ದೇಶದ ಆರ್ಥಿಕತೆ ಅಪಾಯದಲ್ಲಿದೆ; ಪಿ. ಚಿದಂಬರಂ

ಹೈದ್ರಾಬಾದ್,  ಫೆ  ೮  :    ದೇಶದ  ಜಿಡಿಪಿ (ಒಟ್ಟು ದೇಶಿಯ ಉತ್ಪಾದನೆ) ಈ   ಪ್ರಮಾಣದಲ್ಲಿ   ಹಿಂದೆಂದೂ  ಕುಸಿತ  ಕಂಡಿರಲಿಲ್ಲ ಎಂದು  ಹಿರಿಯ ಕಾಂಗ್ರೆಸ್ ನಾಯಕ,  ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ  ಹೇಳಿದ್ದಾರೆ. 

 ೨೦೨೦ -೨೧ರ ಸಾಲಿನ ಕೇಂದ್ರ ಬಜೆಟ್  ಕುರಿತು  ಆಯೋಜಿಸಿದ್ದ  ಸಭೆ  ಉದ್ದೇಶಿಸಿ ಮಾತನಾಡಿದ ಅವರು,    ದೇಶದ  ಆರ್ಥಿಕ  ಸ್ಥಿತಿಯನ್ನು  ಎಳೆ ಎಳೆಯಾಗಿ     ಪ್ರಸ್ತಾಪಿಸಿದ ಅವರು. ದೇಶದ ಆರ್ಥಿಕತೆ ಅಪಾಯದಲ್ಲಿದೆ. ಆರ್ಥಿಕತೆ,  ಜಿಡಿಪಿ  ಕುಸಿತಕ್ಕೆ   ನೋಟು ರದ್ದತಿ  ಮೊದಲ ಕಾರಣವಾದರೆ,  ಜಿ ಎಸ್ ಟಿ   ಎರಡನೆಯ ಕಾರಣ  ಎಂದು  ಚಿದಂಬರಂ  ವಿಶ್ಲೇಷಿಸಿದರು.  

 ತೀವ್ರ  ನಿಗಾ ಘಟಕ ದಲ್ಲಿರುವ  ದೇಶದ  ಆರ್ಥಿಕತೆಯನ್ನು ಅಲ್ಲಿಂದ   ಹೊರಗೆ  ತರುವ  ಆಲೋಚನೆಯನ್ನೇ ಕೇಂದ್ರ ಸರ್ಕಾರ ಮಾಡುತ್ತಿಲ್ಲ.   ಯಾವುದೇ ವಲಯದಲ್ಲಿ   ತೆರಿಗೆ ಪೂರ್ಣವಾಗಿ    ಸಂಗ್ರಹಿಸಲಾಗುತ್ತಿಲ್ಲ. ಎಲ್ಲಾ ವಲಯಗಳಲ್ಲಿ ಬೆಳವಣಿಗೆ  ಸಾಧ್ಯವಾಗುತ್ತಿಲ್ಲ,  ತೆರಿಗೆ ಸಂಗ್ರಹದಲ್ಲೂ  ನಿರೀಕ್ಷಿತ ಗುರಿ ಸಾಧಿಸಲಾಗುತ್ತಿಲ್ಲ  ಎಂದರು.

ಸಬ್ ಕಾ ಸಾತ್ ... ಸಬ್ ಕಾ ವಿಕಾಸ್  ಎಂದು ದೊಡ್ಡದಾಗಿ  ಹೇಳುವ   ಕೇಂದ್ರ  ಸರ್ಕಾರ    ಬಡವರ  ಆಹಾರ ಭದ್ರತಾ ನಿಧಿಯನ್ನು   ಕಡಿತಗೊಳಿಸಿದೆ  ಎಂದು ಆರೋಪಿಸಿದರು.   ಕೇಂದ್ರ ಸರ್ಕಾರ  ಮಾನವೀಯತೆ  ರಹಿತವಾಗಿ  ಕಾರ್ಯನಿರ್ವಹಿಸುತ್ತಿದ್ದು, ಇದು ಬಡಜನರ   ವಿರೋಧಿ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್   ಸಮ್ಮಾನ್   ಯೋಜನೆಗೂ  ಸರ್ಕಾರ  ಹಣ ಕಡಿತಗೊಳಿಸಿರುವ  ಆರೋಪ  ಕೇಳಿಬರುತ್ತಿದೆ.  ಕೇಂದ್ರ ಸರ್ಕಾರ ತಾನು  ಹೊಂದಿರುವ  ಬಹುಮತದ  ಆಧಾರದ ಮೇಲೆ  ಜನ ವಿರೋಧಿ  ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದೂರಿದರು. ಹೈದರಾಬಾದ್ ನ  ಪ್ರಮುಖ   ರಸ್ತೆಗಳಲ್ಲಿರುವ  ಬ್ರಾಂಡೆಡ್ ಕಂಪನಿಗಳ ಶೋ ರೂಂಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಚೆನ್ನೈನಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಗ್ರಾಹಕರ  ಕೊರತೆಗೆ   ಪ್ರಮುಖ  ಕಾರಣ  ಜನರ  ಬಳಿ ಹಣ   ಇಲ್ಲದಿರುವುದಾಗಿದೆ.  ಆಟೋ ಮೊಬೈಲ್ ವಲಯ  ಉತ್ತಮವಾಗಿದ್ದರೆ, ದೇಶದ ಆರ್ಥಿಕ  ಪರಿಸ್ಥಿತಿ  ಸಂವೃದ್ದಿಯಾಗಿರಲಿದೆ. ಆಟೋ ಮೊಬೈಲ್ ವಲಯ  ಪ್ರಸ್ತುತ ದೇಶದಲ್ಲಿ   ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದೆ ಅನೇಕ ಉದ್ಯಮಿಗಳು ತೆರಿಗೆ ಕಿರುಕುಳ  ತೀವ್ರಗೊಂಡಿದೆ ಎಂದು  ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಚಿದಂಬರಂ ಹೇಳಿದರು.