ಲೋಕದರ್ಶನರವದಿ
ರಾಣೇಬೆನ್ನೂರು-ಮೇ.20: ಮುಂದಿನ ಪೀಳಿಗೆಯ ಹಿತದೃಷ್ಠಿಯಿಂದ ನೀರಿನ ಕ್ಷಾಮ ತಲೆದೋರದಂತೆ ಮುಂಜಾಗೃತೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ದಿನ ದಿನದಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ಗಿಡಗಳ ನಾಶ ಮಾಡುವುದರಿಂದಲೇ ಇಂತಹ ಬರವನ್ನು ಅನುಭವಿಸಬೇಕಾಗಿದೆ. ಮರ ಗಿಡಗಳು ಬೆಳೆಯಲು ಭೂಮಿಯಲ್ಲಿ ತೇವಾಂಶತೆ ಅಗತ್ಯ ಹಾಗೂ ತೇವಾಂಶತೆ ಹೆಚ್ಚಾಗಲು ಭೂಮಿಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚು ಮಾಡುವ ಕಾರ್ಯವನ್ನು ಮಾಡಿದಾಗ ಮಳೆ ಬೆಳೆ ಮತ್ತು ಸಮೃದ್ಧಿಯಿಂದ ಕೂಡಿರಲು ಸಾಧ್ಯವಾಗುತ್ತದೆ ಎಂದು ಚಿತ್ರ ಕಲಾವಿದ ಹಾಗೂ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಅಧ್ಯಕ್ಷ ಡಾ. ಜಿ.ಜೆ.ಮೆಹಂದಳೆ ಹೇಳಿದರು.
ಅವರು ಗ್ರಾಮಾಂತರದಲ್ಲಿ ಇಂಗು ಗುಂಡಿಗಳನ್ನು ಆರಂಭಸಲು ಒತ್ತಾಯಿಸಿ ಕೊಡಿಯಾಲ ಹೊಸಪೇಟೆ ಗ್ರಾಪಂ. ಪಿಡಿಓ ಪೂಣರ್ಿಮಾ ಅವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಲವೇ ದಿವಸಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಪ್ರತಿವರ್ಷದಂತೆ ಮುಂದಿನ ದಿನಗಳಲ್ಲಿ ನೀರಿನ ಕ್ಷಾಮ ತಲೆದೋರಬಹುದು. ಇದರಿಂದಾಗಿ ಅಂತರ್ಜಲ ಹೆಚ್ಚಾಗುವಂತೆ ನೋಡಿಕೊಳ್ಳುವುದು ಸಕರ್ಾರದ ಆಧ್ಯ ಕರ್ತವ್ಯವಾಗಿದೆ ಎಂದರು.
ಗ್ರಾಸಿಂ ಕಾರಖಾನೆಯ ಗ್ರಾಮಾಭಿವೃದ್ದಿ ಅಧಿಕಾರಿ ರೇಣುಕಮ್ಮ, ದಿನೇಶ ನಾಯ್ಕ, ಗ್ರಾಪಂ ಉಪಾಧ್ಯಕ್ಷ ದಿನೇಶ ಹರಳೆಳ್ಳಪ್ಪನವರ, ಸದಸ್ಯ ಬಸವಣ್ಣೆಪ್ಪ, ಪ್ರಭುಗೌಡ ಎಂ. ಎಚ್. ಸೇರಿದಂತೆ ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.