ವಿವಿದೋದ್ದೇಶಗಳ ಸೌಹಾರ್ದ ಸೊಸೈಟಿಯ ಉದ್ಘಾಟನಾ ಸಮಾರಂಭ

ಚನ್ನಮ್ಮನ ಕಿತ್ತೂರು 31: ಭ್ರಷ್ಠಾಚಾರ ಮುಕ್ತವಾದ ಒಳ್ಳೆಯ ಗುಣಮಟ್ಟದ ಶಿಕ್ಷಣ ಯುವಕರಿಗೆ ಕಿತ್ತೂರಿನಲ್ಲಿ ಸೈನಿಕರ ಮಾರ್ಗದರ್ಶನದಲ್ಲಿ ದೊರೆಯಬೇಕೆಂದು ಭಾರತೀಯ ವಾಯುಸೇನೆಯ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಫ್.ಪಾಟೀಲ ಹೇಳಿದರು.

ಪಟ್ಟಣದಲ್ಲಿರುವ ಚೌಕಿಮಠದ ಬಳಿ ರವಿವಾರ ನಡೆದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ವಾಷರ್ೀಕೋತ್ಸವ ಸಮಾರಂಭ ಹಾಗೂ ಗ್ರಾಮೀಣ ಯುವ ವಿವಿದೋದ್ದೇಶಗಳ ಸೌಹಾರ್ದ ಸೊಸ್ಶೆಟಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅವರು, ಸಮಾಜದಲ್ಲಿ ಹಲವಾರು ರಂಗಗಳಿದ್ದು ಅದರಲ್ಲಿ ಪ್ರಾಣ ತ್ಯಾಗ ಮಾಡಿ ಸಮಾಜ ಸೇವೆಗೈಯುವುದು ಸೈನಿಕರು ಮಾತ್ರ. ಈಗ ಶಿಕ್ಷಣ ಸಂಸ್ಥೆಗಳು ವ್ಯಾಪಾರಿಕರಣಗೊಳ್ಳುತ್ತಿವೆ. ಹಣದ ಮಹಿಮೆಯಿಂದ ಶಿಕ್ಷಣವೂ ಕೂಡ ತನ್ನ ಗುಣ ಮಟ್ಟದ ಕಳೆದುಕೊಳ್ಳುತ್ತಿದೆ. 

ಉನ್ನತ ಮಟ್ಟದ ಶಿಕ್ಷಣದಲ್ಲಿಯೂ ಹಣವೂ ತನ್ನ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯುತ್ತಿರುವ ಪರಿಣಾಮ ಪ್ರತಿಭಾವಂತ ವಿದ್ಯಾಥರ್ೀಗಳು ಮಮ್ಮಲ ಮರಗುವಂತಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು, ಸೇನಾ ಭತರ್ಿಯ ರ್ಯಾಲಿಗಳು ನಡೆದರೂ ಅಲ್ಲಿ ಯಾವುದೇ ಹಣ ಹಾಗೂ ಆಮೀಶಗಳಿಗೆ ಅವಕಾಶವಿಲ್ಲ. ಆದರೆ ಕೆಲವು ಮದ್ಯವತರ್ಿಗಳು ಬಡವರ ಹತ್ತಿರ ಹಾಗೂ ಸಾರ್ವಜನಿಕರ ಬಳಿ ನಿಮ್ಮ ಯುವಕನನ್ನು ಸೇನಾ ಭತರ್ಿ ಮಾಡಿಕೊಡುತ್ತೆವೆಂದು ನಂಬಿಸಿ ಹಣ ಕಿಳುವ ಪ್ರಯತ್ನ ನಡೆಸುತ್ತಿದ್ದು ಅಂತವರು ಕಂಡು ಬಂದರೆ ಕೂಡಲೇ ಸಾರ್ವಜನಿಕರು ಮಾಜಿ ಸೈನಿಕ ಸಂಘಗಳಿಗೆ ತಿಳಿಸಬೇಕೆಂದು ಮನವಿ ಮಾಡಿಕೊಂಡರು.

  ಮಹಿಳಾ ಮತ್ತು ಮಕ್ಕಳ ಸಬಲಕೀಕರಣ ಅಧ್ಯಕ್ಷೆ ಮಂಜುಳಾ ಮುನವಳ್ಳಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸೇನೆಯನ್ನು ಸೇರಲು ಹಿಂಜರೆಯುತ್ತಿದ್ದಾರೆ ಅವರನ್ನು ಸಹ ಪಾಲಕರು ಸೇರಿದಂತೆ ಮಾಜಿ ಸೈನಿಕರು  ಹುರುದುಂಬಿಸಿ ಸೇನೆ ಸೇರುವಂತೆ ಪ್ರೋತ್ಸಾಹಿಸಬೇಕು.

