ಟ್ರೇಲರ್‌ನಿಂದ ಸುದ್ದಿಯಲ್ಲಿರುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ

ಶೀರ್ಷಿಕೆ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರ ‘ಪ್ರಕರಣ ತನಿಖಾ ಹಂತದಲ್ಲಿದೆ'. ಈಗಾಗಲೇ ಮೋ?ನ್ ಪೋಸ್ಟರ್, ಪೋಸ್ಟರ್, ಟೈಟಲ್ ಟ್ರ್ಯಾಕ್ ಸೇರಿದಂತೆ ಒಂದಿ?್ಟು ವಿಚಾರಗಳ ಮೂಲಕ ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಅನಾವರಣಗೊಂಡ ಟ್ರೇಲರ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದು, ಅಕ್ಟೊಬರ್ 18ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ. ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ.ಕೆ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದರು. ವಿಶೇ?ವೆಂದರೆ, ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕಿಗೆ ಸಾಹಿತ್ಯ ಬರೆದಿದ್ದಾರೆ. ಅದು ಈಗಾಗಲೇ ಬಿಡುಗಡೆಗೊಂಡು ಪ್ರೇಕ್ಷಕರನ್ನು ಸೆಳೆದಿದೆ.  

ಈ ಕಥೆ ತಮ್ಮನ್ನು ಸೆಳೆದ ಬಗ್ಗೆ, ಅದಕ್ಕೆ ಸಾಹಿತ್ಯ ಬರೆದ ಹಿನ್ನೆಲೆಯ ಬಗ್ಗೆ ಒಂದ?್ಟು ವಿವರಗಳನ್ನು ಶಿವಣ್ಣನವರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಆ ಬಳಿಕ ನಿರ್ಮಾಪಕ ಚಿಂತನ್ ಕಂಬಣ್ಣ ತಾವು ಈ ಚಿತ್ರದ ಭಾಗವಾದ ಬಗ್ಗೆ ಮಾತಾಡಿದ್ದಾರೆ. ಚಿಂತನ್ ನಟನೆಯತ್ತ ಆಕರ್ಷಿತರಾಗಿ ರಂಗತಂಡಗಳೊಂದಿಗೆ ಸೇರಿಕೊಂಡಾಗ ನಿರ್ದೇಶಕ ಸುಂದರ್ ಎಸ್ ಮತ್ತು ತಂಡದ ಪರಿಚಯವಾಗಿತ್ತಂತೆ. ಆ ಹಂತದಲ್ಲಿ ಸುಂದರ್ ಎಸ್ ಅವರು ರೆಡಿ ಮಾಡಿಟ್ಟುಕೊಂಡಿದ್ದ ಕಥೆಯೊಂದು ಇ?್ಟವಾಗಿ, ಅದನ್ನು ತಾನೇ ನಿರ್ಮಾಣ ಮಾಡಲು ನಿರ್ಧರಿಸಿದ್ದಾಗಿ ಚಿಂತನ್ ಹೇಳಿಕೊಂಡಿದ್ದಾರೆ. 

ಇನ್ನು ಈ ಚಿತ್ರದ ಸಾರಥಿ ಸುಂದರ್ ಎಸ್ ಕೂಡಾ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ಹುಟ್ಟು ಪಡೆದ ಬಗೆಯನ್ನು ವಿವರಿಸುತ್ತಾ, ‘ಈ ತಂಡದಲ್ಲಿರುವವರೆಲ್ಲರೂ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ನಾಟಕಗಳ ಜೊತೆಗೇ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಇವರೆಲ್ಲರೂ ನಾನಾ ಕಥೆಗಳನ್ನು ತಯಾರು ಮಾಡಿಟ್ಟುಕೊಂಡಿದ್ದರು. ಕಡೆಗೂ ಕಥೆಯ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಾಗ ಈಗಿರುವ ಟ್ರೆಂಡಿಗೆ ಸುಂದರ್ ಎಸ್ ಅವರ ಕಥೆ ಸೂಟ್ ಆಗುತ್ತದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ನಂತರ ನಿರ್ಮಾಪಕರನ್ನು ಹುಡುಕೋ ಕೆಲಸದ ನಡುವೆ ಚಿಂತನ್ ಕಂಬಣ್ಣ ತಾನೇ ನಿರ್ಮಾಣ ಮಾಡೋದಾಗಿ ಮುಂದೆ ಬಂದಿದ್ದರು. ಇದೆಲ್ಲದರಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ’ ಎಂಬುದು ನಿರ್ದೇಶಕ ಸುಂದರ್ ಮಾತು.  

ಟ್ರೇಲರ್ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಸುಂದರ್ ಎಸ್, ನಿರ್ಮಾಪಕ ಚಿಂತನ್ ಕಂಬಣ್ಣ, ಡಾ. ಶಿವಣ್ಣ, ಮಹಿನ್ ಕುಬೇರ್, ಮುತ್ತುರಾಜ್, ರಾಜ್ ಗಗನ್, ಎಡಿಟರ್ ನಾನಿಕೃ?್ಣ, ವಿಎಫ್‌ಎಕ್ಸ್‌ ಮಾಡಿರುವ ಲಕ್ಷ್ಮೀಪತಿ ಎಂ.ಕೆ ಮೊದಲಾದವರು ಹಾಜರಿದ್ದರು. ವಿಶೇ?ವೆಂದರೆ, ಕರದಾಯಾಮ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಚಿಂತನ್ ಕಂಬಣ್ಣ ಒಂದು ಪಾತ್ರದಲ್ಲಿಯೂ ನಟಿಸಿದ್ದಾರಂತೆ. ಇದೀಗ ಬಿಡುಗಡೆಗೊಂಡಿರುವ ಟ್ರೇಲರ್‌ಗೆ ಪ್ರೇಕ್ಷಕರ ಪ್ರತಿಕ್ರಿಯೆಯ ನೀರೀಕ್ಷೆಯಲ್ಲಿ ಚಿತ್ರತಂಡವಿದೆ.