ಮೆಣಸಿನಕಾಯಿ ಬೆಳೆ ನಾಶ ಮಾಡಿದ ರೈತ

ಲೋಕದರ್ಶನವರದಿ

ಹಾವೇರಿ23: ಕೊರೊನಾ ಹೊಡೆತಕ್ಕೆ ಈಗಾಗಲೇ ರೈತ ಸಮುದಾಯ ನಲುಗಿ ಹೋಗಿದೆ. ಇದೀಗ ಯೋಗ್ಯ ಬೆಲೆ ಸಿಗದ ಕಾರಣ ತಾಲೂಕಿನ ಹನುಮನಹಳ್ಳಿ  ಗ್ರಾಮದ ರೈತನೊಬ್ಬ ತನ್ನ ಜಮೀನಿನಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿ ಬೆಳೆಯನ್ನು  ನಾಶಪಡಿಸಿದ ಘಟನೆ ನಡೆದಿದೆ.  

        ಹನುಮನಹಳ್ಳಿ ಗ್ರಾಮದ ಸುರೇಶ ಪೂಜಾರ ಎಂಬಾತನೇ ಮೆಣಸಿನಕಾಯಿ ಬೆಳೆಯನ್ನು ನಾಶಪಡಿಸಿದ ರೈತ. ಸುರೇಶಪ್ಪ ತನ್ನ 2 ಎಕರೆ ಜಮೀನಿನಲ್ಲಿ ಸಾವಿರಾರು ರೂಪಾಯಿ ಖಚರ್ು ಮಾಡಿ ಹಸಿ ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದರು. ದೇಶದಾದ್ಯಂತ ಲಾಕ್ಡೌನ್ ನಿಂದಾಗಿ ಹಸಿ ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗಲಿಲ್ಲ. ಸರಿಯಾದ ಬೆಲೆ ಸಿಗದ ಕಾರಣ ಕಷ್ಟಪಟ್ಟು ಬೆಳೆದಿದ್ದ ಬೆಳೆಯನ್ನು  ಟ್ರ್ಯಕ್ಟರ್ ನಿಂದ ನಾಶ ಪಡಿಸಿದ್ದಾನೆ.  

       ಹಸಿ ಮೆಣಸಿನಕಾಯಿ ಬೆಳೆದ ರೈತರಿಗೆ ಸರಕಾರ 15 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ. ರೈತನ ಖಾತೆಗೆ ಘೋಷಣೆ ಮಾಡಿದ ಹಣ ಇನ್ನೂ ಸೇರಿಲ್ಲ. ಒಂದು ಕಡೆ ಪರಿಹಾರವೂ ಇಲ್ಲ, ಇನ್ನೊಂದು ಕಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. 

        ಆದ್ದರಿಂದ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲಾಗದೇ ರೈತ ಕಂಗಾಲಾಗಿ, ಮನನೊಂದು ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯನ್ನು ಸಂಪೂರ್ಣವಾಗಿ ಟ್ರ್ಯಕ್ಟರ್ನಿಂದ ರೂಟರ್ ವೆಟರ್ ಹೊಡೆದು  ಹರಗಿಸಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕೆಂದು ರೈತ ಸುರೇಶಪ್ಪ ಪೂಜಾರ ಒತ್ತಾಯಿಸಿದರು.