯಜಮಾನ ಮೊದಲು ಕೊಡುವುದಿಲ್ಲ ಎಂದ. ಇಲ್ಲ ತನಗೆ ಆ ಜಮೀನು ಮನೆಯಿಂದ ಹತ್ತಿರವಿದೆ ಬೇಕೇಬೇಕು ನೀವು ಕೇಳಿದಷ್ಟು ಕೊಡುತ್ತೇನೆ ಎಂದುಬಿಟ್ಟ. ಊರವರೆಲ್ಲ ಏನು ಹುಂಬತನ ಕೆಲಸ ಮಾಡುತ್ತಿರುವ ಈ ಬಡವ. ತಿನ್ನಲು ಉಣ್ಣಲು ಇದ್ದ ಆಹಾರ, ಮನೆ ಮಾರಿದ. ಸಾಲವನ್ನು ತೆಗೆದಾಯಿತು. ಕೇಳಿದಷ್ಟು ಹಣ ಕೊಟ್ಟು ಜಮೀನು ಖರೀದಿಸುವೆ ಎನ್ನುತ್ತಾನಲ್ಲ ಎಂದು ತಲೆಗೊಂದರಂತೆ ಮಾತನಾಡಿದರು. ಅದೆಷ್ಟೋ ಜನ ಆ ಜಮೀನಿನ ಆಸೆ ಮಾಡಬೇಡ ಎಂದರು. ಆದರೆ ಬಡವನು ಮಾತ್ರ ತನ್ನ ಛಲವನ್ನು ಬಿಡಲಿಲ್ಲ. ಕೊನೆಗೂ ಆ ಜಮೀನನ್ನು ಖರೀದಿಸಿಯೇ ಬಿಟ್ಟ.
ಆ ಜಮೀನಿನಲ್ಲಿ ಮುಂದೆ ಹೊನ್ನಿನ ಬೆಳೆ ಬೆಯುವುದು ಅವನ ಕೈಲಿತ್ತು. ಸರಿಯಾಗಿ ಉತ್ತಿ ಬಿತ್ತಿ ಬೆಳೆ ತೆಗೆದು ತನ್ನ ಬಿಡಿಸಿಕೊಳ್ಳಬೇಕು, ಹೆಂಡತಿಯ ಒಡವೆ ತಿರುಗಿ ತರಬೇಕು. ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎನ್ನುವ ಕನಸುಗಳಿಗೆ ಈ ಜಮೀನಿನಲ್ಲಿ ದುಡಿಮೆ ಅವಶ್ಯವಾಗುತ್ತದೆ. ಆ ಜಮೀನು ಪಡೆಯಬೇಕು ಎನ್ನುವ ನಿಧರ್ಾರದ ಇತ್ತಲ್ಲ ಅದರ ಹಿಂದೆ ನೂರಾರು ಗುರಿಗಳು ಬೆನ್ನು ಹತ್ತಿ ಬಂದವು. ಒಂದಾದ ಮೇಲೆ ಒಂದು ಗುರಿಯತ್ತ ಸಾಗುವುದೇ ಮನುಷ್ಯನ ಶಕ್ತಿಯಾಗಿರುತ್ತದೆ.
ಒಮ್ಮೆ ಸೀತಾ ಮಾತೆಯ ಕತೆಯನ್ನು ಮೆಲಕು ಹಾಕೋಣ. ಸೀತೆ ರಾಜಕುಮಾರಿಯಾಗಿ ಬೆಳೆದವಳು. ದಶರಥನ ಪುತ್ರನಾದ ರಾಮನೆಂಬ ರಾಜಕುಮಾರನನ್ನೇ ಮದುವೆಯಾದವಳು. ಮುಂದೆ ಪಟ್ಟದರಸಿಯಾಗಿ ಮೆರೆಯಬೇಕಾಗಿದ್ದವಳು. ಗಂಡನ ಸಿರಿತನದಲ್ಲಿ ನೂರಾರು ಕನಸು ಕಟ್ಟಿಕೊಂಡಿದ್ದ ಹೆಣ್ಣುಮಗಳು. ಅಂಥವಳಿಗೆ ಹೆಣ್ಣುಮಗಳಿಗೆ ತನ್ನ ಪತಿಯು ವನವಾಸವನ್ನು ಅನುಭವಿಸಬೇಕು ಎನ್ನುವ ಅಪ್ಪಣೆ ಬಂದಾಗ ತಾನು ಪತಿಯ ಜೊತೆ ಹೊರಟು ನಿಂತಳು. ಆಕೆಗೆ ರಾಮನೊಟ್ಟಿಗೆ ಕಾಡಿಗೆ ಹೋಗಬೇಕು