ಲೋಕದರ್ಶನ ವರದಿ
ಬೆಳಗಾವಿ 02: "ಜಾಗತಿಕ ಸಂಗೀತ ಕ್ಷೇತ್ರಕ್ಕೆ ಭಾರತದ ಕೊಡುಗೆ ಅತ್ಯಮೂಲ್ಯವಾದದ್ದು. ಭರತಮುನಿಯ ನಾಟ್ಯಶಾಸ್ತ್ರ ಎಲ್ಲ ಕಲೆಗಳಿಗೂ ತಳಹದಿ ಹಾಕಿಕೊಟ್ಟರೆ , ಸಾಮವೇದ ಸಂಗೀತಕ್ಕೆ ಸ್ವರಪ್ರಸ್ತಾರ ಹಾಕಿದ ಮೊದಲ ಗ್ರಂಥವೆನಿಸಿದೆ. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ ಎಂದು ಹಿರಿಯ ಸಾಹಿತಿ ಪತ್ರಕರ್ತ ಎಲ್. ಎಸ್. ಶಾಸ್ತ್ರಿ ಅವರಿಂದಿಲ್ಲಿ ಹೇಳಿದರು.
ವಾಗ್ದೇವಿ ಸಂಗೀತ ಸಂಸ್ಥೆಯ 29 ನೇ ವಾಷರ್ಿಕೋತ್ಸವದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ಯಾವುದೇ ಕಲೆಯನ್ನು ಕಲಿಯುವವರು ಗುರುಗಳಲ್ಲಿ ಭಕ್ತಿ ಇಡಬೇಕು, ಕಲೆಯಲ್ಲಿ ನಿಷ್ಠೆ ಇರಬೇಕು. ಸಂಗೀತ ವಿದ್ಯೆ ಕಲಿಯುವದನ್ನು ಒಂದು ತಪಸ್ಸು ಎಂದು ಭಾವಿಸಿ ಶ್ರದ್ಧೆಯಿಂದ ಕಲಿಯಬೇಕು ಎಂದರು.
ಇನ್ನೋರ್ವ ಅತಿಥಿಗಳಾದ ಹಿರಿಯ ಕವಯಿತ್ರಿ ರಂಜನಾ ನಾಯಕ ಅವರು ಮಾತನಾಡಿ ಸಂಗೀತ ಜಗತ್ತಿನ ತುಂಬ ಎಲ್ಲದರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಅಡಗಿದೆ. ನಿಸರ್ಗ ಮತ್ತು ಎಲ್ಲ ಜೀವಿಗಳಲ್ಲೂ ಸಂಗೀತದ ಅಸ್ತಿತ್ವ ಇದೆ. ನಾವದನ್ನು ಗುರುತಿಸಬೇಕು. ಮಕ್ಕಳಿಗೆ ಸಂಗೀತ ಸಾಹಿತ್ಯ ಮೊದಲಾದ ಕಲೆಗಳ ಶಿಕ್ಷಣ ನೀಡಿದರೆ ಅವರು ಸುಸಂಸ್ಕೃತರಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಆರಂಭದಲ್ಲಿ ಸಂಸ್ಥೆಯ ವಿದ್ಯಾಥರ್ಿಗಳು ಎಲ್. ಎಸ್. ಶಾಸ್ತ್ರಿಯವರು ಬರೆದ " ಬನ್ನಿ ಸಿಹಿ ಸಕ್ಕರೆಯ ನಾಡಿಗೆ " ಎಂಬ ಸ್ವಾಗತ ಗೀತೆಯನ್ನು ಹಾಡಿದರು. ಎಂ. ಬಿ. ಹರ್ಷ ಅವರು ಸ್ವಾಗತಿಸಿದರು. ಸಂತ ಮೀರಾ ಹೈಸ್ಕೂಲ್ ಮುಖ್ಯಾಧ್ಯಾಪಕಿ ಸುಜಾತಾ ದಫ್ತರದಾರ ಅವರು ಮಕ್ಕಳಿಗೆ ಉಪದೇಶಪರ ಸಂದೇಶ ನೀಡಿದರು. ಸಂಸ್ಥೆಯ ಸಂಚಾಲಕಿ ಭಾರತಿ ಭಟ್ , ರಾಘವೇಂದ್ರ ಕುಲಕಣರ್ಿ ಉಪಸ್ಥಿತರಿದ್ದರು. ಕೆ. ಎಸ್. ಭಾರತಿ ಮತ್ತು ರಾಜೇಶ್ವರಿ ಜಮ್ಮಿಹಾಳ ನಿರೂಪಣೆಗೈದರು. ನಂತರ ಸಂಸ್ಥೆಯ ಮಕ್ಕಳು ಮತ್ತು ಹಿರಿಯ ಸದಸ್ಯರಿಂದ ಗಮಕ ರೂಪಕ, ವೀಣಾವಾದನ, ನೃತ್ಯ ಸಂಗೀತ ಕಾರ್ಯಕ್ರಮಗಳಾದವು.