ಲೋಕದರ್ಶನವರದಿ
ರಾಣೇಬೆನ್ನೂರು: ಮೇ.17: ಕರೋನಾ ವೈರಸ್ ಹಾವಳಿಯಿಂದ ರಾಜ್ಯವೂ ಸೇರಿದಂತೆ ಜಿಲ್ಲೆಯ ಮತ್ತು ತಾಲೂಕಿನ ಕಟ್ಟಡ ಕಾಮರ್ಿಕರು ನಿತ್ಯದ ಕೆಲಸವಿಲ್ಲದೇ, ಅನೇಕ ರೀತಿಯಲ್ಲಿ ಆಥರ್ಿಕ ಸಂಕಷ್ಠವನ್ನು ಎದುರಿಸಿರುವುದನ್ನು ಕಂಡಿದ್ದೇವೆ. ಇಂತಹ ಸಂದರ್ಭದಲ್ಲಿ ತಾಲೂಕಾಡಳಿತ ಸಕರ್ಾರ ನಿಯಮಾನುಸಾರ ದೊರಕಿಸುವ ಎಲ್ಲ ರೀತಿಯ ಸೌಲಭ್ಯವನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಅವರು ತಾಲೂಕಿನ ಸಿದ್ಧಾಪುರ ತಾಂಡಾ, ಗೋವಿಂದ ಬಡಾವಣೆ, ಶ್ರೀನಿವಾಸಪುರ ತಾಂಡಗಳಲ್ಲಿ ಕಾಮರ್ಿಕ ಇಲಾಖೆಯು ಕಟ್ಟಡ ಕೂಲಿ ಕಾಮರ್ಿಕರಿಗೆ ಸಕರ್ಾರದಿಂದ ಕೊಡಮಾಡುವ ಉಚಿತ ಜೀವನಾವಶ್ಯಕ ಒಂದು ತಿಂಗಳ ಆಹಾರ ಧಾನ್ಯಗಳ ಕಿಟ್ಗಳನ್ನು ವಿತರಿಸಿ ಮಾತನಾಡಿದರು. ಕಟ್ಟಡ ಕಾಮರ್ಿಕರು ನಿಜವಾಗಿಯೂ ಶ್ರಮಿಕ ಜೀವಿಗಳು ಮೈಮುರಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ ಇಂತಹ ಸಂದರ್ಭದಲ್ಲಿ ಕೆಲಸ ಕಾಣದೇ, ಸಮಸ್ಯೆ ಎದುರಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಕರ್ಾರವು ಇವರಿಗಾಗಿಯೇ ಅನೇಕ ರೀತಿಯ ಧನ ಸಹಾಯ ನೀಡುವುದರ ಜೊತೆಗೆ ಅಹಾರ ಧಾನ್ಯ ವದಗಿಸಲು ಕ್ರೀಯಾ ಯೋಜನೆ ರೂಪಿಸಿ ಜಾರಿಗೆ ತಂದಿದ್ದು, ಇದೀಗ 1500 ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ಎಸ್.ಎಸ್.ಮುದ್ದಪ್ಪಳವರ, ವಿಶ್ವನಾಥ ಪಾಟೀಲ, ಎಪಿಎಂಸಿ ಸದಸ್ಯರಾದ ಬಸವರಾಜ ಹುಲ್ಲತ್ತಿ, ಶಶಿಧರ ಬಸೇನಾಯ್ಕರ್, ರಮೇಶ್ ನಾಯ್ಕ, ಪರಮೇಶಪ್ಪ ಗೂಳಣ್ಣನವರ, ಪವನ್ ಕುಳೇನೂರ, ದೀಪಕ್ ಹರಪನಹಳ್ಳಿ, ಕೊಟ್ರೇಶ್ ಕಣವಿ, ಮಲ್ಲಿಕ್ ಮಸಿಯಪ್ಪನವರ, ಲಕ್ಷಣ್ ನಾಯ್ಕ್ ಸೇರಿದಂತೆ ಕಟ್ಟಡ ಕಾಮರ್ಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ನಾಗರೀಕರು ಪಾಲ್ಗೊಂಡಿದ್ದರು.