ಯಮಕನಮರಡಿ 05: ಸಮೀಪದ ಹತ್ತರಗಿ ಗ್ರಾಮದ ಆರಾಧ್ಯದೈವ ಶ್ರೀ ವೀರಭಧ್ರ ದೇವರ ಜಾತ್ರೆಯು ಇಂದು ದಿ.6 ರಂದು ಪ್ರಾರಂಭವಾಗಿ ದಿ.7 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಮದ್ಯಾಹ್ನ 12 ಗಂಟೆಗೆ ಅಂಬಲಿ ಕೊಡಗಳನ್ನು ವಾದ್ಯಮೆಳಗಳೊಂದಿಗೆ ಮೆರವಣಿಗೆ ಮುಖಾಂತರ ಬರಮಾಡಿಕೊಳ್ಳುವುದು. ಹಾಗೂ ಮದ್ಯಾಹ್ನ ಮಹಾಪ್ರಸಾದ ಇರುತ್ತದೆ. ಸಾಯಂಕಾಲ ಭಜನಾ ಕಾರ್ಯಕ್ರಮ ಹಾಗೂ ಮಂಗಳವಾರ ದಿ 8 ರಂದು ಮುಂಜಾನೆ ವಿವಿದ ಜೋಡೆತ್ತು ಹಾಗೂ ಕುದುರೆ ಗಾಡಿ ಶರ್ಯತ್ತುಗಳು ಮತ್ತು ಶ್ರೀ ಲಕ್ಷ್ಮೀ ದೇವಿಯರಿಗೆ ಊಡಿ ತುಂಬುವ ಕಾರ್ಯಕ್ರಮ ಹಾಗೂ ಮದ್ಯಾಹ್ನ ಮಹಾಪ್ರಸಾದ ಸಾಯಂಕಾಲ ಸರಿಯಾಗಿ 4 ಗಂಟೆಗೆ ಸಕಲ ವಾಧ್ಯಮೇಳದೊಂದಿಗೆ ವೀರಭದ್ರೇಶ್ವರ ದೇವರ ರಥೋತ್ಸವ ಜರುಗಲಿದ್ದು ಅದೇ ದಿವಸ ರಾತ್ರಿ ಶ್ರೀ ಖಾಸಗತೇಶ್ವರ ನಾಟ್ಯ ಸಂಘ ತಾಳಿಕೋಟೆ ಇವರಿಂದ ರೋಕ್ಕ ಇದ್ದಾವಗ ಸೊಕ್ಕಬಾಳ ಎಂಬ ಸುಂದರ ಸಾಮಾಜಿಕ ನಾಟಕ ಜರುಗಲಿದೆ.
ಸದರಿ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸಕಲ ಭಕ್ತಾದಿಗಳು ಶ್ರೀ ವೀರಭದ್ರೇಶ್ವರ ಕೃಪೆಗೆ ಪಾತ್ರರಾಗಬೆಕೆಂದು ಜಾತ್ರಾ ಮಹೋತ್ಸವ ಕಮೀಟಿ ತಿಳಿಸಿದೆ.