ಕನ್ನಡಾಂಭೆಯ ಕೀರ್ತಿ ಎಲ್ಲೆಡೆ ಪಸರಿಸಬೇಕು: ಶಾಸಕ ಮಹಾಂತೇಶ ಕೌಜಲಗಿ

ಲೋಕದರ್ಶನ ವರದಿ

ಬೈಲಹೊಂಗಲ:  ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡಾಂಭೆಯ ಕೀತರ್ಿ ಎಲ್ಲೆಡೆ ಪಸರಿಸಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. 

      ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಎದುರು ತಾಲೂಕಾಡಳಿತ, ತಾ.ಪಂ., ಪುರಸಭೆ ಮತ್ತು ಎಲ್ಲ ಸರಕಾರಿ ಕಚೇರಿಗಳು, ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ನಡೆದ ಕನರ್ಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ನಾಡು-ನುಡಿ, ನೆಲ-ಜಲ ಗಡಿ ವಿವಾದ, ಕಾವೇರಿ ಸೇರಿದಂತೆ ಕನ್ನಡ ನಾಡಿಗೆ ಸಂಬಂಧಪಟ್ಟ ವಿಷಯ ಬಂದಾಗ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದಶರ್ಿಸಬೇಕು. ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಡಬೇಕು ಎಂದರು.

     ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದರು. ಮುಖ್ಯೋಪಾಧ್ಯಾಯ ಡಾ.ಷಣ್ಮುಖ ಗಣಾಚಾರಿ ಉಪನ್ಯಾಸ ನೀಡಿದರು. ಇದಕ್ಕೂ ಮೊದಲು ಪಟ್ಟಣದ ಪುರಸಭೆ ಆವರಣದಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಶಾಸಕ ಮಹಾಂತೇಶ ಕೌಜಲಗಿ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ನೆರವೇರಿಸಿದರು.

      ತಾ.ಪಂ.ಅಧ್ಯಕ್ಷೆ ನೀಲವ್ವ ಫಕೀರಣ್ಣವರ, ಉಪಾಧ್ಯಕ್ಷ ಮಲ್ಲನಾಯ್ಕ ಭಾವಿ, ಎಪಿಎಂಸಿ ಅಧ್ಯಕ್ಷ ಭರಮಪ್ಪ ಸತ್ಯನ್ನವರ, ತಾ.ಪಂ.ಇಒ ಸಮೀರ್ ಮುಲ್ಲಾ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಸಮಾಜ ಕಲ್ಯಾಣಾಧಿಕಾರಿ ಮಹೇಶ ಉಣ್ಣಿ, ಸ್ವಾತಂತ್ರ್ಯ ಯೋಧ ಅಣ್ಣಪ್ಪ ಕಂಠಿ, ಪುರಸಭೆ ಸದಸ್ಯರಾದ ಹೇಮಲತಾ ಹಿರೇಮಠ, ಅಂಜನಾ ಬೋಂಗಾಳೆ, ಬಿಇಒ ಪಾರ್ವತಿ ವಸ್ತ್ರದ, ಜಿ.ಬಿ.ತುರಮರಿ, ಮುರಳೀಧರ ಮಾಳೋದೆ, ಆರ್.ಬಿ.ಗೋಕಾಕ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಸಾಹಿತಿ ಚನ್ನಬಸಪ್ಪ ಹೊಸಮನಿ, ಸಿಡಿಪಿಒ ಮಹಾಂತೇಶ ಭಜಂತ್ರಿ, ಶಿವು ಕುರಬೆಟ್ಟ ಹಾಗೂ ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. 

ಬಸವರಾಜ ಭರಮಣ್ಣವರ ನಿರೂಪಿಸಿದರು. ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಸ್ವಾಗತಿಸಿದರು. ಗಾಯಕ ಆನಂದ ಬಡಿಗೇರ ಪ್ರಾಥರ್ಿಸಿ, ನಾಡಗೀತೆ ಹಾಡಿದರು.  ಕನರ್ಾಟಕ ರಾಜ್ಯೋತ್ಸವ ನಿಮಿತ್ತ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ನಡೆಯಿತು. ಇಲ್ಲಿಯ ಪುರಸಭೆ ಆವರಣದಿಂದ ಆರಂಭವಾಗಿ ಹಳೇ ಹನುಮಂತ ದೇವರ ಗುಡಿ ಓಣಿ, ಬಜಾರ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ತಲುಪಿತು. ದಾರಿಯುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸಿದವು. ಶಾಲಾ ಮಕ್ಕಳು ಕ್ರಾಂತಿಕಾರರ, ಯೋಗಿಗಳ ವೇಷಭೂಷಣ ತೊಟ್ಟು ಕಂಗೊಳಿಸಿದರು.