ತೀವ್ರ ಸುಟ್ಟಗಾಯಗಳಿಂದ, ತಹಶೀಲ್ದಾರ್ ವಿಜಯಾ ರೆಡ್ಡಿ ಚಾಲಕನೂ ಸಾವು

  ಹೈದರಾಬಾದ್, ನ 5:   ತೆಲಂಗಾಣದ  ರಂಗಾರೆಡ್ಡಿ ಜಿಲ್ಲೆಯ  ಅಬ್ದುಲ್ಲಾಪುರಮೆಟ್   ಮಹಿಳಾ ತಹಶಿಲ್ದಾರ್  ವಿಜಯಾರೆಡ್ಡಿ  ಮೇಲೆ  ದುಷ್ಕರ್ಮಿಯೊಬ್ಬ ಸೋಮವಾರ ಹಾಡುಹಗಲೇ ಅವರ ಕಚೇರಿಯಲ್ಲಿ  ಪೆಟ್ರೋಲ್ ಸುರಿದು  ಬೆಂಕಿ ಹಚ್ಚಿ ಬರ್ಬರವಾಗಿ ಕೊಂದ ಘಟನೆಯ ವೇಳೆ, ತಹಶೀಲ್ದಾರ್ ರನ್ನು ರಕ್ಷಿಸಲು ಮುಂದಾಗಿ ತೀವ್ರ ಸುಟ್ಟಗಾಯಗಳಿಗೆ  ಒಳಗಾಗಿದ್ದ  ಅವರ ವಾಹನ ಚಾಲಕ ಗುರುನಾಥಂ  ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ  ಸಾವನ್ನಪ್ಪಿದ್ದಾರೆ.  36ವರ್ಷದ  ಮಹಿಳಾ ತಹಶೀಲ್ದಾರ್    ಮೇಲೆ   ಪೆಟ್ರೋಲ್   ಸುರಿದು   ದುಷ್ಕರ್ಮಿ  ಬೆಂಕಿ ಹಚ್ಚಿದ್ದ    ಸಂದರ್ಭದಲ್ಲಿ   ಸ್ಥಳದಲ್ಲಿದ್ದ   ಚಾಲಕ  ಗುರುನಾಥಂ ರಕ್ಷಿಸಲು ಮುಂದಾಗಿ ಶೇ 80ರಷ್ಟು ಗಾಯಗೊಂಡಿದ್ದರು.    ನಂತರ  ಅವರನ್ನು   ಕಂಚನ್ ಬಾಗ್  ನಲ್ಲಿರುವ  ಅಪೋಲೋ  ಡಿ ಆರ್ ಡಿಓ ಆಸ್ಪತ್ರೆಗೆ   ಸ್ಥಳಾಂತರಿಸಲಾಗಿತ್ತು. ರೈತ ಹಾಗೂ ಭೂಮಿ ಖರೀದಿಸಿ, ಮಾರಾಟ ಮಾಡುತ್ತಿದ್ದ   ಕುರರ್ಾ ಸುರೇಶ್  ಎಂಬ ವ್ಯಕ್ತಿ    ತಹಶೀಲ್ದಾರ್  ವಿಜಯಾ ರೆಡ್ಡಿ ಅವರ ಮೇಲೆ   ಪೆಟ್ರೋಲ್  ಸುರಿದು   ಬೆಂಕಿ ಹಚ್ಚಿ  ಕೊಂದಿದ್ದ.   ಈ   ಘಟನೆಯಲ್ಲಿ   ಆರೋಪಿ  ಸುರೇಶ್ ಸಹ   ತೀವ್ರವಾಗಿ ಗಾಯಗೊಂಡಿದ್ದು,  ಪ್ರಸ್ತುತ ಆತನಿಗೆ ಉಸ್ಮಾನಿಯಾ  ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ. ಆತನ ಸ್ಥಿತಿಯೂ  ಚಿಂತಾಜನಕವಾಗಿದೆ.   ಘಟನೆಯ ವೇಳೆ ಗಾಯಗೊಂಡಿದ್ದ  ಕಚೇರಿ ಅಟೆಂಡರ್  ಚಂದ್ರಯ್ಯ ಅವರೂ  ಸಹ  ಅಪೋಲೋ ಡಿಆರ್ ಡಿಓ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.