ಬಾಗಲಕೋಟೆ: ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ, ಶೋಷಿತ ವರ್ಗದವರಿಗೆ ಸಮಾನತೆ ತಂದುಕೊಟ್ಟು ಏಕತೆಗೆ ಹೋರಾಡಿದ ಮಹಾನಾಯಕ ಸದರ್ಾರ್ ವಲ್ಲಭ ಬಾಯಿ ಪಟೇಲರು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಎಸ್.ಸಿ.ನಂದಿನಠ ಕಾನೂನು ಮಹಾವಿದ್ಯಾಲಯದಲ್ಲಿಂದು ಕ್ಷೇತ್ರ ಜನಸಂಪರ್ಕ ಕಾಯರ್ಾಲಯ ವಿಜಯಪುರ ವಾತರ್ಾ ಮತ್ತು ಪ್ರಚಾರ ಸಚಿವಾಲಯ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವಕೇಂದ್ರ, ಭಾರತ ಸೇವಾದಳ ಮತ್ತು ಆರ್.ಸಿ.ಯು.ಎಸ್. ಆರ್ ಕಂಠಿ ಸ್ನಾತಕೋತ್ತರ ಕೇಂದ್ರ ಹಾಗೂ ವಿವಿಧ ಯುವ ಸಂಘಟನೆಗಳ ಸಹಯೋಗದಲ್ಲಿ ಸದರ್ಾರ್ ವಲ್ಲಭ್ಬಾಯಿ ಪಟೇಲರ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಏಕತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕು ಕರ್ತವ್ಯಗಳಿದ್ದು, ಅವುಗಳನ್ನು ಅರಿತುಕೊಂಡು ಸರ್ವರೂ ಸಮಾನರು ಎಂದು ತಿಳಿಯಬೇಕು. ಇಂದಿನ ಯುವಪೀಳಿಗೆ ಯಾವುದೇ ಭೇದ ಭಾವವಿಲ್ಲದೇ ಉತ್ತಮ ಆದರ್ಶಗಳನ್ನು ಬೆಳಸಿಕೊಳ್ಳಬೇಕು ಅಂದಾಗ ಮಾತ್ರ ಏಕತೆ ಮೂಡಲು ಸಾಧ್ಯ.
ಒಗ್ಗಟ್ಟಿನಿಂದ ಇದ್ದರೆ ಎಂತಹ ದೊಡ್ಡ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು ಅವರು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಪ್ರಾಧ್ಯಾಪಕರಾದ ಡಾ.ಬಸವರಾಜ ಕುಬಕಡ್ಡಿ ಮಾತನಾಡಿ ಯಾವುದೇ ಕಾರ್ಯಸಿದ್ಧಿಯಾಗಬೇಕಾದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಮಸ್ಯೆಗಳನ್ನು ಎದುರಿಸುವಲ್ಲಿ ಇಂದಿನ ಯುವಪೀಳಿಗೆ ಐಕ್ಯತೆಯ ಮಂತ್ರ ಸಾರಬೇಕು. ಒಗ್ಗಟಿನಲ್ಲಿ ಬಲವಿದೆ ಎನ್ನುವುದನ್ನು ಸಮಾಜಕ್ಕೆ ತಿಳಿಸುವ ಕಾರ್ಯಮಾಡಬೇಕು. ಇಂದಿನ ಯುವಕರು ವೃತ್ತಿಯನ್ನು ಹೆಚ್ಚು ಪ್ರೀತಿಸಬೇಕು. ಅದಕ್ಕೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳ ಕಡೆಗೆ ಗಮನ ಹರಿಸುವುದರಿಂದ ಪ್ರತಿಯೊಬ್ಬರಲ್ಲಿಯೂ ದೇಶದ ಬಗ್ಗೆ ಗೌರವ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ.ಆರ್.ಶಿರೋಳ ಅವರು ದೇಶದಲ್ಲಿ ಏಕತೆ ಎಂಬುವುದು ಕೇವಲ ಮಾತಿನಿಂದಾಗಬಾರದು ಪ್ರತಿಯೊಬ್ಬರ ಮನೆ ಮನಗಳಲ್ಲಿ ಮೂಡಬೇಕು. ಅಂದಾಗ ದೇಶ ಏಕತಾ ರಾಷ್ಟ್ರವಾಗಲು ಸಾಧ್ಯವಾಗುತ್ತದೆ ಎಂದರು. ಬಾಗಲಕೋಟೆ ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಏಕತಾ ಓಟ ಹಾಗೂ ಭಾಷಣಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಲೀಸ್ ಉಪಧೀಕ್ಷಕ ಎಸ್.ಪಿ.ಗಿರೀಶ್, ಯುವ ಸಬಲೀಕರಣ ಮತ್ತು ಸಹಾಯಕ ನಿದರ್ೇಶಕ ಎಮ್.ಎನ್.ಮೇಲಿನಮನಿ. ಕ್ಷೇತ್ರಪ್ರಚಾರಾಧಿಕಾರಿ ಜಿ.ತುಕಾರಾಮ ಗೌಡ, ಜಿಲ್ಲಾ ಭಾರತ ಸೇವಾದಳ ಸಂಘಟಕರಾದ ಮಹೇಶ ಪತ್ತಾರ, ಮುರಳಿಧರ್ ಉಪಸ್ಥಿತರಿದ್ದರು. ಬಸವ ಕಲಾ ತಂಡದಿಂದ ದೇಶಭಕ್ತಿ ಗೀತೆ ಹಾಗೂ ನೃತ್ಯ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮವನ್ನು ಈರಣ್ಣ ಅಂಕದ ನಿರೂಪಿಸಿದರು. ಬಿರಾದರ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಏಕತಾ ಓಟಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ ಚಾಲನೆ ನೀಡಿದರು.