ದೇವರ ಮುಂದಿನ ದೀಪದಿಂದ ಮನೆ ಸಂಪೂರ್ಣ ಭಸ್ಮ
ಹಾವೇರಿ 11: ತಾಲೂಕಿನ ಅಕ್ಕೂರ ಗ್ರಾಮದ ಕರಬಸಪ್ಪ ಈರ್ಪ ತೋಟಿಗೇರ ಇವರ ಮನೆ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿ ಇದ್ದ ದೀಪದಿಂದಲೇ ಮನೆಯು ಸಂಪೂರ್ಣವಾಗಿ ಬೆಂಕಿಗೆ ಸುಟ್ಟು ಹೋಗಿರುವ ಘಟನೆ ಜರುಗಿದೆ. ಬೆಳಗಿನ ಜಾವಾ ಮನೆಯಲ್ಲಿ ಪೂಜೆ ಮಾಡಿ ಹೊಲದ ಕೆಲಸಕ್ಕೆ ತಂದೆ-ತಾಯಿ ಹೋಗಿದ್ದರು.
ಮಕ್ಕಳು ಶಾಲೆಗೆ ಹೋಗಿದ್ದರು.ತಕ್ಷಣವೇ ಸುತ್ತಮುತ್ತಲಿನ ಜನರೆಲ್ಲ ಸೇರಿ ನೀರಿನಿಂದ ಬೆಂಕಿಯನ್ನು ನಂದಿಸಿದರು.ಕಂದಾಯ ಗ್ರಾಮ ಆಡಳಿತಾಧಿಕಾರಿ ಬಸಯ್ಯ ಮಠಪತಿ ಆಗಮಿಸಿ ಹಾನಿಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹರೀಶ ಮಾಗಡಿಮಠ ಗ್ರಾಮಸ್ಥರಾದ ಮುತ್ತಣ್ಣ ಭರಡಿ,ಯಲ್ಲನಗೌಡ ಮರಿಗೌಡ್ರ,ಮಹಾದೇವಪ್ಪ ಭರಡಿ,ಉಮೇಶ್ ಹೊಸಮನಿ,ಈರಣ್ಣ ತೋಟಿಗೇರ ಮುಂತಾದವರು ಸರ್ಕಾರದಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.