ಬಾಗಲಕೋಟೆ17: ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದ ಪರಶುರಾಮ ಉದ್ಯೋಗ ಖಾತರಿ ಯೋಜನೆ ಉಪಯೋಗ ಪಡೆದು ರೇಷ್ಮೆ ಕೃಷಿಯಿಂದ ವರ್ಷಕ್ಕೆ 3 ರಿಂದ 4 ಲಕ್ಷವರೆಗೆ ಆದಾಯ ಪಡೆಯುತ್ತಿರುವುದನ್ನು ಕಂಡು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹರ್ಷ ವ್ಯಕ್ತಪಡಿಸಿದ್ದಾರೆ.
ಛಬ್ಬಿ ಗ್ರಾಮದ ರೈತರ ಜಮೀನುಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ರಾಮಪ್ಪ ಮತ್ತು ನೀಲಪ್ಪ ತುಂಬರಮಟ್ಟಿ ದಂಪತಿಗಳ ಮಗನಾದ ಪರಶುರಾಮ ಮೊದಲು 3 ವರ್ಷಗಳಿಂದ ಕೂಲಿ ಮಾಡುತ್ತಿದ್ದರು. ಈಗ ಉದ್ಯೋಗ ಖಾತರಿ ಯೋಜನೆ ಉಪಯೋಗ ಪಡೆದುಕೊಂಡು ರೇಷ್ಮೆ ಕೃಷಿಯಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಕಳೆದೆರಡು ವರ್ಷದಿಂದ ತಲಾ 3 ರಿಂದ 4 ಲಕ್ಷಗಳವರೆಗೆ ಆದಾಯ ಪಡೆಯುತ್ತಿದ್ದಾರೆ. ಛಬ್ಬಿ ಗ್ರಾಮದಲ್ಲಿ ಒಟ್ಟು 75 ಎಕರೆ ಜಮೀನುಗಳಲ್ಲಿ 26 ರೈತರಿಗೆ ಉದ್ಯೋಗ ಖಾತರಿ ಯೋಜನೆಯ ಲಾಭ ಪಡೆಯುತ್ತಿರುವುದಾಗಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನೌಕರಿ ಇದ್ದವರಿಗೆ ಮಾತ್ರ ಕನ್ಯೆ ನೀಡುತ್ತಿದ್ದಾರೆ. ಆದರೆ ಕೃಷಿ ಕೂಲಿ ಕಾಮರ್ಿಕರಿಗೆ ಕನ್ಯೆ ಕೊಡುವವರು ಮುಂದೆ ಬರದೆ ಇರುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಛಬಬ್ಬಿ ಗ್ರಾಮದ ಕೃಷಿ ಕೂಲಿ ಕಾರ್ಮಿಕ ಕೂಲಿಯಿಂದ ಸ್ವತಃ ರೇಷ್ಮೆ ಕೃಷಿ ಕೈಗೊಂಡು ಉತ್ತಮ ಆದಾಯ ಪಡೆಯುತ್ತಿರುವುದು ಕೃಷಿ ಕೂಲಿ ಕಾರ್ಮಿಕರಿಗೆ ಮಾದರಿಯಾಗಿದ್ದಾರೆ ಎಂದರು.
ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಒಟ್ಟು 205 ಗ್ರಾಮಗಳ 1319 ರೈತರು 767.62 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೇಸಾಯಿ ಕೈಗೊಂಡು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. 1919 ರೈತರ ಪೈಕಿ 89 ರೈತರು ಪರಿಶಿಷ್ಟ ಜಾತಿ ಹಾಗೂ 71 ರೈತರು ಪರಿಶಿಷ್ಟ ಪಂಗಡಕ್ಕೆ, 51 ಜನ ಅಲ್ಪಸಂಖ್ಯಾತರು ಹಾಗೂ 187 ಮಹಿಳಾ ರೇಷ್ಮೆ ಬೆಳೆಗಾರರಿದ್ದಾರೆಂದು ತಿಳಿಸಿದಿದ್ದಾರೆ. ಜಿಲ್ಲೆಯಲ್ಲಿ ಖಾಸಗಿ ವಲಯದಲ್ಲಿ 10 ಕಾಟರ್ೆಜ್ ಬೇಸಿನ್ ಘಟಕಗಳು ಹಾಗೂ 1 ಮೆಲ್ಟಿಯಂಡ್ ರೀಲಿಂಗ್ ಘಟಕಗಳು ಹಾಗೂ 10 ಬೇಸಿನ್ಗಳು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ 6.90 ಲಕ್ಷ ಮೊಟ್ಟೆ ಚಾಕಿ ಹಾಗೂ 448.500 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಕಾರ್ಯವಿದ್ದು, ಜನವತಿ ಅಂತ್ಯಕ್ಕೆ 0.12350 ಲಕ್ಷ ಮಿಶ್ರ ಹಾಗೂ 4.67685 ಲಕ್ಷ ದ್ವಿತಳಿ ಮೊಟ್ಟೆಗಳ ಚಾಕಿ ಮಾಡಲಾಗಿದೆ. ಮತ್ತು 6.295 ಮೆಟ್ರಿಕ್ ಟನ್ ಮಿಶ್ರ ಹಾಗೂ 293.306 ಮೆಟ್ರಿಕ್ ಟನ್ ದ್ವಿತಳಿ ಗೂಡಿನ ಉತ್ಪಾದನೆಯಾಗಿದ್ದು, ಶುದ್ದ ತಳಿ ಸೇರಿ ಒಟ್ಟು 299.601 ಮೆಟ್ರಿಕ್ ಟನ್ ಗೂಡು ಉತ್ಪಾದಿಸಲಾಗಿದೆ. ದ್ವಿತಳಿ ಸಾಕಾಣಿಕೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದೊಡ್ಡ, ಮಧ್ಯಮ, ಸಣ್ಣ ಹಾಗೂ ಅತೀ ಸಣ್ಣ ರೈತರು ಸೇರಿ ಒಟ್ಟು 1319 ರೇಷ್ಮೆ ಬೆಳೆಗಾರರಿದ್ದಾರೆ. ಅದರಲ್ಲಿ ಬಾಗಲಕೋಟೆ 120, ಬದಾಮಿ 103, ಗುಳೇದಗುಡ್ಡ 44, ಹುನಗುಂದ 147, ಇಲಕಲ್ಲ 132, ಬೀಳಗಿ 106, ಮುಧೋಳ 126, ರಬಕವಿ-ಬನಹಟ್ಟಿ 111 ಹಾಗೂ ಜಮಖಂಡಿ ತಾಲೂಕಿನಲ್ಲಿ 430 ಜನ ರೈತರು ಇದ್ದಾರೆ ಎಂದು ತಿಳಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೇವಲ ಗ್ರಾಮದಲ್ಲಿ ರಸ್ತೆ, ಕೆರೆ, ಸೇತುವೆ ನಿಮರ್ಾಣ ಕಾಮಗಾರಿಗಳನ್ನು ಮಾಡುವುದಕ್ಕೆ ಅಷ್ಟೇ ಸೀಮಿತವಾಗಿಲ್ಲ. ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವುದಕ್ಕೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ತೋಟಗಾರಿಕೆ ಬೆಳೆಗಳನ್ನು ಬೆಳೆಸುವ ಜೊತೆಗೆ ಹೂವಿನ ಸಸಿಗಳನ್ನು ಸಹ ರೈತರು ತಮ್ಮ ಜಮೀನುಗಳ ನೆಡುವುದಕ್ಕೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅವಕಾಶವಿದೆ. ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ಪೇರಲ, ಲಿಂಬು ಸೇರಿದಂತೆ ಇತರೆ ಹಣ್ಣುಗಳ ಸಸಿಗಳನ್ನು ನೆಡಲು ದಿನಗೂಲಿಯಂತೆ ನರೇಗಾದ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರೈತರಿಗೆ ವರದಾನವಾದ ಉದ್ಯೋಗ ಖಾತರಿ ವಿವಿಧ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ವತಃ ರೈತರ ಜಮೀನುಗಳಿಗೆ ಭೇಟಿ ನೀಡುತ್ತಿರುವುದಾಗಿ ಗಂಗೂಬಾಯಿ ಮಾನರಕ ತಿಳಸಿದರು.