ಕರೋನ ವಿರುದ್ಧ ಹೋರಾಟ: ಲಿಬಿಯಾದಲ್ಲಿ ಕರ್ಫ್ಯೂ ವಿಸ್ತರಣೆ

ಟ್ರಿಪೋಲಿ, ಮೇ 18,ಕರೋನ ಸೋಂಕು ತಡೆಯುವ ಕಾರಣಕ್ಕಾಗಿ   ಲಿಬಿಯಾ ಸರ್ಕಾರ  ಸೋಮವಾರದಿಂದ  ಜಾರಿಗೆ  ಬರುವಂತೆ ಇನ್ನೂ 10 ದಿನಗಳವರೆಗೆ ಕರ್ಫ್ಯೂ  ವಿಸ್ತರಿಸಿದೆ.ಕರ್ಫ್ಯೂ 1800 ಗಂಟೆಯಿಂದ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ 0600 ಇರಲಿದೆ  ಉಳಿದ ಮುನ್ನೆಚ್ಚರಿಕೆ ಕ್ರಮ ಎಂದಿನಂತೆ  ಮುಂದುವರಿಯಲಿವೆ.ಇದಲ್ಲದೆ, ಮುಂದಿನ ವಾರದಲ್ಲಿ ಪ್ರಾರಂಭವಾಗಲಿರುವ ಈದ್ ಸಮಯದಲ್ಲಿ ಮೂರುದಿನಗಳ  ಕಾಲವೂ  24 ಗಂಟೆಗಳ ಕರ್ಫ್ಯೂ ವಿಧಿಸಲಾಗುವುದು.ಕರೋನ ವಿರುದ್ಧ  ಲಿಬಿಯಾದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ, ಇದರಲ್ಲಿ ಕರ್ಫ್ಯೂ ಹಾಕುವುದು  ಶಾಲೆಗಳು ಮತ್ತು ಮಸೀದಿಗಳನ್ನು ಮುಚ್ಚುವುದು, ಸಾರ್ವಜನಿಕ ಸಭೆಗಳನ್ನು ನಿಷೇಧಿಸುವುದು ಮತ್ತು ಎಲ್ಲಾ ಗಡಿಗಳನ್ನು ಮುಚ್ಚುವುದು ಸೇರಿವೆ.ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, ಲಿಬಿಯಾದಲ್ಲಿ ಇದುವರೆಗೆ ದೃ ಡಪಡಿಸಿದ ಕರೋನ ಪ್ರಕರಣಗಳ  ಸಂಖ್ಯೆ 65 ಆಗಿದ್ದು,  ಇದರಲ್ಲಿ 35 ಚೇತರಿಸಿಕೊಂಡಿದ್ದಾರೆ ಮತ್ತು ಈವರೆಗೆ   ಮೂವರು ಸೋಂಕಿಗೆ ಮೃತಪಟ್ಟಿದ್ದಾರೆ.