ಸೇನಾ ತರಬೇತಿ ಕೇಂದ್ರದ ಸಂಸ್ಥಾಪಕರಾದ ಪವರ್ಿಜ್ ಹವಾಲ್ದಾರ ಹಾಗೂ ಗಂಗಾಧರ ಪೂಜೇರ ಮಾತನಾಡಿ, ಸೂರ ಸಂಗೊಳ್ಳಿ ರಾಯಣ್ಣ ಮಾತಿನಂತೆ ಮನೆಗೊಬ್ಬ ವೀರರನ್ನು ತಯಾರಿಸುವ ಗುರಿಯನ್ನು ಈ ಕೇಂದ್ರ ಹೊಂದಿದೆ, ಕೇಂದ್ರದಲ್ಲಿ ಸೂಕ್ತ ತರಬೇತಿ ನೀಡಿ ಮಾನಸಿಕ ಹಾಗೂ ದೈಹಿಕವಾಗಿ ಬಲಾಡ್ಯಗೊಳಿಸಿ ಅವರ ಸಮರ್ಥ ಸೈನಿಕರಾಗಿ ತಯಾರಿಸಲಾಗುತ್ತದೆ ಎಂದ ಅವರು, ನೌಕರಿಯ ಆಸೆಯನ್ನು ತೊರಿಸಿ ಕೆಲವು ಏಜನ್ಸಿಗಳು ಹಣ ಪಡೆದು ಮೊಸ ಮಾಡುತ್ತಿವೆ ಅಂತಹ ಏಜನ್ಸಿಗಳಿಂದ ಹಾಗೂ ಅಮೀಷಗಳಿಂದ ದೂರವಿರುವಂತೆ ಸೂಚಿಸಿದ ಅವರು, ಕೇಂದ್ರದಿಂದ ಒಟ್ಟು 57 ಯುವಕರು ಭಾರತೀಯ ಸೇನೆ ಆಯ್ಕೆ ಆಗಿದ್ದು ಸಂತಸ ತಂದಿದ್ದು ಜಿಲ್ಲೆಯ ಹೆಸರು ಬಾನೆತ್ತರಕ್ಕೆರುತ್ತಿದೆ ಎಂದು ಸಂತಸಗೊಂಡರು.

ಇದಕ್ಕೂ ಮೊದಲು ಕೇಂದ್ರದಿಂದ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾದ ಅಭ್ಯಥರ್ಿಗಳನ್ನು ಸನ್ಮಾನಿಸಲಾಯಿತು. ನಂತರ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಡಾ. ಹಕೀಮ್ ಮೌಲಾನಾ ತಯ್ಯಬ್ ತೋಲಗಿ ಆಶರ್ಿವಚನ ನೀಡಿದರು.

ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯ ಸಮೀತಿಯ ರಾಜಾಧ್ಯಕ್ಷ ಅಜ್ಜಪ್ಪ ಕುರಬರ, ಮಾಜಿ ಸೈನಿಕರಾದ ಪಿ.ವಿ.ಕೊರಗಲ್ಲಮಠ, ಬಿ.ಎಮ್.ಸಂಗ್ರೊಳ್ಳಿ,  ಕ್ಯಾಪ್ಟನ್ ಕೃಷ್ಣಗಿರಿ ಬಾವಾನವರ, ಮೋಹನ ಅಂಗಡಿ, ಕೆ.ಮನೊಹರದಾಸ್, ಬಸವರಾಜ ವನ್ನೂರ, ಮಹೇಶ ಮಲ್ಲಯ್ಯನವರ, ನೀಲಪ್ಪ ಕಲ್ಲೂರ, ಪಾಂಡುರಂಗ ಮೇಳಗೆ, ಎಸ್.ಎಸ್.ದೇವರೆಡ್ಡಿ, ಕುಮಾರ ಹಿರೇಮಠ, ಬಿ.ಆರ್.ಪಾಟೀಲ ಹಾಗೂ ಡಾ.ಮಹಾಂತಸ್ವಾಮಿ ಹಿರೇಮಠ, ಕಿರಣ ರಾಮ್, ಸೇರಿದಂತೆ ಇತರರು ಇದ್ದರು. ಪವರ್ಿಜ್ ಹವಾಲ್ದಾರ ಸ್ವಾಗತಿಸಿದರು,  ಮೀನಾಕ್ಷೀ ನಿರೂಪಿಸಿದರು, ಅಶೊಕ ಕುಮಾರ ವಂದಿಸಿದರು.