ನವದೆಹಲಿ, ಜ 31, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಎಸಗಲಾಗುತ್ತಿರುವ 'ದೌರ್ಜನ್ಯ'ಗಳ ಬಗ್ಗೆ ಜಾಗತಿಕ ಸಮುದಾಯ ಗಮನ ಹರಿಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶುಕ್ರವಾರ ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ದೌರ್ಜನ್ಯಗಳನ್ನು ನಾನು ಖಂಡಿಸುತ್ತೇನೆ. ಈ ಕಿರುಕುಳಗಳ ಬಗ್ಗೆ ಜಾಗತಿಕ ಸಮುದಾಯ ಗಮನಹರಿಸಬೇಕು, ಈ ನಿಟ್ಟಿಯಲ್ಲಿ ಅಂತರಾಷ್ಟ್ರೀಯ ಸಮುದಾಯ ಅಗತ್ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಒತ್ತಾಯಿಸಿದ್ದಾರೆ.
ಭಾರತ "ನೆರೆಹೊರೆ ಮೊದಲು" ನೀತಿಗೆ ಬದ್ದವಾಗಿದೆ. ನೆರೆಯ ದೇಶಗಳೊಂದಿಗೆ ಸಂಪರ್ಕ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳಲ್ಲಿ ಭಾರತ ಹೇಗೆ ಬಲಿಷ್ಠ ದೇಶವಾಗಿ ಹೊರಹೊಮ್ಮುಲಿದೆ ಎಂಬುದನ್ನು ಮುಂದಿನ ದಶಕ ನಿರ್ಧರಿಸಲಿದೆ.ನಮ್ಮ ಕರ್ತವ್ಯಗಳನ್ನು ನಿಭಾಯಿಸಿವ ದಶಕವನ್ನಾಗಿ 2020ನ್ನು ನಾವೆಲ್ಲ ರೂಪಿಸೋಣ ಎಂದು ರಾಷ್ಟ್ರಪತಿ ಮನವಿ ಮಾಡಿದ್ದಾರೆ.ಯಾವುದೇ ರಾಜಕೀಯ ಸಿದ್ದಾಂತದ ರಾಜಕಾರಣಿ ಯಾಗುವಮುನ್ನ ನಾವು ಮೊದಲು ಭಾರತೀಯರು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನವ ಭಾರತ ನಿರ್ಮಿಸುವ ಸಮಯ ಇದಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಜನಾದೇಶಕ್ಕಿಂತ ಪವಿತ್ರವಾದದ್ದು ಯಾವುದೂ ಇಲ್ಲ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.ದೇಶದ ಜನರು "ನವ ಭಾರತ" ನಿರ್ಮಿಸಲು ನನ್ನ ಸರ್ಕಾರಕ್ಕೆ ಜನಾದೇಶ ನೀಡಿದ್ದು, ಇದನ್ನು ಸಾಕಾರಗೊಳಿಸಲು ಈ ದಶಕವನ್ನು ಭಾರತದ ದಶಕವನ್ನಾಗಿಸಲು ಅಗತ್ಯವಾಗಿರುವ ಎಲ್ಲ ಬಲಿಷ್ಠ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಭಾಷಣದಲ್ಲಿ ತಿಳಿಸಿದ್ದಾರೆ