ನವದೆಹಲಿ, ಫೆಬ್ರವರಿ 10,ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಇದ್ದ ಅಡೆ ,ತಡೆ ಎಲ್ಲ ಮುಗಿದಿದೆ ಅಂತಿಮವಾಗಿ ಸುಪ್ರೀಂ ಕೋರ್ಟ್ ಸಹ ಇದಕ್ಕೆ ಹಸಿರು ನಿಶಾನೆ ತೋರಿದ್ದು, ಹೀಗಾಗಿ ಮುಂದಿನ ಏಪ್ರಿಲ್ ಮೊದಲ ವಾರದಲ್ಲಿ ನಿರ್ಮಾಣ ಪ್ರಾರಂಭವಾಗುವುದು ಬಹುತೇಕ ನಿಶ್ಚಿತವಾಗಿದೆ. ಭವ್ಯ ರಾಮ ಮಂದಿರ ನಿರ್ಮಾಣವು ಬರುವ ಏಪ್ರಿಲ್ 2 ರಿಂದ (ರಾಮ್ ನವಮಿ) ಅಥವಾ 26 ರಿಂದ ಪ್ರಾರಂಭವಾಗಲಿದೆ ಎಂದು ರಾಮ್ ಜನ್ಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಮೂಲಗಳು ಹೇಳಿವೆ.ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ಬಗ್ಗೆ ಯಶಸ್ವಿ ವಾದ ಮಂಡಿಸಿದ್ದ ಹಿಂದೂ ಪಕ್ಷಗಳ ಸಂಘಟನೆಗಳ ಕೆ ಪರಾಶರನ್ ಕಚೇರಿಯಲ್ಲಿ ಇದೇ 19 ರಂದು ಟ್ರಸ್ಟ್‌ನ ಮೊದಲ ಸಭೆ ಪ್ರಸ್ತಾವನೆ ಅಂಗೀಕರಿಸಲಿದೆ ಎಂದೂ ಮೂಲಗಳು ತಿಳಿಸಿವೆ.
ಇದೆ 19 ರಂದು ನಡೆಯಲಿರುವ ಟ್ರಸ್ಟ್‌ನ ಉದ್ದೇಶಿತ ಸಭೆಯ ಉನ್ನತ ಕಾರ್ಯಸೂಚಿಗಳಲ್ಲಿ ರಾಮ್ ಮಂದಿರ ನಿರ್ಮಾಣ ವಿಷಯವು ಪ್ರಮುಖವಾಗಿದೆ ಎಂದು ಟ್ರಸ್ಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ 2019 ರ ನವೆಂಬರ್ 9 ರಂದು ಹಸಿರು ನಿಶಾನೆ ತೋರಿತ್ತು , ಇದು ರಾಮ್ ನವಮಿ ಅಥವಾ ಅಕ್ಷಯ್ ತೃತೀಯರ 'ಶುಭ ದಿನದಂದು ಕಾರ್ಯರೂಪಕ್ಕೆ ಬರಲಿದೆ ಎಂದೂ ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 5 ರಂದು ಸಂಸತ್ತಿನಲ್ಲಿ ಅಯೋಧ್ಯೆ ದೇವಾಲಯ ನಿರ್ಮಾಣ ಸಂಬಂದದ ಟ್ರಸ್ಟ್ ಸ್ಥಾಪನೆಯ ಘೋಷಣೆ ಮಾಡಿದ್ದರು.ದೆಹಲಿ ಮತದಾನದ ಮುಗಿದ ಒಂದು ದಿನದ ನಂತರ ಮತ್ತು ಎಣಿಕೆಗೆ ಕೇವಲ ಎರಡು ದಿನಗಳ ಮುಂಚಿನ ಈ ನಿರ್ಧಾರ ಹಲವು ರಾಜಕೀಯ 'ವ್ಯಾಖ್ಯಾನಗಳಿಗೂ ದಾರಿಮಾಡಿಕೊಟ್ಟಿದೆ.
ಎನ್ನಲಾಗಿದೆ . ಇದಕ್ಕೂ ಮೊದಲು, ಫೆಬ್ರವರಿ 5 ರಂದು ಸರ್ಕಾರ ಟ್ರಸ್ಟ್ ರಚಿಸುವುದಾಗಿ ಘೋಷಿಸಿದಾಗ, ಅಪೆಕ್ಸ್ ಕೋರ್ಟ್ ನಿಗದಿಪಡಿಸಿದ ಮೂರು ತಿಂಗಳ ಗಡುವು ಮುಗಿಯಲು ಕೇವಲ ನಾಲ್ಕು ದಿನಗಳ ಮೊದಲು, ಕೆಲವರು ಸಮಯದ ಬಗ್ಗೆ ಹೇಳುತ್ತಾರೆ ಆದರೆ ಒಳ್ಳೆಯ ಕೆಲಸಕ್ಕೆ ಅವರಿಗೆ ಸರಿಯಾದ ಸಮಯವಿಲ್ಲ ಎಂದೂ ದೆಹಲಿ ಸಿಎಂ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಕುಟುಕಿದ್ದರು.