ಲೋಕದರ್ಶನ ವರದಿ
ಶಿರಹಟ್ಟಿ: ಕನಕದಾಸರು ಕೇವಲ ಸಂತನಾಗಿರಲಿಲ್ಲ ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿದ್ದರು. ಸಾಮಾಜದಲ್ಲಿನ ದ್ವೇಷ, ಅಸೂಯೆ, ಅಹಂಕಾರ ತೊರೆದು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದ ಮಹಾನ್ ದಾರ್ಶನಿಕ ಕನಕದಾಸರು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಜಿಪಂ, ತಾಪಂ ಮತ್ತು ಪಟ್ಟಣ ಪಂಚಾಯತ ಶಿರಹಟ್ಟಿ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ಹಾಗೂ ಕುರುಬ ಸಮಾಜದ ವತಿಯಿಂದ ಸರಳವಾಗಿ ಭಕ್ತಶ್ರೇಷ್ಠ ಕನಕದಾಸರ 532 ನೇ ಜಯಂತಿಯನ್ನು ಆಚರಿಸಿ ಮಾತನಾಡಿದರು.
ಕನಕದಾಸರು ಈ ನಾಡು ಕಂಡ ಶ್ರೇಷ್ಠ ದಾಸರಲ್ಲಿ ಒಬ್ಬರಾಗಿದ್ದು. ಜೀವಾನಾನುಭವ, ಲೋಕಾನುಭವದ, ಸತ್ಯಾಸತ್ಯತೆಗಳನ್ನು ಕಾವ್ಯದ ಮೂಲಕ ಜನಸಾಮಾನ್ಯರಿಗೆ ಸಮಪರ್ಿಸಿದರು, ಯಾರೂ ಜಾತಿಯ ಹೆಸರಿನಲ್ಲಿ ಹೊಡೆದಾಡದಂತೆ ನೂರಾರು ವರ್ಷಗಳ ಹಿಂದೆಯೇ ಜಾತ್ಯಾತೀತ ಸಮಾಜ ನಿಮರ್ಾಣಕ್ಕಾಗಿ ಜನಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಇಂತಹ ಮಹಾತ್ಮರ ವಚನ, ತತ್ವ ಸಿದ್ದಾಂತ ಹಾಗೂ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುದರ ಮೂಲಕ ಮುಂದಿನ ಯುವ ಪಿಳಿಗೆಗೆ ದಾರಿ ದೀಪವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಕುರಬ ಸಮಾಜದ ಮುಖಂಡ ಮಂಜುನಾಥ ಘಂಟಿ ಮಾತನಾಡಿ, ಕನಕದಾಸರ ಜೀವನ ಮತ್ತು ಅವರ ಉಪದೇಶಗಳು ನಮಗೆಲ್ಲ ಮಾಧರಿಯಾಗಿದ್ದು, ಜೊತೆಗೆ ನಮ್ಮನ್ನೆಲ್ಲ ವೈಚಾರಿಕವಾಗಿ ಉದ್ದರಿಸಿದ ಕೀತರ್ಿ ಇವರಿಗೆ ಸಲ್ಲುತ್ತದೆ. 15-16ನೇ ಶತಮಾನದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕರು ಶ್ರೇಷ್ಠರು. ಕರ್ನಾಟಕ ಸಂಗೀತದ ಮೂಲಭೂತ ಸಿದ್ದಾಂತಗಳಿಗೆ ಕಾಣಿಕೆಯನ್ನು ನೀಡಿದವರಾಗಿದ್ದರು. ಸಮಾಜ ಎಲ್ಲ ಮುಖಗಳ ಪರಿಚಯವನ್ನು ಹೊಂದಿದವರಾಗಿದ್ದ ಇವರ ಸುಧಾರಿತ ಸಮಾಜ ನಿಮರ್ಾಣಕ್ಕಾಗಿ ಕುಲ ಕುಲ ಎಂಬ ಬಡಿದಾಡದಿರ ಎಂದು ಹೇಳಿದ್ದಾರೆ. ಕುಲ ನೆಲೆಯನ್ನು ಅರಿಯದೇ ಕುಲಕ್ಕಾಗಿ ಹೋರಾಡದಿರಿ ಎಂದು ಮಾಮರ್ಿಕವಾಗಿ ಹೇಳಿದ್ದಾರೆ. ಇಂತಹ ಆದರ್ಶಗಳನ್ನು ನಾವೆಲ್ಲ ಪಾಲಿಸಿಕೊಂಡು ಸುಂದರ ಸಮಾಜ ನಿಮರ್ಾಣ ಮಾಡಿಕೊಳ್ಳುವಲ್ಲಿ ನಾವೆಲ್ಲ ಶ್ರಮಿಸಬೇಕೆಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಪಪಂ ಮಾಜಿ ಅಧ್ಯಕ್ಷ ರಾಮಣ್ಣ ಡಂಬಳ, ಅನೀಲ ಮಾನೆ, ಗೂಳಪ್ಪ ಕರಿಗಾರ, ಸೋಮನಗೌಡ ಮರಿಗೌಡ್ರ, ಸಂತೋಷ ಕುರಿ, ಪಪಂ ಸದಸ್ಯರಾದ ಪರಮೇಶ ಪರಬ, ಸಂದೀಪ ಕಪ್ಪತ್ತನವರ, ರಾಜು ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ, ಮುರಗೇಶ ಆಲೂರ, ಹೊನ್ನಪ್ಪ ಶಿರಹಟ್ಟಿ, ಮಹದೇವ ಗಾಣಿಗೇರ, ದೇವಪ್ಪ ಆಡೂರ, ಪರಶುರಾಮ ಡೊಂಕಬಳ್ಳಿ, ದೇವಪ್ಪ ಇಟ್ಟೆಕಾರ, ಕರಿಯಪ್ಪ ಕುಳಗೇರಿ, ತಿರಕಪ್ಪ ಗಾಡಿ, ಅಕ್ಬರ ಯಾದಗೇರಿ, ಶ್ರೀನಿವಾಸ ಬಾರಬಾರ, ತಾಪಂ ಇಒ ಡಾ.ನಿಂಗಪ್ಪ ಓಲೇಕಾರ, ಹಾಗೂ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ಸೇರಿದಂತೆ ಊರಿನ ಮುಖಂಡರು ಪಾಲ್ಗೊಂಡಿದ್ದರು.ಕನಕದಾಸ ಭಾವ ಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಜರಾಜ ಮತ್ತು ಡೊಳ್ಳುಗಳ ಸಮೇತ ಮೆರವಣಿಗೆ ಜರುಗಿತು. ನಂತರ ವೇದಿಕೆ ಕಾರ್ಯಕ್ರಮ ಜರುಗಿತು.