ಲೋಕದರ್ಶನ ವರದಿ
ಮುದಗಲ್ಲ 10: ಪಟ್ಟಣದ ಕಿಲ್ಲಾದಲ್ಲಿರುವ ಹಜರತ ಹುಸೆನ್ ಪೀರ ಹಾಗೂ ಮೇಗಳಪೇಟೆಯಲ್ಲಿರುವ ಹಜರತ್ ಹಸನ್ ಪೀರಗಳ (ದೇವರು)ಕತ್ತಲ್ ರಾತ್ರಿಯು ಅತ್ಯಂತ ಶ್ರದ್ಧೆ-ಭಕ್ತಿಯೊಂದಿಗೆ ಸೋಮವಾರ ರಾತ್ರಿ ಜರುಗಿತು.
ಮೊಹರಂ ಹಬ್ಬದ ಒಂಭತ್ತನೆ ದಿನದಂದು ಹಜರತ್ ಮೌಲಾಲಿ ಪೀರರ ಮಕ್ಕಳು ಎಂದು ಹೆಳಲಾಗುವ ಹಸನ ಪೀರ ಹಾಗೂ ಹುಸೇನ ಪೀರರ ಕತ್ತಲ ರಾತ್ರಿಯಾದ ಸೋಮುವಾರ ರಾತ್ರಿ ಮೂಲ ದರ್ಗಾದಿಂದ ದೇವರುಗಳನ್ನು ಹೊತ್ತು ನಗಾರಿ ಭಾರಿಸುತ್ತ, ಶಹನಾಯಿ, ತಮಟೆ, ಬಾಜಭಜೆಂತ್ರಿ ಮೇಳದೊಂದಿಗೆ ಮುತ್ಯಾನ ದರ್ಗಾ ಮತ್ತು ಹವಾಲದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೆ ಕೋಟೆಯ ಹೊರ ಭಾಗದ ಬಾಗಲಕೋಟೆ ರಸ್ತೆಯಲ್ಲಿ ಮೇಗಳಪೇಟೆಯ ಹಜರತ್ ಹಸನ್ ಪೀರ ಸವಾರಿ ಮಾಡಲಾಯಿತು. ಕತ್ತಲ ರಾತ್ರಿಯಂದು ಸೋಮುವಾರ ರಾತ್ರಿ- ಮಂಗಳವಾರ ಬೆಳಗಿನ ಜಾವ ಸಾವಿರಾರು ಭಕ್ತರು ತಾವು ಬೇಡಿಕೊಂಡಿದ್ದ ಹರಕೆ ತೀರಿಸಲು ಕಬ್ಬಿಣದ ತಂತಿಗೆ ಕೊಬ್ಬರಿ ಅಂಟಿಸಿ ಪೀರಗಳ ಮುಂದೆ ಸುಟ್ಟರೆ, ಮತ್ತೆ ಕೆಲವರು ಎಣ್ಣೆ ದೀಪದ ಪಂಜೀನ ಸೇವೆ ಸಲ್ಲಿಸಿದರು. ಹಸನ್-ಹುಸೇನ ಪೀರಾಗಳ ಸವಾರಿಗೆ ಸಾವಿರಾರು ಭಕ್ತರು ಸೇರಿದ್ದರು.