ಈಶ್ವರನನ್ನು ನೆನೆದರೆ ಬಂದ ಕಷ್ಟಗಳು ದೂರ

ಲೋಕದರ್ಶನ ವರದಿ

ಮುಗಳಖೋಡ 22: ಮಹಾಶಿವರಾತ್ರಿಯಂದು ಈಶ್ವರನನ್ನು ನೆನೆದರೆ ಬಂದ ಕಷ್ಟಗಳು ದೂರವಾಗಿ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ.  ಅಖಂಡ ಭಾರತದಲ್ಲಿ ಮಠ ಮಾನ್ಯ, ಸಾಧು ಸಂತರು, ಮಠಾಧಿಶರಿಗೆ ಪೂಜ್ಯ ಭಾವನೆ, ಭಕ್ತಿಯಿಂದ ನಡೆದುಕೊಳ್ಳುವುದು ಭಾರತೀಯರ ಧರ್ಮ.  ಇಂತಹ ದೇಶದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಸುದೈವ ಎಂದು ಸ,ರಿ,ಗ,ಮ,ಪ,2011 ರ ಚಾಂಪಿಯನ್ ಹಾಗೂ ಚಲನಚಿತ್ರ ನಟ ಚನ್ನಪ್ಪ ಹುದ್ದಾರ ಹೇಳಿದರು.

  ಅವರು ಪಟ್ಟಣದ ಶ್ರೀ ಈಶ್ವರಲಿಂಗೇಶ್ವರ ಹಿರೇಮಠಕ್ಕೆ ಆಗಮಿಸಿ ಮಹಾಶಿವರಾತ್ರಿ ನಿಮಿತ್ಯ ಹಮ್ಮಿಕೊಂಡ ಈಶ್ವರಲಿಂಗೇಶ್ವರ ಕತೃಗದ್ದುಗೆ, ಶಿವ ಪಾರ್ವತಿ, ಗಣಪತಿ ಮಹಾಪೂಜೆ, ರುದ್ರ್ರಾಭೀಷೇಕ, ಸಹಸ್ರ ನಾಮಾವಳಿ ಹಾಗೂ ಸಂಗೀತ  ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿದ ಕಣ್ಣೂರ ಮಠದ ದಯಾನಂದರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ ಶಿವನು ಭಾರತೀಯ ಸಂಸ್ಕೃತೀಯ ಪ್ರತಿಕ. ಶಿವನನ್ನು ಲಿಂಗರೂಪದಲ್ಲಿ ಪೂಜಿಸಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ನಮ್ಮ ದೇಶ ಸುಸಂಸ್ಕೃತ ದೇಶ, ನಾಡಿನ ಶ್ರ್ರೇಷ್ಠ ಕಲಾವಿದರನ್ನು ಸಾಧಕರನ್ನು ಹಾಗೂ ಬಾಲಪ್ರತಿಭೆೆಗಳನ್ನು ನಾಡಿನ ಜನರು ಬೆಳೆಸಬೇಕು. ಜಾತಿ, ಮತ, ಪಂಥಗಳೆನ್ನದೆ ಭಾವೈಕ್ಯತೆಯಿಂದ ಧಾಮರ್ಿಕ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂದು ಹೇಳಿದರು. ಚಲನಚಿತ್ರ ಕಲಾವಿದ ಚನ್ನಪ್ಪ ಹುದ್ದಾರ  ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅವರನ್ನು ಶ್ರೀ ಮಠದ ವತಿಯಿಂದ ಸಚಿನ ಶಾಸ್ತ್ರಿ, ಶ್ರೀಶೈಲ ಹಿರೇಮಠ ಕೈಗೆ ಬೆಳ್ಳಿ ಕಡಗನ್ನು ಹಾಕಿ ಸತ್ಕರಿಸಿದರು. 

ಇದೇ ವೇಳೆ ಚನ್ನಪ್ಪ ಹುದ್ದಾರ ಅವರನ್ನು ಊರಿನ ಮಹಿಳಾ ಪ್ರಮುಖರಾದ ಅಣ್ಣಪೂರ್ಣಾ ಯರಡತ್ತಿ, ಲತಾ ಹುದ್ದಾರ ಅವರು ಯಲ್ಲಾಲಿಂಗೇಶ್ವರ, ಶ್ರೀ ಸಿದ್ದರಾಮೇಶ್ವರ ಹಾಗೂ ಶ್ರೀ ಮುರುಘರಾಜೇಂದ್ರರರ ಭಾವಚಿತ್ರವಿರುವ ಸವಿನೆನಪಿನ ಕಾಣಿಕೆಯನ್ನು ನೀಡಿ ಶಾಲು ಹೊದಿಸಿ ಸತ್ಕರಿಸಿದರು.

  ರುಧ್ರಾಭೀಷೇಕವನ್ನು ಸಚಿನ ಶಾಸ್ತ್ರಿಗಳು ನಡೆಸಿದರು. ಈ ಸಂದರ್ಭದಲ್ಲಿ ಅಲ್ಲಯ್ಯಾ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಮುಪ್ಪಯ್ಯಾ ಹಿರೇಮಠ, ಅಶೋಕ ಕೊಪ್ಪದ, ಶಿವಪ್ಪ ಹಳ್ಳೂರ, ಮಲ್ಲಪ್ಪ ದಾಶ್ಯಾಳ, ಶಿವಬಸು ಕಾಪ್ಸಿ, ರಮೇಶ ಯಡವಣ್ಣವರ ಸುರೇಶ ಹೋಸಪೇಟಿ, ರಮೇಶ ಕಾಪ್ಸಿ, ಅಂಬರೀಶ ಕಂಠಿಕಾರ, ಲಕ್ಷ್ಮಣ ಖೇತಗೌಡ, ಗೋಪಾಲ ಯಡವಣ್ಣವರ, ವಿಠ್ಠಲ ಯಡವಣ್ಣವರ, ಭೀಮರಾಯ ಖೇತಗೌಡರ, ಶ್ರೀಶೈಲ ಹಿರೇಮಠ, ಮುರಘೇಶ ಹಿರೇಮಠ, ದೈ.ಶಿಕ್ಷಕ ಶ್ರೀಕಾಂತ ಖೇತಗೌಡರ, ಲತಾ ಹುದ್ದಾರ, ಅಣ್ಣಪೂರ್ಣಾ ಯರಡತ್ತಿ, ಸುಮಂಗಲಾ ಹಿರೇಮಠ ಉಪಸ್ಥಿತರಿದ್ದರು.