ಲೋಕದರ್ಶನ ವರದಿ
ಘಟಪ್ರಭಾ 06: ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದಾಗಿದೆ ಎಂದು ಘಟಪ್ರಭಾದ ಕೆಎಚ್ಐ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ಸ್ವಾತಿ ವೈದ್ಯ ಹೇಳಿದರು.ಗುರುವಾರ ಇಲ್ಲಿಯ ಮಲ್ಲಾಪೂರ ಪಿಜಿ ಪಟ್ಟಣದ ಎಸ್.ವಾಯ್.ಖಾನಾಪೂರೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬೆಳಗಾವಿ ನೆಹರು ಯುವ ಕೇಂದ್ರ, ಜೈ ಹನುಮಾನ ಯುವಕ ಸಂಘ ಮಲ್ಲಾಪೂರ ಪಿಜಿ, ಎಸ್.ವಾಯ್.ಖಾನಾಪೂರೆ ಪದವಿ ಪೂರ್ವ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 'ನೆರೆ ಹೊರೆ ಯುವ ಸಂಸತ್ತು' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯುವಕರು ಶಾರೀರಿಕವಾಗಿ ಸದೃಢ ಹೊಂದಬೇಕು. ಸಮಾಜಮುಖಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಉತ್ತಮ ಪರಿಸರ ನಿರ್ಮಾಣ ಮಾಡಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಭಾರತ ಸೇವಾದಳದ ಡೆಪ್ಯೋಟಿ ಬಸವರಾಜ ಹಟ್ಟಿಗೌಡರ ಉದ್ಘಾಟಿಸಿ ಮಾತನಾಡಿ ಯುವಕರೇ ದೇಶದ ಸಂಪತ್ತು. ಯುವ ಜನಾಂಗದಿಂದಲೆ ದೇಶದ ಅಭಿವೃದ್ದಿ ಸಾಧ್ಯ, ಸಮೃದ್ಧ ರಾಷ್ಟ್ರ ನಿಮರ್ಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವ ಜನಾಂಗ ರಾಷ್ಟ್ರ ಮತ್ತು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ರಾಷ್ಟ್ರಕ್ಕಾಗಿ ಶ್ರಮಿಸಿದ ಮಹಾನುಭಾವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವೇದಿಕೆ ಮೇಲೆ ಆನಂದ ಬಬಲಿ, ಶಶಿರೇಖಾ ಕುಮಠಿ, ಮಹೇಶ ಕುಮಠಿ, ನೆಹರು ಯುವ ಕೇಂದ್ರದ ದುಂಡಯ್ಯ ಮಳ್ಳೆನ್ನವರ, ಲಕ್ಷ್ಮೀ ಮಾದರ, ಬಿ.ಪಿ. ಅಳಗೋಡಿ, ಕೆ.ವಿ.ಕೌಜಲಗಿ, ಖಾನಾಪೂರೆ ಸೇರಿದಂತೆ ಇತರರು ಇದ್ದರು.