ಧರೋಡೆ ಕೋರರು ಕಾಟ ಹೆಚ್ಚಾಗಿ ಸಾರ್ವಜನಿಕರು ನಿದ್ದೇಗೆಡಿಸಿದಂತಾಗಿದೆ

The fight against Dharode is mostly caused by the public

ಲೋಕದರ್ಶನ ವರದಿ 

ಧರೋಡೆ ಕೋರರು ಕಾಟ ಹೆಚ್ಚಾಗಿ ಸಾರ್ವಜನಿಕರು ನಿದ್ದೇಗೆಡಿಸಿದಂತಾಗಿದೆ 

ಮುದ್ದೇಬಿಹಾಳ, 01; ಪಟ್ಟಣದ ವಿದ್ಯಾನಗರ ಹಾಗೂ ಮಾರುತಿ ನಗರ ಬಡಾವಣೆಯಲ್ಲಿ ಮುಸುಕುದಾರಿ ಧರೋಡೆ ಕೋರರು ಕಾಟ ಹೆಚ್ಚಾಗಿ ಕಾರಣ ಬಡಾವಣೆಯ ಸಾರ್ವಜನಿಕರು ನಿದ್ದೇಗೆಡಿಸಿದಂತಾಗಿದೆ ಜೀವ ಭಯದಲ್ಲಿ ತಿರುಗಾಡದಂತಾಗಿದೆ ಕಾರಣ ಪೋಲಿಸ್ ಬಂಧೊಭಸ್ತ ಒದಗಿಸಿ ನಮಗೆ ಇಂತಹ ಮುಸುಕುದಾರಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸಾರ್ವಜನಿಕರು ಪೋಲಿಸ್  ಠಾಣೆಗೆ ತೆರಳಿ ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ ಅವರಿಗೆ  ಶುಕ್ರವಾರ ಸಂಜೆ ಮನವಿ ಸಲ್ಲಿಸಿದರು. 

  ಈ ವೇಳೆ ವಿದ್ಯಾನಗರ ಬಡಾವಣೆಯ ಪುರಸಭೆ ಸದಸ್ಯೆ ಸಹನಾ ಬಡಿಗೇರ ಹಾಗೂ ಇನ್ನೋಬ್ಬ ಪುರಸಭೆ ಸದಸ್ಯೆ ಪ್ರತಿಭಾ ಅಂಗಡಗೇರಿಯವರು ಮಾತನಾಡಿ ನಮ್ಮ ನಗರದ ನಿವಾಸಿ ಶರಣುಗೌಡ ಬಿರಾದಾರ ವರ ಹೇಮರಡ್ಡಿ ದೇವಸ್ಥಾನದ ಹತ್ತಿರ ನಮ್ಮ ಮನೆ ಇದ್ದು ದಿ, 25 ರಂದು ಮದ್ಯ ರಾತ್ರಿ  ಮಂಕಿ ಕ್ಯಾಪ್ ಧರಿಸಿದ ಕೆಲ ಮುಸುಕು ದಾರಿಗಳು ಬಂದು ನಮ್ಮ ಮನೆ ಬಾಗಿಲು ತಟ್ಟಿ ಬ್ಯಾಟರಿ ಟಾರ್ಚ ಹಿಡಿದು ಒಳಗೆ ಯಾರಿದ್ದಾರೆ ಎಂದು ನೋಡುವುದು ಮಾಡಿದರು ಅದನ್ನು ಗಮನಿಸಿದ ನಾನು ಹೆದರಿಕೊಂಡು ಹೊರಗೆ ಬರಲು ಸಾಧ್ಯವಾಗದೆ ಭಯಭೀತರಾಗಿ ಕುಳಿತೆ ಹೀಗೆ ಕಳೆದ ಮೂರು ದಿನಗಳಿಂದ ಇದೇ ರೀತಿ ಘಟನೆಗಳ ನಡೆಯುತ್ತಿವೆ  ಜೊತೆಗೆ  ಬಡಾವಣೆಯ ಬಹುತೇಕ ಮನೆಗಳಿಗೆ ಇದೇ ರೀತಿಯ ಘಟನೆ ನಡೆಯುತ್ತಿರುವುದನ್ನು ಮನಗಂಡು ಸಾರ್ವಜನಕರು ಒಗ್ಗಟ್ಟಾಗಿ ಅನಿವಾರ್ಯವಾಗಿ ಫೋಲಿ ಠಾಣೆಗೆ ಬಂದು ರಕ್ಷಣೆ ಕೇಳುತ್ತಿದ್ದೇವೆ ಜೊತೆಗೆ ಮನೆ ಮನೆಗೆ ಕೆಲ ವ್ಯಾಪಾರಸ್ಥರ ನೆಪದಲ್ಲಿ ಬಂದು ಮನೆಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದ್ದು ಅಂತಹ ಚಿಲ್ಲರೇ ವ್ಯಾಪಾರಸ್ಥರ ಮೇಲೆ ನಿಗಾವಹಿಸಿ ತನಿಖೆ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದರು. 

