ಗೂಡಂಗಡಿ ತೆರವು ವಿರೋಧಿಸಿ 23 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಡಿ.8 ರಿಂದ ಆಮರಣ ಉಪವಾಸ ಆರಂಭಿಸಲು ನಿರ್ಧಾರ

The decision to start a fast to death from December 8 is the dharna satyagraha that has been going o

ಗೂಡಂಗಡಿ ತೆರವು ವಿರೋಧಿಸಿ 23 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಡಿ.8 ರಿಂದ ಆಮರಣ ಉಪವಾಸ ಆರಂಭಿಸಲು ನಿರ್ಧಾರ

ತಾಳಿಕೋಟಿ 04 : ಪಟ್ಟಣದಲ್ಲಿ ಪುರಸಭೆ ವತಿಯಿಂದ ನವೆಂಬರ್ 12 ರಂದು ನಡೆದ ಅತಿಕ್ರಮಣ ತೆರವು ಕಾರ್ಯಾಚರಣೆಯಲ್ಲಿ ನಮ್ಮ ಗೂಡಂಗಡಿಗಳನ್ನು ಕಳೆದುಕೊಂಡ ಕಳೆದ 23 ದಿನಗಳಿಂದ ಧರಣಿ ಸತ್ಯಾಗ್ರ ನಡೆಸುತ್ತಿದ್ದರೂ ಅಧಿಕಾರಿಗಳಿಂದ ಯಾವುದೇ ರೀತಿಯ ಸೂಕ್ತ ಸ್ಪಂದನೆ ಸಿಗದ ಕಾರಣ ಡಿ.08 ರಿಂದ ಆಮರಣ ಉಪವಾಸ ಆರಂಭಿಸಲು ನಿರ್ಧಾರಿಸಿದ್ದೇವೆ ಎಂದು ಶ್ರೀ ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ವಿಜಾಪುರ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ನಮ್ಮ 23 ಗೂಡಂಗಡಿಗಳನ್ನು ನ್ಯಾಯಾಲಯದ ತಡೆ ಆಜ್ಞೆಯನ್ನೂ ಪರಿಗಣಿಸದೇ ತೆರವುಗೊಳಿಸಲಾಗಿದೆ ಇದರ ವಿರುದ್ಧ ನಾವು ನ್ಯಾಯ ಪಡೆಯಲು ಕಳೆದ 23 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ ಹೋರಾಡುತ್ತಿದ್ದರೂ ಯಾರೊಬ್ಬ ಅಧಿಕಾರಿಯಾಗಲಿ ಜನಪ್ರತಿನಿಧಿಗಳಾಗಲಿ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುವ ಕೆಲಸ ಮಾಡಲಿಲ್ಲ, 23 ಕುಟುಂಬಗಳು ಇಂದು ಬೀದಿಗೆ ಬಂದಿವೆ, ಕೆಲಸ ಕಳೆದುಕೊಂಡು ಸಂಕಷ್ಟದ ದಿನಗಳನ್ನು ಎದುರಿಸುತ್ತಿವೆ ಮಾನವೀಯ ನೆಲೆಯಲ್ಲಿಯೂ ಅಧಿಕಾರಿಗಳು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಆದಕಾರಣ ನಾವು ನ್ಯಾಯವನ್ನು ಪಡೆಯಲಿಕ್ಕಾಗಿ ಡಿಸೆಂಬರ್ 8 ರಿಂದ ಆಮರಣ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದೇವೆ ಪರಿಸ್ಥಿತಿ ಬಿಗಡಾಯಿಸುವ ಮೊದಲೇ ಮೂರು ದಿನದ ಗಡುವಿನ ಅವಧಿಯಲ್ಲಿ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಹರಳಯ್ಯ ಸಮಾಜದ ಮುಖಂಡರಾದ ಗೋಪಾಲ ವಿಜಾಪುರ, ಮದರೆಪ್ಪ ವಿಜಾಪುರ, ಜಗದೀಶ ಬಿಜಾಪುರ, ಬಸವರಾಜ ವಿಜಾಪುರ, ಚಂದ್ರಶೇಖರ ವಿಜಾಪುರ, ಬಸವರಾಜ ಯ. ವಿಜಾಪುರ, ಕಾಶಿನಾಥ ಮಬ್ರೂಮಕರ, ನಾಗರಾಜ ವಿಜಾಪುರ, ಲಕ್ಷ್ಮಣ ಬಿಜಾಪುರ, ದುಂಡಪ್ಪ ಇಲಕಲ್, ಎಲ್ಲಪ್ಪ ಇಲಕಲ್, ಬಾಬು ಮಬ್ರು ಮಕರ,ರಾಮಕೃಷ್ಣ ವಿಜಯಪುರ,ಗಣೇಶ ಅಗರ್ವಾಲ್ ಪ್ರಸನ ಮಬ್ರುಮಕರ,ಕುಮಾರ ವಿಜಾಪುರ,ಆಕಾಶ ಬಿಜಾಪುರ, ಪದ್ಮಾವತಿ ಮಬ್ರೂಮಕರ, ಸರೋಜವ್ವ ಬಿಜಾಪುರ,ನೀಲವ್ವವಿಜಾಪುರ ಇದ್ದರು.