ಕೊಲೆ ಯತ್ನದ ಅಪರಾಧಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ
ಕಾರವಾರ 14: ಕ್ಯಾಸಲರಾಕ್ ನಿವಾಸಿ ರಮೇಶ್ ಗುಂಡು ಪಾವಲೆ ಎಂಬಾತ ಸುಜಾತಾ ಪಾವಲೆ ಎಂಬ ಮಹಿಳೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿರಸಿ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗೆ ಹತ್ತು ವರ್ಷ ಸಾದಾ ಕಾರಗೃಹ ಶಿಕ್ಷೆ ವಿಧಿಸಿದ್ದಾರೆ.
ಶುಕ್ರವಾರ ಈ ತೀರ್ು ಬಂದಿದೆ.ಕೊಲೆ ಆರೋಪಿ ರಮೇಶ್ ಪಾವಲೆಗೆ ಹತ್ತು ವರ್ಷ ಸಾದಾ ಕಾರಾಗೃಹ ಶಿಕ್ಷೆ ಜೊತೆಗೆ 19 ಸಾವಿರ ದಂಡ ಹಾಗೂ ಸಂತ್ರಸ್ತೆ ಸುಜಾತಾಗೆ 10 ಸಾವಿರ ನೀಡಲು ನ್ಯಾಯಾಧೀಶ ಕಿರಣ್ ಕಿಣಿ ಆದೇಶ ನೀಡಿದ್ದಾರೆ. ಅಲ್ಲದೆ ಸುಜಾತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹೆಚ್ಚಿನ ನೆರವು ಪಡೆಯಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.29 ಮೇ 2020 ರಂದು ಕ್ಯಾಸರಾಕ್ (ಜೊಯಿಡಾ)ದ ಮಾರ್ಕೆಟ್ ರಸ್ತೆಯಲ್ಲಿ ಆಸ್ತಿ ವಿವಾದ ಕಾರಣಕ್ಕೆ ಸುಜಾತ ಮೇಲೆ ಕೊಲೆ ಯತ್ನ ನಡೆದಿತ್ತು. ದೇವಿದಾಸ ಪಾವಲೆ ಹುಡುಕುತ್ತಾ ಬಂದ ರಮೇಶ್ ಪಾವಲೆ ಸುಜಾತಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಾರ್ ನಲ್ಲಿ ಪರಾರಿಯಾಗಿದ್ದ. ಈ ಘಟನೆ ಸಂಬಂದ ರಮನಗರ ಪಿಎಸ್ ಐ ಕಿರಣ್ ಪಾಟೀಲ್ ನ್ಯಾಯಾಲಯಕ್ಕೆ ಚಾರ್ಜ ಶೀಟ್ ಹಾಕಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಮ್ .ಮಳಗೀಕರ್ ಸಮರ್ಥ ವಾದ ಮಂಡಿಸಿದ್ದರು......