ಬೆಳಗಾವಿ, 19: ನಾಡಿನ ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿಗಳಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ, ಇದನ್ನು ಬೆಳೆಸಿ ಮಕ್ಕಳು ದೇಶದ ಸತ್ಪ್ರಜೆಗಳನ್ನಾಗಿ ಮಾಡುವುದು ತಾಯಿಯ ಜವಾಬ್ದಾರಿ, ಪಾಶ್ಚಾತ್ಯ ದೇಶಗಳ ಮಹಿಳೆಯರಿಗಿಂತ ಭಿನ್ನವಾಗಿದೆ ಎಂದು ಆರ್ಎಸ್ಎಸ್ ವಿಭಾಗದ ಭೌದ್ಧಿಕ ಮುಖ್ಯಸ್ಥ ರಾಮಕೃಷ್ಣ ಏಡಕೆ ಹೇಳಿದರು.
ನಗರದ ಹಿಂದವಾಡಿಯ ಕ್ರಾಂತಿ ಮಹಿಳಾ ಮಂಡಳ ವತಿಯಿಂದ ಗುರುವಾರ 19 ರಂದು 73ನೇಯ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಆಯೋಜಿಸಲಾಗಿದ್ದ, 'ಸ್ವತಂತ್ರ ಬಲಾಢ್ಯ ಭಾರತ ನಿಮರ್ಾಣದಲ್ಲಿ ಮಹಿಳೆಯರ ಜವಾಬ್ದಾರಿಗಳು' ಎಂಬ ವಿಷಯ ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,
ಮನೆ ಅಡುಗೆಯಿಂದ, ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಹಿಳೆಯರು ಶ್ರಮಿಸುತ್ತಾರೆ. ಅದಕ್ಕಾಗಿ ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಜೀಜಾಮಾತೆಯ ಆ ದೇಶಪ್ರೇಮ, ಮಾರ್ಗದರ್ಶನ ಇಲ್ಲದಿದ್ದರೆ ಛತ್ರಪತಿ ಶಿವಾಜಿ ಮಹಾರಾಜನನ್ನು ಈ ದೇಶಕಾಣುತ್ತಿರಲಿಲ್ಲ. ಹಿರಿಯರು ಆಂಗ್ಲರ ದಾಸ್ಯರಿಂದ ಭಾರತ ದೇಶವನ್ನು ತಮ್ಮ ತ್ಯಾಗಬಲಿದಾನದಿಂದ ಮುಕ್ತಗೊಳಿಸಿ ನಮ್ಮನ್ನು ಸ್ವತಂತ್ರದೇಶದ ಪ್ರಜೆಗಳನ್ನಾಗಿಸಿದ್ದು, ಪ್ರಗತಿಪರ ಉಜ್ವಲ ದೇಶದ ಭವಿಷತ್ಯಕ್ಕಾಗಿ ಯಾವ ರೀತಿಯಾದ ಜೀವನ ಶೈಲಿ, ಆಚಾರ ವಿಚಾರ ನಡುವಳಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷೇ ಶೋಭಾ ಕಾಡನ್ನವರ ಮಾತನಾಡಿ, ನಮ್ಮ ಹಿರಿಯರುತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದಯಪಾಲಿಸಿದ್ದು ನಮ್ಮ ಮುಂದಿನ ಪೀಳಿಗೆ, ಬಲಿಷ್ಠ ರಾಷ್ಟ್ರ ನಿಮರ್ಾಣ ನಿಟ್ಟಿನಲ್ಲಿ ಅವಶ್ಯವಿರುವ ಸೂಕ್ತ ಮಾರ್ಗದರ್ಶನ ಮಾಡುವಜವಾಬ್ದಾರಿ ನಮ್ಮ ಮೇಲಿದೆ ಎಂದರು.
30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮರಾಠಾರೆ ಜಿಮೆಂಟಿನ ಕ್ಯಾಪ್ಟನ್ ಪಾಂಡುರಂಗ ಮೇಲಗೆ ಮತ್ತು ಸುಬೇದಾರ ಎಚ್.ಗುರವ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುಷ್ಪಾ ನಿಲಜಗಿ ಪ್ರಾಥರ್ಿಸಿದರು. ಕಾರ್ಯದರ್ಶಿ ದರ್ಶನಾ ನಿಲಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ರಿಶಲಾ ಪಾಯಪ್ಪನವರ ಅಥಿತಿ ಪರಿಚಯಿಸಿದರು. ಶಿವಾನಿ ಕಸ್ತೂರಿ,ಪ್ರತಿಮಾ ಶೇತವಾಲ ನಿರೂಪಿಸಿದರು.
ರೋಹಿಣಿ ಇಂಡಿ ವಂದಿಸಿದರು.