ಶಿಕ್ಷಣ ಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ: ಶ್ರೀಗಳು

The contribution of the Matha Venerables to the field of education is immense: Sri

ಬೀಳಗಿ 13: ಎಂಟು ದಶಕಗಳ ಹಿಂದೆ ಶಿಕ್ಷಣಕ್ಷೇತ್ರಕ್ಕೆ ಮಠ ಮಾನ್ಯಗಳ ಕೊಡುಗೆ ಅಪಾರ. ಅಂದಿನಿಂದ ಇಂದಿನವರೆಗೆ ಶಿಕ್ಷಣದ ಗುಣಮಟ್ಟವನ್ನು ಉಳಿಸಿ, ಬೆಳೆಸಲು ಖಾಸಗಿ ಶಿಕ್ಷಣ ಸಂಸ್ಥೆಗಳ ಶ್ರಮವು ಸ್ಮರಣಿಯ ಎಂದು ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಸಿದ್ದೇಶ್ವರ ಪದವಿ ಪೂರ್ವ ಕಾಲೇಜ್ ಸಭಾ ಭವನದಲ್ಲಿ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ 38ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು.   

ಶಿಕ್ಷಣಕ್ಷೇತ್ರದ ಅಭಿವೃದ್ಧಿ ಪಡೆಸಲು ಸರಕಾರವು ಸರಕಾರಿ ಶಾಲೆಗಳಿಗೆ ಅನೇಕ ಯೋಜನೆಗಳನ್ನು ನೀಡುತ್ತವತ್ತೀ ಯೋಜನೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಸರಕಾರ ಚಿಂತಿಸಬೇಕು. ದಶಮಾನ ಕಂಡ ಶಿಕ್ಷಣ ಸಂಸ್ಥೆಗಳು ಇಂದು  ಮುಚ್ಚುವ ಪರಿಸ್ಥಿತಿಯು ನಿರ್ಮಾಣವಾಗಿವೆ. ಏಳು-ಬೀಳುಗಳನ್ನು ಕಂಡ ಶಿಕ್ಷಣ ಸಂಸ್ಥೆಗಳನ್ನು ಎತ್ತಿಹಿಡಿಯುವ ಕಾರ್ಯ ಸರಕಾರ ಮಾಡಬೇಕಾಗಿದೆ ಎಂದರು.    

ಸಂಘದ ಅಧ್ಯಕ್ಷರಾದ ಪ್ರಭುಸ್ವಾಮಿಗಳು ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಿದ್ದೇಶ್ವರ ವಿದ್ಯಾವರ್ಧಕ ಸಂಘವು 72ವಸಂತಗಳನ್ನು ಮುಗಿಸಿ 75ನೇ ವರ್ಷಕ್ಕೆ ಅಮೃತ ಮಹೋತ್ಸವ ಆಚರಿಸಲು ಸಂಘವು ಉತ್ಸಾಹದಲ್ಲಿದೆ. ಮನುಷ್ಯನ ಉಜ್ವಲ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ಶಿಕ್ಷಣ ಕ್ಷೇತ್ರಕ್ಕಿರುವ ಮಹತ್ವ ಯಾವ ಕ್ಷೇತ್ರಕ್ಕೂ ಇಲ್ಲ. ಇಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ತುಂಬಾ ಕಷ್ಟಕರವಾಗಿದೆ ಎಂದರು.  

ಸಂಘದ ಕಾರ್ಯದರ್ಶಿ ವಿ ಜಿ ರೇವಡಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆಯಲ್ಲಿ  ವಿಷಯಗಳನ್ನು ಮಂಡಿಸಿದರು. ವೀರೇಂದ್ರ ಶೀಲವಂತ ಸ್ವಾಗತಿಸಿದರು.  ಪ್ರಾಚಾರ್ಯ ರವೀಂದ್ರ ನಾಯಕ ವಂದಿಸಿದರು. 

ಉಭಯ ಶ್ರೀಗಳು ಸಭೆಯ ಮೊದಲು, ರೂ.9ಲಕ್ಷ ವೆಚ್ದದ  ಬಿಸಿಯೂಟಕ್ಕಾಗಿ ನಿರ್ಮಿಸಲಾದ "ದಾಸೋಹ ಭವನ" ಉದ್ಘಾಟಿಸಿದರು. ಸಂಘದ ಸದಸ್ಯರು ಹಾಗೂ ಮಾಜಿ ಸಚಿವ ಎಸ್ ಆರ್ ಪಾಟೀಲ್, ರಾಮನಗೌಡ ಜಕ್ಕನಗೌಡ, ಜಿ ಎಮ್ ನಾಗರಾಳ, ಮುರಿಗೆಪ್ಪ ಅಂಗಡಿ, ಈರಯ್ಯ ಗೋಠೆ, ಶೇಖರೆಪ್ಪ ಮೋದಿ, ಸೋಮಶೇಖರ್ ಶಹಾಪೂರ, ಎಸ್ ಆರ್ ದಳವಾಯಿ, ಡಾ ಎಸ್ ಎಸ್ ಡಂಗಿ ಇತರರು ಇದ್ದರು.