ಶ್ರೀನಗರ, ಮೇ 18,ಕೋವಿಡ್-19 ಸೋಂಕಿನಿಂದ ಹಿರಿಯ ಮಹಿಳೆ ಹಾಗೂ ಪುರುಷರೊಬ್ಬರು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು , ಕೇಂದ್ರಡಾಳಿತ ಪ್ರದೇಶವಾದ ಜಮ್ಮು ಕಾಶ್ಮೀರದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.ನಾಲ್ವರು ಕಳೆದ 72 ಗಂಟೆಗಳಲ್ಲಿ ಸೋಂಕಿನಿಂದ ಮೃತಪಟ್ಟಿದ್ದು, 6 ಮಂದಿ 8 ದಿನಗಳಲ್ಲಿ ಮರಣಹೊಂದಿದ್ದಾರೆ. ಮೇ 11 ರಿಂದ 17ರೊಳಗೆ ಒಂದೇ ವಾರದಲ್ಲಿ ಇದು ದಾಖಲೆಯ ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆ ಪಾಸಿಟಿವ್ ಸೋಂಕು ಕಂಡುಬಂದ 65 ವರ್ಷದ ಮಹಿಳೆಯನ್ನು ಎದೆರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮೃತ ಮಹಿಳೆ ಕುಲ್ಗಾಮ್ ನಿವಾಸಿಯಾಗಿದ್ದು, ಎಸ್‌ಡಿಹೆಚ್ ಚಿಕಿತ್ಸೆಗಗಿ ಎಸ್‌ಎಚ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಅವರಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿತ್ತು. ಫಲಿತಾಂಶದ ನಂತರ, ಅವರನ್ನು ಸಿಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮಹಿಳೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.