ಎನ್ನುವ ಯಾವುದೇ ನಿರ್ಭಂಧಗಳಿರಲಿಲ್ಲ. ಅರಮನೆಯಲ್ಲಿ ಸುಖವಾಗಿ ತಿಂದು ಉಣ್ಣುತ್ತ ಪತಿಯ ಬರುವಿಕೆಗಾಗಿ ಕಾಯುತ್ತ ಗಂಡನ ಹಲವು ಕಾರ್ಯಗಳನ್ನು ಮಾವ ಅತ್ತೆಯರ ಸೇವೆ ಮಾಡುತ್ತ ಇರಬಹುದಿತ್ತು. ಆಕೆ ಹಾಗೆ ಮಾಡಲಿಲ್ಲ. ಗಂಡನಿಲ್ಲದ ಜಾಗ ನರಕಕ್ಕೆ ಸಮ ಎಂದಳು. ಕಾಡಾಗಲಿ, ಕಲ್ಲು ಮುಳ್ಳಾಗಲಿ ಪತಿಯೊಡನೆ ಹೋಗುತ್ತೇನೆ. ಅವನೊಟ್ಟಿಗೆ ತಾನೂ ವನವಾಸ ಪ್ರವಾಸ ಕೈಗೊಂಡು ಗೆದ್ದು ಬರುತ್ತೇನೆ ಎನ್ನುವ ಆಕೆಯ ದೃಢನಿಧರ್ಾರವೇ ಅವಳ ಛಲವಾಗಿತ್ತು. ಹಾಗಾಗಿ ಆಕೆ ರಾಮನೊಟ್ಟಿಗೆ ಕಾಡಿನತ್ತ ಹೆಜ್ಜೆ ಹಾಕಿದಳು.
ಕಾಡಿನಲ್ಲಿ ಒದಗುವ ಸೌಲಭ್ಯಗಳ ಅರಿವೂ ಆಕೆಗಿತ್ತು. ಸೊಳ್ಳೆ, ಕೀಟಗಳ ಬಾಧೆ, ಹಾವುಗಳಂಥ ಸರಿಸೃಪದ ಕಾಟ, ಹುಲಿ, ಆನೆ ಚಿರತೆಗಳ ದಾಳಿ, ಕಾಡು ಮನುಷ್ಯರ ಉಪಟಳ, ರಾಕ್ಷಸರ ಆಡಳಿತ, ಊಟಕ್ಕೆ ಅನ್ನವೂ ಸಿಗದೇ ನೀರು ಕುಡಿದು ಮಲಗಬಹುದಾದ ದಿನಗಳು ಎಲ್ಲವೂ ಆಕೆಗೆ ಗೊತ್ತಿತ್ತು. ಅದೆಲ್ಲವನ್ನೂ ತಾನು ಅನುಭವಿಸಿ ಗೆದ್ದು ಪತಿಯೊಡನೆ ಮರಳಲೇ ಬೇಕು ಎಂದು ನಿರ್ಧರಿಸಿದ್ದರಿಂದಲೇ ಸೀತೆಯೂ ವನವಾಸಕ್ಕೆ ತೆರಳಿದಳು.
ಅಂದರೆ ನಮ್ಮ ಯಶಸ್ಸು ಕೇವಲ ಹಣದ ಹಿಂದೆ ಮಾತ್ರವಿಲ್ಲ. ಯಾವುದನ್ನೇ ಆಯ್ಕೆ ಮಾಡಿಕೊಂಡರೂ ಆ ಆಯ್ಕೆಯ ಕೊನೆ ಮುಟ್ಟುವುದು ಮುಖ್ಯ. ಅದಕ್ಕಾಗಿ ನಾವು ಸಂಕಲ್ಪ ಮಾಡಿಕೊಳ್ಳಬೇಕು. ಕೇವಲ ಸಂಕಲ್ಪದಿಂದ ಸಿದ್ದಿಯಾಗುವುದಿಲ್ಲಲ್ಪಾ ಸಂಕಲ್ಪವೂ ದಢೃವಾಗಿರಬೇಕು. ನಮ್ಮ ಕೆಲಸ ಕಾರ್ಯಗತವಾಗಿಸಲು ಶ್ರದ್ಧೆ ಇಡಬೇಕು. ಆಗ ಮಾತ್ರ ನಮ್ಮ ಗುರಿಯನ್ನು ನಾವು ತಲುಪಬಹುದು. ಆ ಗುರಿ ತಲುಪಿದಾಗ ಸಿಗುವ ಖುಷಿ, ಸಂಭ್ರಮ, ಸಂತೋಷ ಸ್ವರ್ಗಕ್ಕೆ ಸಮಾನ. ಒಂದು ಗಟ್ಟಿ ನಿಧರ್ಾರವೇ ಮುಂದಿನ ಸ್ವರ್ಗಸಾಮ್ರಾಜ್ಯದ ಮುನ್ನುಡಿಯಾಗುವುದು. ಅದರಿಂದ ಜೀವನದಲ್ಲಿ ತೃಪ್ತಿಯೂ ಸಿಗುವುದು