ಸಾಲು ಬಾಣಂತಿಯರ ಸಾವು ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ-ಗಂಗೀರೆಡ್ಡಿ.
ಬಳ್ಳಾರಿ 06: ರಾಜ್ಯದಲ್ಲಿ ಈ ವರ್ಷ ಒಂದು ನೂರಕ್ಕೂ ಹೆಚ್ಚು ಬಾಣಂತಿಯರ ಸಾವಾಗಿದ್ದು. ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು ಎಂಬ ವಿರೊದ ಪಕ್ಷಗಳ ಹೇಳಿ ಶುದ್ದ ಸುಳ್ಳ ಇದರಲ್ಲಿ ತಮ್ಮ ಕೈವಾಡ ಇರಬಹುದೇ ಎಂಬು ಅನುಮಾನ ಮೂಡುತ್ತಿದೆ ಎಂದು ಅಖಿಲ ಭಾರತ ಜನಗಣ ಒಕ್ಕೂಟದ ರಾಷ್ಟಯ ಅಧ್ಯಕ್ಷರಾದ ಗಂಗೀರೆಡ್ಡಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.ನಿನ್ನೆ ಜಿಲ್ಲಾ ಅಸ್ಪತ್ರೆಗೆ ಬೇಟಿ ನಿಡಿದ ಮಾಜಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದು ತಮ್ಮ ತಲೆಯ ಕೂದಲು ತಾವೆ ಕಿತ್ತು ಕೊಂಡಂತಿದೆ. ಮಾತು ಮಾತಿಗೂ ಸಿಬಿಐ ಎನ್ನುವ ಇವರು ರಾಜ್ಯದಲ್ಲಿನ ಎಸ್ ಐ.ಟಿ ಯನ್ನೆ ಮರೆತು ಬಿಟ್ಟೀದ್ದಾರೆ.ಗಲ್ಲಿ ಗಲ್ಲಿಗೂ ಸಿಬಿಐ ಅವಶ್ಯಕತೆ ಇಲ್ಲ ಎಸ್.ಐ.ಟಿ ಇದೆ ಸೂಕ್ತ ತನಿಕೆ ನಡೆಸುತ್ತೆ.ಸಿಬಿಐಗೆ ಇನ್ನು ಬಿಡುವಿದ್ದರು ಕೊವಿಡ್ ಸಮಯದಲ್ಲಿ ಜರುಗಿದ ಅಕ್ರಮಗಳ ವಿರುದ್ದ ತನಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಚಿವರ ವಿರುದ್ದ ಕಿಡಿ ಕಾರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗುಣಮಟ್ಟದ ಅಧಿಕಾರ ನಡೆಸುತ್ತಿದೆ ಕೋಟ್ಯಾಂತರ ಬಡವರಿಗೆ ಅಕ್ಷಿಇಜನ್ ನಂತಿದೆ.ಸರ್ಕಾರದ ವಿರುದ್ದ ಗೂಬೆ ಕೂರಿಸುವ ಕೆಲಸ ಬಿಟ್ಟ ಇನ್ನೂದರೂ ಒಳ್ಳೆಯ ಕಾರ್ಯ ಗಳನ್ನು ಮಾಡಿ ಜನರ ಮನಸ್ಸುಗೆಲ್ಲಿ ಎಂದು ಸಲಹೆ ನೀಡಿದರು.