ಇದಕ್ಕೆ ಸ್ಪಂದಿಸಿದ ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿಯವರು ಮಾತನಾಡಿ ಮುದ್ದೇಬಿಹಾಳ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿರುವ ಬಗ್ಗೆ ಮಾಹಿತಿ ಇದೇ ಆದರೇ ನಮ್ಮಲ್ಲಿ ಈ ತರ ಘಟನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದರಿಂದ ನಾವೂಕೂಡ ರಾತ್ರಿ ಗಸ್ತು ಇನ್ನಷ್ಟು ಬಲಪಡಿಸಲಾಗುತ್ತದೆ. ಆದಷ್ಟು ಬೇಗ ತಮ್ಮ ಮನೆಗಳಿಗೆ ಒಂದೋಂದು ಸಿ ಸಿ ಕ್ಯಾಮಾರಾಗಳನ್ನು ಅಳವಡಿಸುವುದು ಸೂಕ್ತವಾಗಿ ಇದರಿಂದ ತನಿಖೆಗೆ ಸಹಕಾರಿಯಾಗಲಿದೆ. 

   ಬಂಗಾರ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳನ್ನು ಇಡುವುದನ್ನು ಆದಷ್ಟು ಕಡಿಮೆ ಮಾಡಿ, ಜೊತೆಗೆ ಯಾರೇ ಊರಿಗೆ ಅಥವಾ ಎಲ್ಲೋ ಹೋಗಬೇಕಾದರೇ ಮನೆಗೆ ಬೀಗ ಹಾಕದೇ ಮನೆಯಲ್ಲೊಭ್ಬರನ್ನು ಬಿಟ್ಟು ಪ್ರಯಾಣ ಮಾಡುವುದು ಒಳ್ಳೆಯದು. ದರೋಡೆಕೋರರು ಯಾರು ಇಲ್ಲದ ಬೀಗ ಹಾಕಿರುವ ಮನೆಗಳನ್ನೇ ಟಾರ್ಗೇಟ ಮಾಡಿ ಕಳ್ಳತನ ಮಾಡುತ್ತಾರೆ ನಮ್ಮ ಕರ್ತವ್ಯ ನಾವು ಮಾಡುತ್ತೇವೆ  ಪೋಲಿಸ್ ಜೊತೆಗೆ ಸಾರ್ವಜನಿಕರ ಸಹಕಾರ ನೀಡುವ ಮೂಲಕ ಜಾಗೃತರಾಗಬೇಕು  ಎಂದರು. 

ಈ ವೇಳೆ ಸಂಗನಬಸವ ಹೂಗಾರ, ಗಿ ಟಿ ಮಂಗಳೂರ, ಎನ್ ಎಸ್ ಬಿರಾದಾರ ಎಚ್ ಎನ್ ನಾಗಾವಿ, ಎನ್ ಎನ್ ಬಿರಾದಾರ, ಗಿರಿಜಾ ಮೇಟಿ, ಸುಜಾತಾ ಬಿರಾದಾರ, ಸುನಂದಾ ನಾಟಿಕಾರ, ಲಕ್ಷ್ಮೀ ದೇವರಮನಿ, ರೇಣುಕಾ ಬ ಇರಾದಾರ, ಜೆ ಎಸ್ ಬಿರಾದಾರ, ಕೆ ಎಸ್ ಪಾಟೀಲ ಸೇರಿದಂತೆ ಹಲವರು ಇದ್ದರು.