ದೇಶದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ; ಬಿಜೆಪಿ

ನವದೆಹಲಿ, ಡಿ 17:        ಜಿಎಸ್ ಟಿ ಪರಿಷತ್ ಸಭೆಗೆ ಒಂದು ದಿನ ಬಾಕಿಯಿರುವಾಗಲೇ ಬಿಜೆಪಿ ಭಾರತದ ಆರ್ಥಿಕತೆ ಒತ್ತಡ ಸನ್ನಿವೇಶದಲ್ಲಿದೆ ಎಂಬ ಹೇಳಿಕೆ ನೀಡಿದೆ. 

ಆದರೆ, ದೇಶ  ಆ ಕುರಿತು ನಕಾರಾತ್ಮಕವಾಗಿ ಯೋಚಿಸಬಾರದು ಎಂಬ ಸಮರ್ಥನೆಯನ್ನೂ ನೀಡಿದೆ. 

ಬ್ಯುಸಿನೆಸ್ ಚೇಂಬರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ದೇಶದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ನಾವು ನಿರಾಕರಿಸುವುದಿಲ್ಲ. ಆದರೆ ಅದರ ಬಗ್ಗೆ ಆತಂಕಪಡಬೇಕಿಲ್ಲ. ಕೆಲವೆಡೆ ಭಾವನಾತ್ಮಕ ಅಂಶಗಳು ಪರಿಸ್ಥಿತಿಯ ನೈಜ ಅಥರ್ೆಸುವಿಕೆಗೆ ತೊಂದರೆಯುಂಟುಮಾಡುತ್ತಿದೆ ಎಂದರು.   

ರಾಜ್ಯಗಳ ಪ್ರಗತಿ ದೇಶದ ಪ್ರಗತಿಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.   

ದೇಶದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ದೇಶದ ಆರ್ಥಿಕತೆಗೆ ಧಕ್ಕೆ ತರುತ್ತದೆ ಎಂದು  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ ಬೆನ್ನಲ್ಲೇ ರಾಮ್ ಮಾಧವ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.