ಕೋವಿಡ್‍-19 ನಡುವೆ ಜುಲೈನಲ್ಲಿ ದೇಶಿಯ ಟೆನಿಸ್ ಋತು ಆರಂಭ ಸಾಧ್ಯತೆ

ನವದೆಹಲಿ, ಏ.20,ಕೋವಿಡ್‍-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಆಟಗಾರರನ್ನು ಬೆಂಬಲಿಸಲು ಅಖಿಲ ಭಾರತ ಟೆನಿಸ್ ಫೆಡರೇಶನ್ (AITA) ಶನಿವಾರ ಹೊಸ ದೇಶೀಯ ಋತುವಿನ ವೇಳಾಪಟ್ಟಿ ಪ್ರಕಟಿಸಿದೆ. ಪ್ರಸಕ್ತ ಋತುವು ಜುಲೈನಲ್ಲಿ ಪ್ರಾರಂಭಿಸಲು ಎಐಟಿಎ ಗುರಿಯನ್ನು ಹೊಂದಿದೆ. ಕೊರೊನಾ ವೈರಸ್ ಹರಡಿದ ಕಾರಣ ಪ್ರಪಂಚದಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.ಜುಲೈ ವೇಳೆಗೆ ಸರಿಯಾಗಲಿದೆ ಎಂದು ಎಐಟಿಎ ಆಶಿಸಿದೆ. ಭಾರತದಲ್ಲಿ ಈ ಕಾಯಿಲೆಯಿಂದ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ. ವಿಶ್ವಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. “ಕೋವಿಡ್ -19 ಸಾಂಕ್ರಾಮಿಕದಿಂದ ಭಾರತೀಯ ಟೆನಿಸ್ ಆಟಗಾರರು ಮತ್ತು ವಿಶ್ವ ಟೆನಿಸ್ ವೇಳಾಪಟ್ಟಿಗೆ ಹೊಡೆತ ಬಿದ್ದಿದೆ. ಈ ಕಾರಣದಿಂದಾಗಿ, ವಿಶ್ವದಾದ್ಯಂತ ಸ್ಪರ್ಧೆಗಳನ್ನು ಅನಿರ್ದಿಷ್ಟವಾಗಿ ರದ್ದುಗೊಳಿಸಲಾಗುತ್ತಿದೆ” ಎಂದು ಎಐಟಿಯು ತಿಳಿಸಿದೆ. ಮುಂದಿನ ಎರಡು ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಘೋಷಿಸಲಾಗಿದೆ. ಅಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಸ್ಥಗಿತಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜುಲೈನಲ್ಲಿ ದೇಶೀಯ ಅಧಿವೇಶನವನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ” ಎಂದು ಹೇಳಿದೆ.