ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಲು ಆಗ್ರಹThe demand for a seven-hour power supply
Lokadrshan Daily
12/26/24, 8:58 AM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಅಥಣಿ 08: ತಾಲೂಕಿನ ಜಂಬಗಿ ಹಾಗೂ ಐಗಳಿ ವಿದ್ಯತ್ ವಿದ್ಯುತ್ ವಿತರಣಾ ವಲಯ ಕೇಂದ್ರಗಳಿಂದ ಕನಿಷ್ಠ 7 ಗಂಟೆಯಾದರೂ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಕನರ್ಾಟಕ ರಕ್ಷಣಾ ವೇದಿಕೆಯ ರೈತ ಘಟಕದ ಅಧ್ಯಕ್ಷ ಇಮ್ರಾನ್ ಮುಕ್ತಾರ ಪಟೇಲ ಆಗ್ರಹಿಸಿದರು. ಮಳೆಗಾಲದ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಸತತ ಬರಗಾಲ ಪರಿಸ್ಥಿತಿಯಿಂದ ತತ್ತರಿಸಿರುವ ತಾಲೂಕಿನ ಉತ್ತರ ಹಾಗೂ ಪೂರ್ವ ಭಾಗ ಕೆರೆ, ತೆರೆದ ಹಾಗೂ ಕೊಳವೆ ಬಾವಿಗಳಲ್ಲಿ ನೀರು ತುಂಬಿಕೊಂಡಿದೆ ಆದರೆ ವಿದ್ಯುತ್ ಪೂರೈಕೆ ಸಮಯಕ್ಕೆ ಸರಿಯಾಗಿ ಮತ್ತು ಕಡಿಮೆ ಅವಧಿಗೆ ಪೂರೈಕೆಯಾಗುತ್ತಿರುವ ಪರಿಣಾಮ ನೀರನ್ನು ಕೃಷಿಗೆ ಬಳಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಎಂದ ಅವರು ತಕ್ಷಣ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳು ಐಗಳಿ ಹಾಗೂ ಜಂಬಗಿ ಹೆಸ್ಕಾಂ ವಿದ್ಯುತ್ ವಿತರಣಾ ವಲಯ ಕೇಂದ್ರಗಳಿಂದ 7 ಗಂಟೆ ವಿದ್ಯುತ್ ಪೂರೈಕೆ ಮಾಡದೇ ಹೋದಲ್ಲಿ ಅನಿವಾರ್ಯವಾಗಿ ರೈತ ಘಟಕದ ನೇತೃತ್ವದಲ್ಲಿ ಬಾರಕೋಲ್ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಅಧ್ಯಕ್ಷ ಬಸನಗೌಡಾ ಪಾಟೀಲ ಮಾತನಾಡಿ, ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ಸಹಕಾರಿ ಮತ್ತು ಖಾಸಗಿ ಕಾರಖಾನೆಗಳು ಎಫ್.ಆರ್.ಪಿ ದರ ನೀಡಬೇಕು. ಯಾವ ಕಾರಖಾನೆಗಳು ರೈತರಿಗೆ ಎಫ್.ಆರ್.ಪಿ ದರ ನೀಡುವುದಿಲ್ಲವೋ ಅಂತಹ ಕಾರಖಾನೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಅವರು ವಿದ್ಯುತ್ ಪೂರೈಕೆಯಲ್ಲಿ ಅಡತಡೆ ಆಗುತ್ತಿರುವದರಿಂದ ರೈತರಿಗೆ ತೀವೃ ತೊಂದರೆ ಉಂಟಾಗುತ್ತಿದ್ದು, ಜಂಬಗಿ ಹಾಗೂ ಐಗಳಿ ವಿದ್ಯುತ್ ವಿತರಣಾ ವಲಯ ಕೇಂದ್ರಗಳ ಅಧಿಕಾರಿಗಳಿಗೆ ಹೆಸ್ಕಾಂ ಅಧಿಕಾರಿಗಳು 7 ಗಂಟೆ ವಿದ್ಯುತ್ ಪೂರೈಕೆಗೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕಾಮರ್ಿಕರಿಗೆ ಕಳೆದ 5 ತಿಂಗಳಿನಿಂದ ಕೂಲಿ ಹಣವನ್ನು ನೀಡಿಲ್ಲ ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ಕಾಮರ್ಿಕರು ಬರುತ್ತಿಲ್ಲ ಇದರಿಂದ ಉದ್ಯೋಗ ಖಾತ್ರಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಆಶ್ರಯ ಮನೆಗಳ ಅನುದಾನ ಬಿಡುಗಡೆಗೊಳಿಸಿಲ್ಲ ಹೀಗಾಗಿ ಬಡ ವರ್ಗ ಸಂಕಷ್ಟದಲ್ಲಿದ್ದು ತಕ್ಷಣ ಆಶ್ರಯ ಮನೆಗಳ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಕರವೇ ನಗರ ಅಧ್ಯಕ್ಷ ಶಬ್ಬೀರ ಸಾತಬಚ್ಚೆ ಉಪಸ್ಥಿತರಿದ್ದರು.